ಈ ವರ್ಷ ಬರೋಬ್ಬರಿ 30 ವರ್ಷಗಳ ನಂತರ ತನ್ನ ರಾಶಿಗೆ ಪ್ರವೇಶ ಮಾಡಲಿರುವ ಶನಿ ದೇವಾ. ಯಾರ್ಯಾರಿಗೆ ಅದೃಷ್ಟ ಹೊತ್ತು ತರಲಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಹೊಸ ವರ್ಷ ಹೊಸ ಹೊಸ ವಿಚಾರಗಳನ್ನು ತರುವುದರ ಜೊತೆಗೆ ಜೀವನದಲ್ಲಿ ಕೂಡ ಹೊಸ ಹೊಸ ಅನುಭವಗಳನ್ನು ಕೂಡ ತರಲಿದೆ. ಇನ್ನು ಈಗ ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಿಳಿದುಬಂದ ವಿಚಾರದಲ್ಲಿ ಶನಿ ಗ್ರಹ 30 ವರ್ಷಗಳ ನಂತರ ತನ್ನ ರಾಶಿಯಾಗಿರುವ ಕುಂಭ ರಾಶಿಗೆ ಪಾದಾರ್ಪಣೆ ಮಾಡಲಿದೆ. ಬೇರೆ ಎಲ್ಲ ಗ್ರಹಗಳಿಗಿಂತ ಶನಿ ಗ್ರಹ ಸಾಕಷ್ಟು ಕಡಿಮೆ ವೇಗದಿಂದ ಇನ್ನೊಂದು ಗ್ರಹಕ್ಕೆ ಚಲನೆ ಮಾಡುತ್ತದೆ. ಮೂವತ್ತು ವರ್ಷಗಳ ನಂತರ ಶನಿಮಹದೇವ ತನ್ನ ಸ್ವಂತ ರಾಶಿಗೆ ಕಾಲು ಇಟ್ಟಿರುವುದರಿಂದಾಗಿ ಯಾವೆಲ್ಲ ರಾಶಿಯವರಿಗೆ ಶುಭ ಆಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಶನಿ ಗ್ರಹ ಕುಂಭ ರಾಶಿಯಲ್ಲಿ ಗೋಚರವಾಗುವುದು ಈ ವರ್ಷ ಸಾಕಷ್ಟು ಉತ್ತಮವಾದ ಲಾಭವನ್ನು ತರಲಿದೆ. ವೃಷಭ ರಾಶಿಯವರು ಈ ವರ್ಷದಲ್ಲಿ ಯಾವುದೇ ಕೆಲಸಕ್ಕೆ ಕೈಹಾಕಿದರು ಕೂಡ ಅವರಿಗೆ ಕೇವಲ ಲಾಭ ಮಾತ್ರ ಸಿಗುತ್ತದೆ. ಈ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸು ಕಂಡು ಬರಲಿದ್ದು ಎಲ್ಲದಕ್ಕಿಂತ ಹೆಚ್ಚಾಗಿ ನೀವು ಇಷ್ಟಪಡುವಂತಹ ಕೆಲಸಗಳು ನಿಮಗೆ ಸಿಗಲಿದೆ. ಇದಕ್ಕಿಂತ ಇನ್ನೇನು ಬೇಕು ಅಲ್ಲವೇ. ಕೆಲಸದಲ್ಲಿ ಕೂಡ ಸಹೋದ್ಯೋಗಿಗಳೊಂದಿಗೆ ಉತ್ತಮ ರೀತಿಯಲ್ಲಿ ಬಾಂಧವ್ಯವನ್ನು ಹೊಂದುತ್ತೀರಿ. ಅರ್ಧದಲ್ಲಿ ನಿಂತಿರುವ ಕೆಲಸಗಳು ಪೂರ್ಣಗೊಳ್ಳುತ್ತದೆ. ನೀವು ಮಾಡುವ ಎಲ್ಲಾ ಕೆಲಸಗಳನ್ನು ಕೂಡ ನಿಮಗೆ ಯಶಸ್ಸು ಕಾದಿರುತ್ತದೆ.

ಮಿಥುನ ರಾಶಿ, ಶನಿಯ ಗೋಚರ ಎನ್ನುವುದು ಈ ರಾಶಿಯವರಿಗೆ ಹೋದ ಸಾಕಷ್ಟು ಲಾಭದಾಯಕವಾಗಿದೆ. ಆದಾಯದ ಒಳಹರಿವು ಎನ್ನುವುದು ಕೂಡ ಸಾಕಷ್ಟು ಉತ್ತಮವಾಗಿರುತ್ತದೆ. ಹಲವಾರು ವರ್ಷಗಳನ್ನು ಯಾವುದಾದರೂ ಕಾರ್ಯ ನಿಂತು ಕೊಂಡಿದ್ದರೆ ಅದು ವೇಗವಾಗಿ ಪೂರ್ಣಗೊಳ್ಳುತ್ತದೆ. ವ್ಯಾಪಾರ ಹಾಗೂ ಕೆಲಸದ ಕ್ಷೇತ್ರದಲ್ಲಿ ಕೂಡ ಉನ್ನತಿಯನ್ನು ಸಾಧಿಸಲಿದ್ದೀರಿ. ವ್ಯಾಪಾರದಲ್ಲಿ ಯಾವುದಾದರೂ ಆರ್ಥಿಕ ಸಮಸ್ಯೆ ಇದ್ದರೂ ಕೂಡ ಅತಿಶೀಘ್ರವಾಗಿ ನಿವಾರಣೆಯಾಗಲಿದೆ.
ಸಿಂಹ ರಾಶಿ: ಸಿಂಹರಾಶಿಯವರು ಯಾವುದಾದರೂ ದೊಡ್ಡ ಕೆಲಸಕ್ಕಾಗಿ ತಯಾರಿಯನ್ನು ಮಾಡುತ್ತಿದ್ದರೆ ಆ ಕೆಲಸದಲ್ಲಿ ಶನಿ ದೇವರ ಕೃಪೆಯಿಂದಾಗಿ ಸಂಪೂರ್ಣ ವಿಜಯವನ್ನು ಸಾಧಿಸಲಿದ್ದೀರಿ. ನೀವು ಜೀವನ ಸಂಗಾತಿಯನ್ನು ಕೂಡ ಹುಡುಕುತ್ತಿದ್ದರೆ ನಿಮ್ಮ ಮನಸ್ಸಿಗೆ ಇಷ್ಟವಾಗುವಂತಹ ಜೀವನ ಸಂಗಾತಿ ನಿಮ್ಮ ಜೀವನದಲ್ಲಿ ಜೋಡಿಯಾಗಲಿದ್ದಾರೆ. ನಿಮ್ಮ ಕೆಲಸದ ವರಿಷ್ಠ ಅಧಿಕಾರಿಗಳೊಂದಿಗೆ ನಿಮ್ಮ ಸಂಬಂಧ ಎನ್ನುವುದು ಇನ್ನಷ್ಟು ವೃದ್ಧಿಯಾಗುತ್ತದೆ. ಈ ಹೊಸ ವರ್ಷ ಎನ್ನುವುದು ನಿಮ್ಮ ಜೀವನದಲ್ಲಿ ಹಿಂದೆಂದೂ ಕಂಡುಕೇಳರಿಯದ ಅಂತಹ ಯಶಸ್ಸನ್ನು ತಂದು ಕೊಡಲಿದೆ.

ಹೊಸವರ್ಷದ ಹಿನ್ನೆಲೆಯಲ್ಲಿ ಶನಿ ಕುಂಭ ರಾಶಿಯನ್ನು ಪ್ರವೇಶ ಮಾಡುತ್ತಿದ್ದ ಹಾಗೆಯೇ ಧನುರಾಶಿಯವರಿಗೆ ಶನಿ ಕಾಟ ಮುಕ್ತಿ ಕಾಣಬಹುದಾಗಿದೆ. ಅದೇ ರೀತಿ ಮೀನ ರಾಶಿಯವರಿಗೆ ಮೊದಲನೇ ಚರಣ ಪ್ರಾರಂಭವಾಗಲಿದೆ, ಕುಂಭ ರಾಶಿಯವರಿಗೆ ಎರಡನೇ ಚರಣ ಪ್ರಾರಂಭವಾಗಲಿದೆ. ಮಕರ ರಾಶಿಯವರಿಗೆ ಕೊನೆಯ ಚರಣ ಪ್ರಾರಂಭಗೊಳ್ಳಲಿದೆ. ಶನಿ ಮಹಾತ್ಮನ ಕ್ರಪೆ ಹಾಗೂ ಅವಕೃಪೆಗೆ ಒಳಗಾಗಿರುವವರ ರಾಶಿಯ ವಿವರಗಳು ಇಲ್ಲಿದ್ದು ಇದರಲ್ಲಿ ನಿಮ್ಮ ರಾಶಿ ಯಾವುದು ಎಂಬುದನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.