ಇದಪ್ಪ ಮಸ್ತ್ ಕೆಲಸ ಅಂದ್ರೆ, ಧಾರವಾಹಿ ವಿರುದ್ಧ ಸ್ಟೇಷನ್ ಮೆಟ್ಟಿಲೇರಿದ ವೀಕ್ಷಕರು ಯಾಕೆ ಗೊತ್ತೇ?? ಕಾರಣ ಕೇಳಿದರೆ ಭೇಷ್ ಅಂತೀರಾ.

8,881

ನಮಸ್ಕಾರ ಸ್ನೇಹಿತರೇ ಈಗಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ಕ್ಷಣಾರ್ಧದಲ್ಲಿ ವಿವಾದಗಳು ಬುಗಿಲೇಳುತ್ತವೆ ಹಾಗೂ ಅಷ್ಟೇ ವೇಗದಲ್ಲಿ ತಣ್ಣಗಾಗುತ್ತವೆ.ಇನ್ನು ಎಲ್ಲವನ್ನೂ ವೀಕ್ಷಿಸುವ ಜನರು ತಮಗೆ ಇಷ್ಟವಾಗದದ್ದು ಪ್ರಸಾರವಾದರೇ ಸಾಕು, ಜಾಲತಾಣಗಳಲ್ಲಿ ಟ್ರೆಂಡಿಂಗ್ ಶುರು ಮಾಡುತ್ತಾರೆ ಇಲ್ಲವೇ ಸ್ಟೇಷನ್ ಮೆಟ್ಟಿಲೇರುತ್ತಾರೆ. ಈಗ ಇಂತಹದೇ ಒಂದು ಘಟನೆ ತಮಿಳುನಾಡಿನ ಚೆನ್ನೈ ನಲ್ಲಿ ನಡೆದಿದೆ.

ತಮಿಳುನಾಡಿನ ಫೇಮಸ್ ಧಾರಾವಾಹಿ ಭಾಗ್ಯಲಕ್ಷ್ಮಿಗೆ ಹೆಚ್ಚಿನ ಅಭಿಮಾನಿಗಳಿದ್ದಾರೆ. ಈ ಧಾರಾವಾಹಿಯ ಪ್ರೋಮೋದಲ್ಲಿ ತೋರಿಸಿದ ಒಂದು ದೃಶ್ಯ ಈಗ ವಿವಾದಕ್ಕೆ ಕಾರಣವಾಗಿದೆ. ಪ್ರೋಮೋದಲ್ಲಿ ತೋರಿಸಿದ ಒಂದು ಆತ್ಮಹತ್ಯೆ ದೃಶ್ಯಕ್ಕೆ ವೀಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕರೊಬ್ಬರು ದೌರ್ಜನ್ಯ ನೀಡುತ್ತಿರುವ ದೃಶ್ಯವನ್ನು ವಿರೋಧಿಸಿ, ಅದರ ವಿರುದ್ದ ಚೆನ್ನೈ ಪೋಲಿಸ್ ಕಮಿಷನರೇಟ್ ಕಛೇರಿಯಲ್ಲಿ ದೂರೊಂದು ದಾಖಲಾಗಿದೆ. ಈ ದೃಶ್ಯವನ್ನ ಈಗಲೇ ಕತ್ತರಿಸಬೇಕೆಂದು ಹೇಳಿದ್ದಾರೆ.

ಧಾರಾವಾಹಿಗಳು ಜನಜೀವನವನ್ನ ಬದಲಾಯಿಸುವಂತಹ ದೃಶ್ಯಗಳನ್ನು ಪ್ರಸಾರ ಮಾಡಬೇಕೆ ಹೊರತು, ಜನಜೀವನಕ್ಕೆ ಮುಜುಗರವೊಡ್ಡುವ ದೃಶ್ಯಗಳನ್ನು ಪ್ರಸಾರ ಮಾಡಬಾರದೆಂದು ಆಗ್ರಹಿಸಿದ್ದಾರೆ. ಇದಕ್ಕೆ ಧಾರಾವಾಹಿ ತಂಡ ಸಹ ಸೂಕ್ತವಾಗಿ ಸ್ಪಂದಿಸಿದ್ದು ವಿವಾದಿತ ದೃಶ್ಯವನ್ನು ತೆಗೆಯಲು ಒಪ್ಪಿದೆ. ಇದರ ಜೊತೆ ಇನ್ನೆಂದು ಈ ಥರಹದ ದೃಶ್ಯಗಳನ್ನ ಪ್ರಸಾರ ಮಾಡುವುದಿಲ್ಲ ಎಂದು ಹೇಳಿದೆ. ಧಾರಾವಾಹಿಗಳನ್ನ ಮನೆಮಂದಿಯೆಲ್ಲಾ ಕೂತು ನೋಡುತ್ತಿರುತ್ತೇವೆ. ಹಾಗಾಗಿ ನಿರ್ದೇಶಕರು ಸಾಕಷ್ಟು ಸಾಮಾಜಿಕ ಕಳಕಳಿಯನ್ನಿಟ್ಟು ಕತೆಯನ್ನ ಹೆಣೆಯಬೇಕು. ಹಾಗೂ ನಿರ್ದೇಶಿಸಬೇಕು ಎಂದು ವೀಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಇತ್ತೀಚಿನ ಧಾರಾವಾಹಿಗಳು ಕೂಡ ಬಹುತೇಕ ಸಾಮಾಜಿಕ ಕಳಕಳಿಯನ್ನು ಮರೆತಿವೆ ಎಂದರೆ ತಪ್ಪಾಗಲಾರದು. ಕೆಲವೊಂದು ಧಾರಾವಾಹಿಗಳು ಮಾತ್ರ ಉತ್ತಮ ಸಂದೇಶ ನೀಡುತ್ತಿವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.