ಹಿಮಾಚಲದ ಹಿಮದ ನಡುವೆ ಭೂಗರ್ಭದಿಂದ ಅಕ್ಕಿ ಹಾಕಿದಾಗ ಅನ್ನವಾಗುವಷ್ಟು ಬಿಸಿಯಿರುವ ನೀರು ಉಕ್ಕಿಬರುತ್ತದೆ. ಯಾವುದು ಆ ಪುಣ್ಯ ಸ್ಥಳ ಗೊತ್ತೇ??

253

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪುರಾತನ ಗ್ರಂಥಗಳ ಅಥವಾ ಉಲ್ಲೇಖಗಳ ಪ್ರಕಾರ ಹಿಮಾಲಯದಲ್ಲಿ ಪರಶಿವ ವಾಸಿಸುತ್ತಾನೆ ಎಂಬ ಪ್ರತೀತಿ ಇದೆ. ಈ ಹಿಮಾಲಯ ಕರಗಿ ಇಲ್ಲಿಂದ ಕೊರೆಯುವಷ್ಟು ನೀರು ಬರಬಹುದು ಎಂದು ನಂಬಬಹುದು ಆದರೆ ಇಲ್ಲಿ ವರ್ಷದ 365 ದಿನ ಬಿಸಿ ನೀರು ಬರುತ್ತದೆ ಎಂದು ನಂಬಲು ಸಾಧ್ಯವೇ. ನೀವು ನಂಬಿ ಅಥವಾ ಬಿಡಿ ಸ್ನೇಹಿತರೆ ಇಲ್ಲಿ ಬಿಸಿ ನೀರು ಬರುವುದಂತೂ ಖಂಡಿತ ಎಂಬುದು ಸಾಬೀತಾಗಿದೆ. ಅದು ಕೂಡ ಕೇವಲ ಒಂದೇ ಸ್ಥಳದಲ್ಲಿ ಮಾತ್ರವಲ್ಲ ಬರೋಬ್ಬರಿ ಐದು ಸ್ಥಳಗಳಲ್ಲಿ ಎಂಬುದು ಮತ್ತೊಂದು ವಿಶೇಷ.

ಇದು ಉತ್ತರ ಭಾರತದ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಹಿಮಾಲಯದ ತಪ್ಪಲಿನಲ್ಲಿ ಕಂಡುಬರುತ್ತದೆ. ಇಲ್ಲಿ 5 ಬಿಸಿನೀರಿನ ಪವಿತ್ರ ಕುಂಡಗಳಿವೆ. ಪ್ರತಿಯೊಂದು ಕೊಂಡವು ಕೂಡ ದೇವಸ್ಥಾನದ ಪವಿತ್ರ ಕೆರೆಗಳಾಗಿವೆ. ಹೀಗಾಗಿ ಇದಕ್ಕೆ ಅದರದ್ದೇ ಆದಂತಹ ಪವಿತ್ರವಾದ ಹಾಗೂ ಐತಿಹಾಸಿಕ ಉಲ್ಲೇಖಗಳಿವೆ. ಇವೆಲ್ಲದರಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದದ್ದು ವಶಿಷ್ಟ ಕುಂಡ. ಇದು ಪ್ರವಾಸಿ ತಾಣಗಳಲ್ಲಿ ಪ್ರಸಿದ್ಧವಾಗಿರುವ ಅಂತಹ ಮನಾಲಿ ಸ್ಥಳದಿಂದ ಆರು ಕಿಲೋಮೀಟರ್ ದೂರದಲ್ಲಿರುವ ಕುಲು ಜಿಲ್ಲೆಯ ಬಿಯಾಸ್ ನದಿಯ ತಟದಲ್ಲಿದೆ.

ಈ ಬಿಸಿನೀರಿನ ಕುಂಡಕ್ಕೆ ಸಹಸ್ರಾರು ಭಕ್ತಾಭಿಮಾನಿಗಳು ಹಾಗೂ ಯಾತ್ರಿಗಳು ಭೇಟಿ ನೀಡುತ್ತಾರೆ. ಅತ್ಯಂತ ಕೊರೆಯುವ ಚಳಿಯಲ್ಲಿ ಬಿಸಿ ನೀರು ಸಿಗುತ್ತದೆ ಎಂದರೆ ಯಾರು ತಾನೆ ಬರೋದಿಲ್ಲ ಹೇಳಿ. ಇಲ್ಲಿ ಮಹಿಳೆಯರಿಗೆ ಸ್ನಾನ ಮಾಡಲು ವಿಶೇಷವಾದ ಹಾಗೂ ಪ್ರತ್ಯೇಕವಾದ ಕೊಠಡಿಗಳು ಕೂಡ ಇವೆ. ಕೊರೆಯುವ ಚಳಿಯಲ್ಲೂ ಕೂಡ ಪ್ರಾಕೃತಿಕ ಸಹಜವಾಗಿ ಇಲ್ಲಿ 110 ಡಿಗ್ರಿಯಿಂದ 120 ಡಿಗ್ರಿ ನಲ್ಲಿ ನೀರು ಬಿಸಿಯಾಗಿರುತ್ತದೆ. ಇನ್ನೊಂದು ಬಿಸಿನೀರಿನ ಕುಂಡವೆಂದರೆ ಅದು ಮಣಿಕರಣ. ಇದು ಕೂಡ ಕುಲು ನಗರದಿಂದ 45 ಕಿಲೋಮೀಟರ್ ದೂರದಲ್ಲಿರುವ ಪಾರ್ವತಿ ಹಿಮಚ್ಚಾದಿತ ಶಿಖರಗಳ ನಡುವೆ ಇರುವ ಪ್ರವಾಸ ನದಿಯ ದಡದಲ್ಲಿದೆ. ಆದರೆ ಇಲ್ಲಿ ಉಕ್ಕಿಬರುವ ಬಿಸಿನೀರು ಎಷ್ಟು ಬಿಸಿಯಾಗುತ್ತದೆ ಎಂದರೆ ಅಕ್ಕಿಕಾಳು ಹಾಕಿದರೆ ಅನ್ನ ಆಗುವುದಂತೂ ಖಂಡಿತ. ಅಷ್ಟರಮಟ್ಟಿಗೆ ತಾಪಮಾನ ಎನ್ನುವುದು ಉನ್ನತ ಮಟ್ಟದಲ್ಲಿರುತ್ತದೆ.

ಮತ್ತೊಂದು ಬಿಸಿನೀರಿನ ಕುಂಡ ಎನ್ನುವುದು ಮಂಡಿ ಜಿಲ್ಲೆಯಲ್ಲಿರುವ ತಟ್ಟಪಾನಿ. ತಟ್ಟಪಾನಿ ಎಂದರೆ ಬಿಸಿನೀರು ಎಂದೇ ಅರ್ಥ. ಇದು ಭಾರತದ ಸ್ವಿಟ್ಜರ್ಲ್ಯಾಂಡ್ ಎಂದೇ ಪ್ರಖ್ಯಾತವಾಗಿರುವ ಶಿಮ್ಲಾ ಪ್ರದೇಶದಿಂದ 50 ಕಿಲೋ ಮೀಟರ್ ದೂರದಲ್ಲಿದೆ. ಸಟ್ಲೆಜ್ ನದಿ ತೀರದಲ್ಲಿರುವ ತಟ್ಟಪಾನಿ ಬಿಸಿನೀರಿನ ಕುಂಡ ಎರಡು ಅವಳಿ ಬಿಸಿನೀರಿನ ಕುಂಡಗಳನ್ನು ಹೊಂದಿದೆ. ಆದರೆ ಬೇರೆ ಬಿಸಿನೀರಿನ ಕುಂಡಗಳನ್ನು ಹೋಲಿಸಿದರೆ ಇದು ಅತ್ಯಂತ ಚಿಕ್ಕವು ಎಂದು ಹೇಳಬಹುದಾಗಿದೆ.

ಮಗದೊಂದು ಬಿಸಿ ನೀರಿನ ಕುಂಡದ ಹೆಸರು ಖೀರ್ ಗಂಗಾ. ಇದಕ್ಕೆ ಹಿಂದೂ ಇತಿಹಾಸದ ಪ್ರಕಾರ ಸಾಕಷ್ಟು ಪವಿತ್ರವಾದಂತಹ ಮಾನ್ಯತೆ ಇದೆ. ಯಾಕೆಂದರೆ ಶಿವನ ಮಗನಾದ ಕಾರ್ತಿಕನ ಸಮಾಧಿ ಈ ಪ್ರದೇಶದಲ್ಲಿದೆ. ಸಾವಿರಾರು ವರ್ಷಗಳ ಇತಿಹಾಸ ಈ ಜಾಗಕ್ಕೆ ಇದ್ದು ಇಲ್ಲಿ ಬಿಸಿನೀರಿನ ನೊರೆ ಹಾಲಿನಂತೆ ಕಂಡುಬರುತ್ತದೆ ಇದಕ್ಕಾಗಿ ಇದನ್ನು ಖೀರ್ ಗಂಗಾ ಎಂದು ಎಲ್ಲರೂ ಕರೆಯುತ್ತಾರೆ.

ಕೊನೆಯ ಬಿಸಿನೀರಿನ ಕುಂಡದ ಹೆಸರು ಕಸೋಲ್ ಎಂದು. ಬೇರೆ ಬಿಸಿನೀರಿನ ಕುಂಡಗಳಿವೆ ಹೋಲಿಸಿದರೆ ಇದರ ತಾಪಮಾನ ಎನ್ನುವುದು ಅತ್ಯಂತ ಕಡಿಮೆ. ಭೂಮಿಯ ಗರ್ಭದಿಂದ ಸ್ವಾಭಾವಿಕ ಬಿಸಿನೀರು ಹೊರಬರುತ್ತಿರುವುದು ನಿಜವಾಗಿ ನಮ್ಮ ದೇಶದ ರಹಸ್ಯಮಯ ಹಿರಿಮೆ ಗಳಲ್ಲಿ ಒಂದು ಹೇಳಬಹುದು. ಈ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮ ರೋಗಗಳು ಕೂಡ ದೂರವಾಗುತ್ತವೆ ಎಂಬುದು ಇನ್ನೊಂದು ವಿಶೇಷವಾಗಿದ್ದು ಇಲ್ಲಿಗೆ ಲಕ್ಷಾಂತರ ಹಿಂದು ಯಾತ್ರಿಕರು ಬರುತ್ತಿರುತ್ತಾರೆ. ಇದು ನಮ್ಮ ನಾಡಿನ ಹಿರಿಮೆ ಎನ್ನುವುದು ನಾವು ನೆಚ್ಚಿಕೊಳ್ಳಬೇಕಾದ ಅಂತಹ ವಿಷಯ ಜೀವನದಲ್ಲಿ ಒಮ್ಮೆಯಾದರೂ ಕೂಡ ಇಲ್ಲಿ ಭೇಟಿ ನೀಡಬೇಕು.