ಬಾಲಯ್ಯನವರ ಸಿನಿಮಾದಲ್ಲಿ ವಿಲನ್ ಆಗಿ ನಟಿಸಲು ತನ್ನ ಹೀರೋ ಸಂಭಾವನೆಗಿಂತ ಹೆಚ್ಚಿನ ಸಂಭಾವನೆ ಪಡೆದ ದುನಿಯಾ ವಿಜಯ್ ಎಷ್ಟು ಕೋಟಿ ಗೊತ್ತಾ??

5,433

ನಮಸ್ಕಾರ ಸ್ನೇಹಿತರೇ ಪ್ರತಿಭೆ ಒಂದಿದ್ದರೆ ಸಾಕು ಫಲ ಎನ್ನುವುದು ಅಭಿಮಾನಿಗಳು ನೀಡುತ್ತಾರೆ ಎಂಬುದು ಹಲವಾರು ಬಾರಿ ಚಿತ್ರರಂಗದಲ್ಲಿ ಸಾಬೀತಾಗಿದೆ. ಅದಕ್ಕೆ ಜೀವಂತ ಉದಾಹರಣೆ ಎಂದರೆ ನಮ್ಮ ಕನ್ನಡ ಚಿತ್ರರಂಗದ ದುನಿಯಾ ವಿಜಯ್ ರವರು ಎಂದು ಹೇಳ ಬಹುದಾಗಿದೆ. ದುನಿಯಾ ವಿಜಯ್ ಅವರ ಕಪ್ಪು ಬಣ್ಣ ವಾಗಲಿ ಅಥವಾ ಕಡುಬಡತನ ವಾಗಲಿ ಅವರನ್ನು ಕನ್ನಡ ಚಿತ್ರರಂಗದಲ್ಲಿ ಬೆಳೆಯುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಯಾಕೆಂದರೆ ದುನಿಯಾ ವಿಜಯ್ ಅವರ ಬಳಿ ಕಲಾ ಸರಸ್ವತಿ ತಾಂಡವವಾಡುತ್ತಿದ್ದಳು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಫೈಟ್ ಮಾಸ್ಟರ್ ಆಗಿ ಸ್ಟಂಟ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ದುನಿಯಾ ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ದುನಿಯಾ ಚಿತ್ರರಂಗದ ಮಹಾನ್ ಯಶಸ್ಸಿನ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರ ಹಲವಾರು ಯುವ ಸಿನಿಮಾ ನಟರಿಗೆ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಸ್ಫೂರ್ತಿಯಾಗಿದೆ ಎಂದರೆ ಕೂಡ ತಪ್ಪಾಗಲಾರದು. ಇತ್ತೀಚಿಗೆ ಬಿಡುಗಡೆಯಾಗಿರುವ ಸಲಗ ಚಿತ್ರ ಕೂಡ ನಿರ್ದೇಶಕನಾಗಿ ದುನಿಯಾ ವಿಜಯ್ ಅವರನ್ನು ಕನ್ನಡ ಸಿನಿಮಾ ಜಗತ್ತಿಗೆ ಪರಿಚಯಿಸುತ್ತದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಈ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಸಲಗ ಚಿತ್ರ ಕೂಡ ಹೌದು.

ಇನ್ನು ಈಗ ದುನಿಯಾ ವಿಜಯ್ ರವರಿಗೆ ಕೇವಲ ಕನ್ನಡದಿಂದ ಮಾತ್ರವಲ್ಲದೆ ತೆಲುಗು ಚಿತ್ರರಂಗದಿಂದ ಕೂಡ ಅವಕಾಶ ಹುಡುಕಿಕೊಂಡು ಬಂದಿದೆ. ಹೌದು ಗೆಳೆಯರೇ ತೆಲುಗಿನ ಲೆಜೆಂಡ್ ನಟರಾದ ಬಾಲಯ್ಯ ರವರ 107ನೇ ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇದಕ್ಕೆ ಪಡೆಯುತ್ತಿರುವ ಸಂಭಾವನೆ ಕೂಡ ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳಿದೆ. ಕನ್ನಡದಲ್ಲಿ ಹೀರೋ ಆಗಿ ನಟಿಸಿದಾಗಲೂ ಕೂಡ ದುನಿಯಾ ವಿಜಯ್ ರವರು ಬರೋಬ್ಬರಿ ನಾಲ್ಕರಿಂದ ಆರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ತೆಲುಗಿನಲ್ಲಿ ಬಾಲಯ್ಯ ನವರ ಚಿತ್ರಕ್ಕೆ ವಿಲನ್ ಆಗಿ ನಟಿಸುತ್ತಿರುವುದಕ್ಕಾಗಿ ದುನಿಯಾ ವಿಜಯ್ ಅವರು ಬರೋಬ್ಬರಿ 7.5 ಕೋಟಿ ರೂಪಾಯಿಯ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ದುನಿಯಾ ವಿಜಯ್ ರವರ ಇಷ್ಟೊಂದು ವರ್ಷಗಳ ಸಿನಿಮಾ ತಪಸ್ಸಿಗೆ ಇದು ಪ್ರತಿಫಲಿಸಿದ ವರವಾಗಿದೆ ಎಂದು ಹೇಳಬಹುದಾಗಿದೆ.