ರಶ್ಮಿಕಾ ನಂತರ ಪುಷ್ಪ ಸಿನೆಮಾದ ಎರಡನೇ ಭಾಗಕ್ಕೆ ಮತ್ತೋರ್ವ ಕನ್ನಡತಿ ನಟಿಯಾಗಿ ಆಯ್ಕೆ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ 2021 ರಲ್ಲಿ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಚಿತ್ರವೆಂದರೆ ಅದು ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಪುಷ್ಪ ಚಿತ್ರ. ಕೇವಲ 16 ದಿನಗಳಲ್ಲಿ 200 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿತ್ತು ಅಲ್ಲುಅರ್ಜುನ್ ನಟನೆಯ ಪುಷ್ಪ ಚಿತ್ರ. ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ ಪ್ರತಿಯೊಂದು ಭಾಷೆಗಳಲ್ಲೂ ಕೂಡ ತನ್ನದೇ ಆದಂತಹ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದೆ ಪುಷ್ಪ ಚಿತ್ರ. ಅದರಲ್ಲೂ ಹಿಂದಿಯಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಡಬ್ಬಿಂಗ್ ಚಿತ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪುಷ್ಪ ಚಿತ್ರ ಪಡೆದುಕೊಂಡಿದೆ.

ಅಲ್ಲು ಅರ್ಜುನ್ ಜೊತೆಗೆ ಕನ್ನಡದ ಪ್ರತಿಭೆಗಳು ಕೂಡ ಪುಷ್ಪ ಚಿತ್ರದಲ್ಲಿ ಮಿಂಚಿದ್ದವು. ಮೊದಲನೇದಾಗಿ ನಾಯಕ ನಟಿಯಾಗಿ ಕೊಡಗಿನ ಕುವರಿ ರಶ್ಮಿಕ ಮಂದಣ್ಣ ನವರು ಸೂಪರ್ ಆಗಿ ನಟಿಸಿದ್ದಾರೆ. ಮತ್ತೊಬ್ಬ ಕನ್ನಡದ ಪ್ರತಿಭೆಯಾಗಿರುವ ಡಾಲಿ ಧನಂಜಯ್ ರವರು ಜಾಲಿ ರೆಡ್ಡಿ ಪಾತ್ರದಲ್ಲಿ ಖಳನಾಯಕನಾಗಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪುಷ್ಪ ಚಿತ್ರದ ಎರಡನೇ ಭಾಗದ ಕುರಿತಂತೆ ಸಾಕಷ್ಟು ನಿರೀಕ್ಷೆಗಳು ದೇಶದಾದ್ಯಂತ ಎದ್ದಿವೆ. ಪುಷ್ಪ ಚಿತ್ರದ ಎರಡನೇ ಭಾಗ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದ್ದು ಇದು ಮುಂದೆ ಹೋಗುವ ನಿರೀಕ್ಷೆ ಕೂಡ ಇದೆ. ಆದರೆ ಪುಷ್ಪ ಚಿತ್ರ ಈಗ ಸುದ್ದಿಯಾಗುತ್ತಿರುವುದು ಮುಂದಿನ ಭಾಗದಲ್ಲಿ ಕನ್ನಡ ಮೂಲದ ಇನ್ನೊಬ್ಬ ನಟಿ ಚಿತ್ರಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬುದರ ಕುರಿತಂತೆ.

ಹೌದು ಗೆಳೆಯರೇ ಮಂಗಳೂರು ಮೂಲದ ನಟಿಯಾಗಿರುವ ಕೃತಿ ಶೆಟ್ಟಿ ಅವರು ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಕುರಿತಂತೆ ಗಾಳಿಸುದ್ದಿಗಳು ಅಥವಾ ನಿಜವಾದ ಸುದ್ದಿಗಳು ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಇದರ ಕುರಿತಂತೆ ಈಗಾಗಲೇ ಕೃತಿ ಶೆಟ್ಟಿ ಅವರು ಕೂಡ ಪ್ರತಿಕ್ರಿಯಿಸಿದ್ದು ನನಗೆ ಯಾವುದೇ ಕರೆಗಳು ಚಿತ್ರದ ನಿರ್ದೇಶಕರಿಂದಾಗಲಿ ಅಥವಾ ನಿರ್ಮಾಪಕರಿಂದಾಗಲಿ ಬಂದಿಲ್ಲ. ಸುಕುಮಾರ್ ಅವರ ಚಿತ್ರಗಳಲ್ಲಿ ನಟಿಸಲು ನಾನು ಕಾತರಳಾಗಿದ್ದೇನೆ ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ಅವಕಾಶ ಸಿಕ್ಕರೆ ಇನ್ನಷ್ಟು ಖುಷಿಯಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ಈ ಸುದ್ದಿ ಎಷ್ಟರಮಟ್ಟಿಗೆ ನಿಜ ಎಂಬುದರ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಕೃತಿ ಶೆಟ್ಟಿ ಈಗಾಗಲೇ ಉಪ್ಪೇನ ಹಾಗೂ ಶಾಮ ಸಿಂಗರಾಯ ಚಿತ್ರಗಳಲ್ಲಿ ನಟಿಸಿ ಯಶಸ್ವಿ ನಟಿಯಾಗಿ ತೆಲುಗು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.