ಹೊಸವರ್ಷದ ವಿಶೇಷವಾಗಿ ಗಂಡನಿಗೆ ಚಮಕ್ ನೀಡಲು ಹೊರಟ ಹೆಂಡತಿ ಆದರೆ ಅವಳಿಗೆ ಆಗಿದ್ದೇನು ಗೊತ್ತಾ?? ನಿಂಗಿದು ಬೇಕಿತ್ತೆ ಎಂದ ನೆಟ್ಟಿಗರು.
ನಮಸ್ಕಾರ ಸ್ನೇಹಿತರೇ ಹೊಸವರ್ಷದ ಸಂಭ್ರಮಾಚರಣೆಯನ್ನು ಖಂಡಿತವಾಗಿ ನೀವೆಲ್ಲರೂ ಕೂಡ ಮಾಡಿರುತ್ತೀರಿ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡನಿಗೆ ಹೊಸವರ್ಷದ ಪ್ರಯುಕ್ತವಾಗಿ ಸರ್ಪ್ರೈಸ್ ನೀಡಲು ಹೋಗಿ ನಂತರ ಆಗಿದ್ದೇನು ಎಂದು ಕೇಳಿದರೆ ಖಂಡಿತವಾಗಿಯೂ ನಗುತ್ತೀರಿ. ಹೌದು ಫ್ರೆಂಡ್ಸ್ ಇದು ನಡೆದಿರುವುದು ತಮಿಳುನಾಡು ರಾಜ್ಯದ ಕೊಯಂಬತ್ತೂರು ಜಿಲ್ಲೆಯಲ್ಲಿ. ಮದುವೆಯಾಗಿ ಕೆಲವೇ ಸಮಯಗಳ ಆಗಿತ್ತು ಹಾಗಾಗಿ ಆ ಹೆಂಡತಿ ಹೊಸವರ್ಷವನ್ನು ಹೊಸ ರೀತಿಯಲ್ಲಿ ಆಚರಿಸಬೇಕೆಂಬ ಪ್ಲಾನ್ ಮಾಡುತ್ತಾಳೆ.
ಹೀಗಾಗಿ ತನ್ನ ಗಂಡನಿಗೆ ಈತನಿಗೆ ಆರೋಗ್ಯದ ಸಮಸ್ಯೆ ಇದೆ ಎಂದು ಹೇಳಿ ಬೇಗನೆ ಹೋಗಿ ತನ್ನ ರೂಮಿನಲ್ಲಿ ಮಲಗುತ್ತಾಳೆ. ಇತ್ತ ಗಂಡ ಹೊಸವರ್ಷದ ಪ್ರಯುಕ್ತವಾಗಿ ಟಿವಿಯಲ್ಲಿ ಬರುತ್ತಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಕೂಡ ನೋಡಿಕೊಂಡು ಕೂತಿರುತ್ತಾನೆ. ಈ ಕಡೆ ಹೆಂಡತಿ ಅಮೆಜಾನ್ನಲ್ಲಿ ಹಾವಿನ ಮಾದರಿ ಇರುವ ಸಾಕ್ಸ್ ಗಳನ್ನು ತನ್ನ ಕಾಲನಲ್ಲಿ ಹಾಕಿಕೊಂಡು ಗಂಡನಿಗೆ ತಮಾಷೆಯಾಗಿ ಹೆದರಿಸುವ ಯೋಚನೆಯಲ್ಲಿ ಇರುತ್ತಾಳೆ. ಆದರೆ ಮುಂದೆ ಇದು ಯಾವ ಪರಿಣಾಮ ಬೀರಬಹುದು ಎಂಬ ಯಾವ ಯೋಚನೆಯೂ ಕೂಡ ಅವಳಿಗೆ ಇರಲಿಲ್ಲ.

ಗಂಡ ಮಧ್ಯರಾತ್ರಿ ಸಮೀಪಿಸುತ್ತಿದ್ದಂತೆ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಿ ಕೊಂಡು ತನ್ನ ರೂಮಿಗೆ ಹೆಂಡತಿಯ ಬಳಿಗೆ ಮಲಗಲು ಬರುತ್ತಾನೆ. ಆ ಸಂದರ್ಭದಲ್ಲಿ ಕೋಣೆಯ ಲೈಟ್ ಹಾಕಿದಾಗ ಹೆಂಡತಿಯ ಕಾಲಿನಲ್ಲಿ ಹಾವು ಇರುವಂತೆ ಭಾಸವಾಗುತ್ತದೆ. ನಿಜವಾಗಿ ಅವುಗಳು ಹಾಗಿರಲಿಲ್ಲ ಬದಲಾಗಿ ಹಾವಿನಂತೆ ಇರುವ ಸಾಕ್ಷಿಗಳು ಆಗಿದ್ದವು. ಆದರೆ ಗಂಡನಿಗೆ ಇದರ ಕುರಿತಂತೆ ಗೊತ್ತಿರಲಿಲ್ಲ ಹೀಗಾಗಿ ದೊಣ್ಣೆ ತೆಗೆದುಕೊಂಡು ಬಂದು ಸರಿಯಾಗಿ ಹೊಡೆಯುತ್ತಾನೆ. ಗಂಡನಿಗೆ ತಮಾಷೆ ಮಾಡಲು ರೆಡಿಯಾಗಿದ್ದಂತಹ ಹೆಂಡತಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಅದಕ್ಕೆ ಹೇಳೋದು ಯಾವುದೇ ತಮಾಷೆಯನ್ನಾದರೂ ಕೂಡ ಅತಿರೇಕದಲ್ಲಿ ಮಾಡಬಾರದು ಎನ್ನುವುದಾಗಿ. ಖಂಡಿತವಾಗಿಯೂ ಈ ನೈಜ ಘಟನೆ ಹಲವಾರು ಮಡದಿಯರಿಗೆ ಒಂದು ಪಾಠವಾಗ ಬಹುದು ಎಂಬ ಅನಿಸಿಕೆ ನಮ್ಮದು.