ತನ್ನ ಸ್ವಂತ ಮಗಳ ರೂಮಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ತಾಯಿ, ಆನಂತರ ನಡೆದ್ದದೇನು ಗೊತ್ತೇ?? ಬೇಕಿತ್ತಾ ನಿಮಗೆ ಇವೆಲ್ಲ??

3,361

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ನಿಮಗೆಲ್ಲಾ ತಿಳಿದಿರುವಂತೆ ಮಕ್ಕಳ ರೂಮಿನಲ್ಲಿ ಪೋಷಕರು ಯಾವತ್ತೂ ಕೂಡ ಸಿಸಿಟಿವಿ ಕ್ಯಾಮರಾಗಳನ್ನು ಇಡುವುದಿಲ್ಲ. ಆದರೆ ಇಲ್ಲೊಬ್ಬ ತಾಯಿ ಮಗಳ ರೂಮಿನಲ್ಲಿ ಸಿಸಿಟಿವಿ ಕ್ಯಾಮೆರಾ ವನ್ನು ಅಳವಡಿಸಿದ್ದರು. ಮಗಳ ರೂಮಿನಲ್ಲಿ ಸಿಸಿಟಿವಿ ಕ್ಯಾಮೆರಾ ಇಡಲು ಆಕೆ ಏನು ಮಾಡಿದ್ದಳು ನಂತರ ಆಕೆಗೆ ಕಂಡಿದ್ದೇನು ಎಲ್ಲಾ ವಿಷಯಗಳ ಕುರಿತಂತೆ ನಿಮಗೆ ವಿವರವಾಗಿ ಹೇಳಲಿದ್ದೇವೆ ತಪ್ಪದೆ ಕೊನೆಯವರೆಗೂ ಲೇಖನಿಯನ್ನು ಓದಿ.

ಹೌದು ಇಂದು ನಾವು ಹೇಳಲು ಹೊರಟಿರುವುದು ಅಸ್ಲೇ ಎನ್ನುವ ಅಮೆರಿಕದ ಮಹಿಳೆಯೊಬ್ಬರ ಜೀವನದ ಕುರಿತಂತೆ. ಅವರಿಗೆ ಇಬ್ಬರು ಮಕ್ಕಳಿದ್ದರು ಸದಾಕಾಲ ತುಂಟಾಟದಲ್ಲಿ ನಿರತರಾಗಿರುತ್ತಿದ್ದರು. ಅವರನ್ನು ನೋಡಿಕೊಳ್ಳುವುದೇ ಆಸ್ಲೇ ಗೆ ದೊಡ್ಡ ಕೆಲಸವಾಗಿತ್ತು. ಅಸ್ಲೇ ಕೇವಲ ಮಕ್ಕಳ ತುಂಟಾಟ ಕ್ಕಾಗಿ ಮಾತ್ರ ಸಿಸಿಟಿವಿ ಕ್ಯಾಮೆರಾವನ್ನು ಹಾಕಿರಲಿಲ್ಲ ಬದಲಾಗಿ ಆಕೆಯ ಮಗಳಿಗೆ ಪಿಟ್ಸ್ ಕಾಯಿಲೆ ಕೂಡ ಇತ್ತು. ಹೀಗಾಗಿ ಆಕೆ ಎಲ್ಲೆಂದರಲ್ಲಿ ಬಿದ್ದು ಬಿಡುತ್ತಿದ್ದಳು. ಹೀಗಾಗಿ ಡಾಕ್ಟರ್ ಮಗಳ ಮೇಲೆ ಎಲ್ಲಿದ್ದರೂ ನೀವು ನಿಗಾವಹಿಸಬೇಕು ಎಂಬುದಾಗಿ ಎಚ್ಚರಿಕೆ ನೀಡಿದ್ದರು.

ಯಾಕೆಂದರೆ ಆಸ್ಲೇ ಲ್ಯಾಬ್ ಟೆಕ್ನಿಷಿಯನ್ ಆಗಿರುವುದರಿಂದಾಗಿ ಸದಾಕಾಲ ತನ್ನ ಮಕ್ಕಳ ಕುರಿತಂತೆ ನಿಗಾ ವಹಿಸುವುದಕ್ಕೆ ಆಗುತ್ತಿರಲಿಲ್ಲ. ಒಮ್ಮೆ ಅವಳಿಗೆ ಬ್ಲಾಕ್ ಫ್ರೈಡೆ ಸೇಲ್ ನಲ್ಲಿ ಸಿಸಿಟಿವಿ ಕ್ಯಾಮೆರಾ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎಂಬುದಾಗಿ ತಿಳಿದುಬರುತ್ತದೆ. ಸಿಸಿಟಿವಿ ಕ್ಯಾಮೆರಾ ವನ್ನು ಮನೆಯಲ್ಲಿ ಅಳವಡಿಸಿದ್ದರೆ ಮಗಳ ಚಲನವಲನಗಳನ್ನು ಕೆಲಸದಲ್ಲಿ ಕೂತ್ಕೊಂಡು ನೋಡಬಹುದು ಎಂಬುದು ಆಲೋಚಿಸಿ ಅಳವಡಿಸುತ್ತಾಳೆ. ಆದರೆ ಇದರಿಂದ ಆಕೆಯ ತಲೆನೋವು ಇನ್ನಷ್ಟು ಜಾಸ್ತಿಯಾಗುತ್ತದೆ. ಯಾಕೆಂದರೆ ಒಂದು ದಿನ ಆಕೆಯ ಮನೆಯ ಒಂದು ಕೋಣೆ ಒಳಗಡೆಯಿಂದ ಯಾವುದು ಹಲೋ ಎನ್ನುವ ಶಬ್ದ ಕೇಳಿಬರುತ್ತದೆ.

ಆಸ್ಲೇ ಮಗಳು ಅಲ್ಲಿ ಹೋಗಿ ನೋಡಿದಾಗ ಯಾರೂ ಕೂಡ ಕಂಡು ಬರುವುದಿಲ್ಲ. ಎಲ್ಲ ಗೊಂಬೆಗಳನ್ನು ಎತ್ತಿ ನೋಡುತ್ತಾಳೆ ಗೊಂಬೆಗಳಿಂದ ಕೂಡ ವಾಯ್ಸ್ ಬರುತ್ತಿರಲಿಲ್ಲ. ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ಸಿಸಿಟಿವಿ ಕ್ಯಾಮೆರಾದಿಂದ ಧ್ವನಿ ಕೇಳಿಬರುತ್ತಿತ್ತು. ಹೌದು ಅವರು ಸಿಸಿಟಿವಿ ಕ್ಯಾಮೆರಾ ಹ್ಯಾಕ್ ಆಗಿತ್ತು. ಆ ಹ್ಯಾಕರ್ ಆಸ್ಲೇ ಮಗಳ ಬಳಿ ನಿಮ್ಮ ಅಮ್ಮನ ಮಾತನ್ನು ಕೇಳಬೇಡ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಹಾಳುಮಾಡು ಅಮ್ಮನಿಗೆ ಬಾಯಿಗೆ ಬಂದಂತೆ ಬೈದು ಹಾಗೆ ಹೀಗೆ ಎಂದು ಮನಬಂದಂತೆ ಮಾತನಾಡುತ್ತಿದ್ದ.

ಸ್ವಲ್ಪ ಹೊತ್ತು ಆಗುತ್ತಿದ್ದಂತೆ ಆ ಚಿಕ್ಕ ಹುಡುಗಿ ಕಿರುಚಿಕೊಂಡು ಓಡುತ್ತಾ ಬರುತ್ತಾಳೆ. ಯಾಕೆಂದರೆ ಆ ಹ್ಯಾಕರ್ ಆರೀತಿ ಮಾಡಿದ್ದ. ಇದನ್ನು ಗಮನಿಸಿದ ಆಕೆಯ ತಂದೆ ಆಸ್ಲೇ ಗೆ ಕರೆ ಮಾಡಿದ್ದ. ಆದರೆ ಆಕೆ ಕೆಲಸದಲ್ಲಿ ಬ್ಯುಸಿ ಇದ್ದ ಕಾರಣ ಗಂಡನ ಫೋನ್ ಅನ್ನು ಎತ್ತುವುದಿಲ್ಲ. ಪದೇಪದೇ ಫೋನ್ ಬರುತ್ತಿದ್ದ ಕಾರಣ ಫೋನ್ ಎತ್ತುತ್ತಾಳೆ. ಆಗ ಆಕೆಯ ಗಂಡ ನೀನೇನಾದರೂ ಫೋನ್ ಮಾಡಿ ಪ್ರಾಂಕ್ ಮಾಡಿದ್ಯಾ ಎನ್ನುವುದಾಗಿ ಕೇಳುತ್ತಾನೆ. ಆಗ ಹಾಕಿಲ್ಲ ಎಂದು ಹೇಳುತ್ತಾಳೆ ಅದಾದನಂತರ ಗಂಡ ನಡೆದಿರುವ ವಿಚಾರವನ್ನು ಆಕೆಗೆ ತಿಳಿಸುತ್ತಾನೆ. ಆಸ್ಲೇ ಗೆ ತಲೆ ಮೇಲೆ ಆಕಾಶ ಬಿದ್ದಂತೆ ಅನುಭವವಾಗುತ್ತದೆ. ಆಕೆ ಅರ್ಧದಲ್ಲಿಯೇ ಕೆಲಸವನ್ನು ಬಿಟ್ಟು ಮನೆಗೆ ಬರುತ್ತಾಳೆ.

ಮನೆಯಲ್ಲಿ ನಡೆದಿದ್ದನ್ನು ನೋಡಿದ ನಂತರ ಆಕೆ ಸಿಸಿಟಿವಿ ಕಂಪನಿಯವರಿಗೆ ಫೋನ್ ಮಾಡುತ್ತಾಳೆ ಆದರೆ ಅವರು ಫೋನ್ ಎತ್ತುವುದಿಲ್ಲ. ಆದರೆ ಮೂರು ದಿನಗಳ ನಂತರ ಒಂದು ವಿಚಿತ್ರವಾದ ಸುದ್ದಿ ಕೇಳಿ ಬರುತ್ತದೆ ಅದೇನೆಂದರೆ ಮೂರು ದಿನಗಳಿಂದಲೂ ಕೂಡ ಸಿಸಿಟಿವಿ ಕಂಪನಿ ಅವರು ಉತ್ತರ ನೀಡಲು ಪ್ರಯತ್ನ ಪಡುತ್ತಲೇ ಇದ್ದರಂತೆ. ಇಷ್ಟು ಮಾತ್ರವಲ್ಲದೆ ಆ ಕಂಪನಿಯವರು ನೀವು ಯಾಕೆ ಸೆಕ್ಯುರಿಟಿ ಕೋಡ್ ಹಾಕಿರಲಿಲ್ಲ ಎಂಬುದಾಗಿ ಕೂಡ ಕೇಳುತ್ತಾರೆ.

ಇದಕ್ಕೆ ಆಸ್ಲೆ ಹಾಗೂ ಅವಳ ಪತಿ ಕೂಡ ಕೋಪಗೊಂಡು ಉತ್ತರ ನೀಡುತ್ತಾರೆ. ಕಡಿಮೆ ಬೆಲೆಯಲ್ಲಿ ಸಿಕ್ಕಿತು ಎಂದು ತಗೊಂಡರು ಕೂಡ ಅದರಲ್ಲಿ ಸೆಕ್ಯೂರಿಟಿ ಕೊರತೆಗಳು ಮಾತ್ರ ಎದ್ದು ಕಾಣುತ್ತಿದ್ದವು ಎಂಬುದಾಗಿ ಕಥೆ ಮೂಲಕ ತಿಳಿಯುತ್ತದೆ. ಅದೇರೀತಿ ತಂತ್ರಜ್ಞಾನ ಎನ್ನುವುದು ಎಷ್ಟೇ ಮುಂದುವರೆದಿದ್ದರೂ ಕೂಡ ಈ ಹ್ಯಾಕರ್ ಗಳು ನಿಮ್ಮ ಖಾಸಗಿ ಜೀವನದಲ್ಲಿ ಕನ್ನ ಹಾಕುವುದು ಗ್ಯಾರಂಟಿ. ಹೀಗಾಗಿ ತಂತ್ರಜ್ಞಾನದಿಂದ ಕೇವಲ ನಮ್ಮ ಜೀವನ ಆಧುನಿಕ ಕಾಲಕ್ಕೆ ಅಪ್ಗ್ರೇಡ್ ಆಗುತ್ತದೆ ಎಂದು ತಿಳಿಯಬೇಕಾಗಿಲ್ಲ ಈ ತರಹ ಅಚಾತುರ್ಯಗಳು ಕೂಡ ನಡೆಯಬಹುದು.