ಅಪ್ಪಿ ತಪ್ಪಿಯೂ ಕೂಡ ಹನಿಮೂನ್ ಸಂದರ್ಭದಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಈ ಅಂಶಗಳನ್ನು ಫಾಲೋ ಮಾಡಿದರೆ ಮತ್ತೆ ಹನಿಮೂನ್ ಚೆನ್ನಾಗಿರುತ್ತದೆ. ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಕೂಡ ಪ್ರಮುಖವಾದಂತಹ ಹಾಗೂ ಬಹಳ ಸುಂದರವಾದಂತಹ ಘಟ್ಟವಾಗಿದೆ. ಹೀಗಾಗಿ ಇದರ ಕುರಿತಂತೆ ಮತ್ತು ಮದುವೆ ನಂತರದ ಜೀವನದ ಕುರಿತಂತೆ ಸಾಕಷ್ಟು ಕನಸುಗಳನ್ನು ಜೋಡಿಗಳು ಇಟ್ಟುಕೊಂಡಿರುತ್ತಾರೆ. ಮದುವೆ ನಂತರದ ಎಂದು ಹೇಳಿದ ತಕ್ಷಣ ಹನಿಮೂನ್ ಕೂಡ ಇದರಲ್ಲಿ ಸೇರ್ಪಡೆಯಾಗುತ್ತದೆ.

ಒಂದು ವೇಳೆ ಅರೆಂಜ್ ಮ್ಯಾರೇಜ್ ಆಗಿದ್ದರೆ ಹನಿಮೂನ್ ಎನ್ನುವುದು ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಪ್ರಶಸ್ತವಾದ ಸಮಯ ಎಂದು ಹೇಳಬಹುದಾಗಿದೆ. ಆದರೆ ಈ ಸಂದರ್ಭದಲ್ಲಿ ಜೋಡಿಗಳು ಮಾಡುವ ಕೆಲವು ತಪ್ಪು ಅವರ ಮದುವೆ ಜೀವನ ಅಥವಾ ಹನಿಮೂನ್ ಎನ್ನುವುದನ್ನು ಹಾಳು ಮಾಡಬಹುದಾಗಿದೆ. ಹಾಗಿದ್ದರೆ ಯಾವ ತಪ್ಪುಗಳನ್ನು ನಾವು ಸುಧಾರಿಸಿಕೊಳ್ಳಬೇಕು ಎಂಬುದರ ಕುರಿತಂತೆ ಇಂದಿನ ಲೇಖನಿಯಲ್ಲಿ ನಿಮಗೆ ಹೇಳುತ್ತೇವೆ ಬನ್ನಿ.

ಫೋನ್ ಹಾಗೂ ಸೋಶಿಯಲ್ ಮೀಡಿಯಾ ಗಳಿಂದ ದೂರವಿರಬೇಕು ಇತ್ತೀಚಿನ ದಿನಗಳಲ್ಲಿ ಜನರು 24 ಗಂಟೆ ಫೋನ್ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ನುಸುಳಿ ಕೊಂಡಿರುತ್ತಾರೆ. ನೀವು ನಿಮ್ಮ ಸಂಗಾತಿಯೊಂದಿಗೆ ಹನಿಮೂನ್ಗೆ ಹೋಗುವುದು ಕೇವಲ ಕೆಲವು ದಿನಗಳಿಗೆ ಮಾತ್ರ. ಅಲ್ಲಿ ನಿಮ್ಮ ಸಂಗಾತಿಯನ್ನು ಅರಿತುಕೊಳ್ಳಲು ಹಾಗೂ ನಿಮ್ಮ ಸಂಗಾತಿಯೊಂದಿಗೆ ಸುಂದರ ಕ್ಷಣವನ್ನು ಕಳೆಯಲು ಉತ್ತಮವಾದ ಅವಕಾಶಗಳು ಇರುತ್ತವೆ ಹಾಗೂ ಅಧಿಕಾರಿಗಳು ಸಾಕಷ್ಟು ಹಣವನ್ನು ಕೂಡ ಕರ್ಚು ಮಾಡಿರುತ್ತೀರಿ. ಇದರ ಪ್ರತಿಯೊಂದು ಮೌಲ್ಯವನ್ನು ಅರಿತು ನೀವು ನಿಮ್ಮ ಸಂಗಾತಿಯೊಂದಿಗೆ ಸಂಪೂರ್ಣ ಸಮಯವನ್ನು ಕಳೆಯಬೇಕು. ಈ ಸಂದರ್ಭದಲ್ಲಿ ನೀವು ನಿಮ್ಮ ಫೋನ್ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಅಂಟಿಕೊಂಡಿದ್ದರೆ ಕೆಟ್ಟ ಪರಿಣಾಮ ಬೀರಬಹುದು.

ಹವಾಮಾನಕ್ಕೆ ತಕ್ಕಂತೆ ಹನಿಮೂನ್ ಜಾಗವನ್ನು ಆಯ್ಕೆ ಮಾಡಬೇಕು ಪ್ರತಿಯೊಬ್ಬ ನವಜೋಡಿಗಳು ಕೂಡ ಇದರ ಕುರಿತು ಯೋಚಿಸಬೇಕು. ನೀವು ಹೋಗುವ ಜಾಗದ ಕುರಿತಂತೆ ಹಾಗೂ ಅಲ್ಲಿನ ಹವಾಮಾನದ ಕುರಿತಂತೆ ಅಧ್ಯಯನ ನಡೆಸಿದ ನಂತರವೇ ನೀವು ಅಲ್ಲಿಗೆ ಹೋಗಬೇಕು ಇಲ್ಲವಾದರೆ ಆ ಹವಾಮಾನ ನಿಮಗೆ ಸರಿ ಹೊಂದಿಲ್ಲವಾದರೇ ನೀವು ಆ ಹವಾಮಾನಕ್ಕೆ ಅಡ್ಜಸ್ಟ್ ಆಗುವಲ್ಲೇ ಸಮಯವನ್ನು ಕಳೆಯಬೇಕಾಗುತ್ತದೆ. ಹನಿಮೂನ್ ಅನ್ನೋ ಎಂಜಾಯ್ ಮಾಡುವುದಕ್ಕೆ ಆಗುವುದಿಲ್ಲ. ಇಷ್ಟು ಮಾತ್ರವಲ್ಲದೆ ಕೆಟ್ಟ ಹವಾಮಾನದಿಂದಾಗಿ ನಿಮಗೆ ಅಲ್ಲಿ ಹೋದ ನಂತರ ಆರೋಗ್ಯ ಸಮಸ್ಯೆಗಳು ಕೂಡ ತಲೆದೋರಬಹುದು. ಹೀಗಾಗಿ ಹವಾಮಾನದ ಕುರಿತಂತೆ ಜಾಗೃತಿ ವಹಿಸಬೇಕು.

ಸಂಗಾತಿಗೆ ಸರ್ಪ್ರೈಸ್ ಗಳನ್ನು ತಪ್ಪದೆ ನೀಡಿ ಸರ್ಪ್ರೈಸ್ ಗಳು ಎನ್ನುವುದು ಎಲ್ಲರಿಗೂ ಇಷ್ಟವಾಗುತ್ತದೆ. ಹೀಗಾಗಿ ನೀವು ಹನಿಮೂನ್ ಗೆ ಹೋದಾಗ ನಿಮ್ಮ ಸಂಗಾತಿಗೆ ಸರ್ಪ್ರೈಸ್ ಅನ್ನು ರೆಡಿ ಮಾಡಿ. ಇದರಿಂದಾಗಿ ಅವರು ನಿಮ್ಮ ಕುರಿತಂತೆ ಉತ್ತಮ ಭಾವನೆಗಳನ್ನು ಹೆಚ್ಚಿಸಿಕೊಳ್ಳುತ್ತಾರೆ ಮಾತ್ರವಲ್ಲದೆ ನಿಮ್ಮ ಜೀವನದಲ್ಲಿ ಅವರು ಸ್ಪೆಷಲ್ ಎಂಬ ಭಾವನೆಯನ್ನು ಕೂಡ ಅವರಲ್ಲಿ ಮೂಡಿಸುವಂತೆ ಮಾಡುತ್ತದೆ. ಹೀಗಾಗಿ ತಪ್ಪದೇ ಹನಿಮೂನ್ ಸಂದರ್ಭದಲ್ಲಿ ನಿಮ್ಮ ಸಂಗಾತಿಗೆ ಸರ್ಪ್ರೈಸ್ ಗಳನ್ನು ನೀಡಿ.

ಪಾರ್ಟ್ನರ್ ಜೊತೆಗೆ ಜಗಳ ಮಾಡಿಕೊಳ್ಳಬೇಡಿ ಮೊದಲೇ ಇದು ಹನಿಮೂನ್ ಹೊಸ ಜಾಗದಲ್ಲಿ ನೀವು ಇರುತ್ತೀರಿ. ಹೀಗಾಗಿ ನಿಮ್ಮ ಸಂಗಾತಿಯೊಂದಿಗೆ ಖಂಡಿತವಾಗಿ ಜಗಳ ಮಾಡಿಕೊಳ್ಳಬಾರದು. ಒಂದು ವೇಳೆ ಜಗಳ ನಡೆದರೂ ಕೂಡ ನಿಮ್ಮ ಸಂಗಾತಿಯ ಮಾತಿಗೆ ತಲೆಬಾಗಿ ಅಥವಾ ಜಗಳವನ್ನು ನಿಯಂತ್ರಿಸಲು ಏನು ಮಾಡಬಹುದು ಅದನ್ನು ಶಾಂತಿಯುತವಾಗಿ ಮಾಡಿ. ಇಲ್ಲದಿದ್ದರೆ ಖಂಡಿತವಾಗಿಯೂ ನೀವು ಹನಿಮೂನ್ ನಲ್ಲಿ ಎಂಜಾಯ್ ಮಾಡಲು ಸಾಧ್ಯವೇ ಇಲ್ಲ.

ಆರೋಗ್ಯದ ಕಡೆಗೆ ಗಮನ ನೀಡಿ ಹೊಸ ಜಾಗ ಜಾಗದ ಹವಾಮಾನ ಮತ್ತು ಹೊರಗಿನ ತಿಂಡಿಗಳು ನಿಮ್ಮ ಹನಿಮೂನ್ ಸಂದರ್ಭದಲ್ಲಿ ನಿಮಗೆ ಆರೋಗ್ಯ ಸಮಸ್ಯೆಗಳನ್ನು ನೀಡಬಹುದಾಗಿದೆ. ಹೀಗಾಗಿ ಸೂಚಿಸುವ ಕಡೆಯಲ್ಲಿ ಊಟವನ್ನು ಮಾಡಿ ಜಾಗದ ಹವಾಮಾನಕ್ಕೆ ತಕ್ಕಂತೆ ಬಟ್ಟೆಗಳನ್ನು ತೊಡಿ ಕೊಂಚವೇ ಆಯಾಸ ಅಥವಾ ಆರೋಗ್ಯ ಸಮಸ್ಯೆ ಕಂಡುಬಂದು ಹತ್ತಿರದಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿ ಅದನ್ನು ಸರಿ ಮಾಡಿಕೊಳ್ಳಿ. ಒಂದು ವೇಳೆ ಆರೋಗ್ಯದ ಸಮಸ್ಯೆ ನಿಮ್ಮನ್ನು ಸ್ಟ್ರಾಂಗ್ ಆಗಿ ಹಿಡಿದುಕೊಂಡರೆ ಅದು ನಿಮ್ಮ ಹನಿಮೂನ್ ಪ್ಲಾನಿಂಗ್ ಅನ್ನು ಪೂರ್ಣವಾಗಿ ಹಾಳುಗೆಡುವುತ್ತದೆ. ಹೀಗಾಗಿ ಈ ಮೇಲೆ ಹೇಳಿರುವ ಎಲ್ಲಾ ಅಂಶಗಳನ್ನು ನೀವು ನಿಮ್ಮ ಹನಿಮೂನ್ ಸಂದರ್ಭದಲ್ಲಿ ಪಾಲಿಸಿ ಹಾಗೂ ಸಂತೋಷದಿಂದ ನಿಮ್ಮ ಹನಿಮೂನ್ ಎಂಜಾಯ್ ಮಾಡಿ.