ಕಲಿಯುಗವನ್ನು ಅಂತ್ಯ ಮಾಡಿ ಸತ್ಯ ಯುಗ ಆರಂಭಮಾಡಿ ಧರ್ಮ ಉಳಿಸುವ ಕಲ್ಕಿಯ ಕುದುರೆ ಈಗ ಎಲ್ಲಿದೆ ಗೊತ್ತೇ??

2,416

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಗವಾನ್ ಮಹಾವಿಷ್ಣುವಿಗೆ ಒಟ್ಟು ಹತ್ತು ಅವತಾರಗಳು. ಇದು ಪ್ರಾಚೀನ ಕಾಲದ ಪುರಾತನ ಎಲ್ಲ ಗ್ರಂಥಗಳಲ್ಲಿಯೂ ಕೂಡ ಉಲ್ಲೇಖವಾಗಿದೆ. ಯಾವಾಗೆಲ್ಲಾ ಅಧರ್ಮ ಜಾಸ್ತಿಯಾಗುತ್ತದೆಯೋ ಆವಾಗೆಲ್ಲಾ ಭಗವಾನ್ ಮಹಾವಿಷ್ಣು ಅವತಾರ ತಾಳುತ್ತಾನೆ ಎಂಬುದು ಅಂದಿನ ಕಾಲದಿಂದ ಇಂದಿನವರೆಗೂ ಕೂಡ ಪ್ರಚಲಿತದಲ್ಲಿದೆ. ಇನ್ನು ಈಗಾಗಲೇ ಒಂಬತ್ತು ಅವತಾರಗಳು ಮುಗಿದಿವೆ ಹತ್ತನೇ ಅವತಾರ ವಾಗಿರುವ ಕಲ್ಕಿ ಅವತಾರ ಇದೆ ಕಲಿಯುಗದಲ್ಲಿ ನಡೆಯಲಿದೆ ಎಂಬುದಾಗಿ ಕೂಡ ಪುರಾಣ ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ.

ಯಾವಾಗ ಕಲಿಯುಗದಲ್ಲಿ ಅಧರ್ಮ ಎನ್ನುವುದು ಮಿತಿಮೀರುತ್ತದೆ ಆಗ ಅಧರ್ಮಿಗಳನ್ನು ಮುಗಿಸಲು ಕಲ್ಕಿ ಕುದುರೆಯನ್ನೇರಿ ಬರುತ್ತಾನೆ ಎಂಬುದಾಗಿ ಹೇಳಲಾಗಿದೆ. ಪುರಾಣದಲ್ಲಿ ಕಲ್ಕಿ ಉತ್ತರ ಭಾರತದ ಶಾಂಬಾಲ ನಗರದಲ್ಲಿ ಜನಿಸಿ ಬರುತ್ತಾನೆ ಎಂಬುದಾಗಿ ಕೂಡ ಹೇಳಲಾಗಿದೆ. ಈಗ ನಡೆಯುತ್ತಿರುವ ಪಾಪ ಹಾಗೂ ನಿಸ್ವಾರ್ಥ ಭರಿತ ಜಗತ್ತನ್ನು ನೋಡಿದರೆ ಕಲಿಯುಗ ಅಂತ್ಯ ವಾಗುವುದಕ್ಕೆ ಹೆಚ್ಚು ದಿನಗಳು ಉಳಿದಿಲ್ಲ ಎಂಬಂತೆ ಭಾಸವಾಗುತ್ತದೆ. ಇನ್ನು ಆತನ ಕುದುರೆ ಕೂಡ ಈಗಾಗಲೇ ಭೂಮಿಯ ಮೇಲೆ ಇದೆ ಎಂಬುದಾಗಿ ಹೇಳಲಾಗುತ್ತಿದೆ. ಹಾಗಿದ್ದರೆ ಕಲ್ಕಿ ಅವತಾರದ ವಾಹನವಾಗಿರುವ ದೇವದತ್ತ ಕುದುರೆ ಎಲ್ಲಿ ಇದೆ ಎಂಬುದನ್ನು ಕೂಡ ನಾವು ಇಂದಿನ ಲೇಖನಿಯಲ್ಲಿ ನಿಮಗೆ ಹೇಳಿದ್ದೇವೆ.

ಹೌದು ಗೆಳೆಯರೆ ಕಲ್ಕಿಯ ವಾಹನವಾಗಿರುವ ದೇವದತ್ತ ಕುದುರೆ ರಾಜಸ್ಥಾನದ ಜೈಪುರದಲ್ಲಿದೆಯಂತೆ. ಇನ್ನು ಇದು ಈಗಾಗಲೇ ಜೀವಂತ ವಾಗಲಿದೆ ಎಂಬ ಸುದ್ದಿಗಳು ಹರಡುತ್ತಿವೆ. ಮಾರ್ಬಲ್ನಿಂದ ನಿರ್ಮಿತವಾಗಿರುವ ದೇವದತ್ತ ಕುದುರೆಯ ಮೂರ್ತಿ ಅನ್ನುವುದು ಜೈಪುರದಲ್ಲಿರುವ ಕಲ್ಕಿ ದೇವಸ್ಥಾನದಲ್ಲಿದೆ. ಇದರ ಗೊರಸಿನ ಲ್ಲಿರುವ ಬಿರುಕು ಎನ್ನುವುದು ಕಾಲಕ್ರಮೇಣವಾಗಿ ಮುಚ್ಚಿಕೊಳ್ಳುತ್ತಾ ಬರುತ್ತಿದೆ. ಇದು ಯಾವಾಗ ಮುಚ್ಚುತ್ತದೆಯೋ ಅಂದು ಶಾಂಬಾಲಾ ಗ್ರಾಮದಲ್ಲಿ ಕಲ್ಕಿಯ ಜನನವಾಗಿ ದೇವದತ್ತ ಕುದುರೆ ತನ್ನ ಸ್ವಾಮಿಯ ಬಳಿ ಹೋಗುತ್ತದೆ ಎಂಬ ನಂಬಿಕೆ ಇದೆ. ನಂತರ ಕಲ್ಕಿ ಈ ಕುದುರೆಯನ್ನೇರಿ ಅಧರ್ಮವನ್ನು ಮುಗಿಸಲಿದ್ದಾರೆ ಎಂಬುದಾಗಿ ಪುರಾಣಗಳಲ್ಲಿ ಉಲ್ಲೇಖಿತವಾಗಿದೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಮುಂದಿನ ದಿನಗಳಲ್ಲಿ ಅಥವಾ ಭವಿಷ್ಯದಲ್ಲಿ ನೋಡಬೇಕಾಗಿದೆ.