ನಿಮ್ಮ ಏರ್ಟೆಲ್ ನಲ್ಲಿ ನೆಟ್ವರ್ಕ್ ಹಾಗೂ ಇಂಟರ್ನೆಟ್ ಸ್ಲೋ ಆಗಿದ್ಯಾ?? ಹಾಗಿದ್ದರೆ ಕಂಪನಿ ಹೇಳಿದಂತೆ ಹೀಗೆ ಮಾಡಿ ಆಮೇಲೆ ಸ್ಪೀಡ್ ಜಾಸ್ತಿ ಆಗುತ್ತದೆ.
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಟೆಲಿಕಾಂ ಸಂಸ್ಥೆಗಳ ಪಟ್ಟಿಯಲ್ಲಿ ಏರ್ಟೆಲ್ ಕೂಡ ಅಗ್ರಪಂಕ್ತಿಯಲ್ಲಿ ಕಾಣಿಸುತ್ತಿದೆ. ಹಲವಾರು ವರ್ಷಗಳಿಂದ ಏರ್ಟೆಲ್ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ಒದಗಿಸುತ್ತ ಬಂದಿದೆ. ಏರ್ಟೆಲ್ ಸಂಸ್ಥೆ ತನ್ನ ಗ್ರಾಹಕರಿಗೆ ಅತ್ಯಂತ ವೇಗದ 4ಜಿ ಡೇಟಾ ಸೇವೆಯನ್ನು ನೀಡಿದರೂ ಕೂಡ ಕೆಲವು ಗ್ರಾಹಕರು ತಮ್ಮ ಫೋನ್ನಲ್ಲಿ ಇಂಟರ್ನೆಟ್ ವ್ಯವಸ್ಥೆ ಎನ್ನುವುದು ತೀರಾ ನಿಧಾನವಾಗಿದೆ ಎಂಬುದಾಗಿ ದೂರು ನೀಡುತ್ತಾರೆ.
ಇದಕ್ಕೆ ಈಗ ಏರ್ಟೆಲ್ ಸಂಸ್ಥೆ ಕಾರಣವನ್ನು ಕಂಡು ಹುಡುಕಿದೆ. ಅದೇನೆಂದರೆ ಏರ್ಟೆಲ್ ಗ್ರಾಹಕರು ಬಹುತೇಕ ಎಲ್ಲರೂ ಕೂಡ ಆಂಡ್ರಾಯ್ಡ್ ಬಳಕೆದಾರರಾಗಿದ್ದಾರೆ. ಇದರಲ್ಲಿ ಏಪಿಎನ್ ಸೆಟ್ಟಿಂಗ್ಗಳನ್ನು ಉಳಿಸಲಾಗುತ್ತಿಲ್ಲ. ಹೀಗಾಗಿ ಏರ್ಟೆಲ್ ಸಂಸ್ಥೆಯೇ ಎಪಿಎನ್ ಸೆಟ್ಟಿಂಗ್ ಗಳನ್ನು ಉಳಿಸಲು ಅವಕಾಶ ಮಾಡಿಕೊಡುತ್ತಿದೆ. ಅದಕ್ಕಾಗಿ ಕೆಲವೊಂದು ಮಾರ್ಗದರ್ಶನಗಳನ್ನು ಅನುಸರಿಸಬೇಕು. ಈ ಮಾರ್ಗವನ್ನು ಅನುಸರಿಸಿದರೆ ಸಾಕು ಖಂಡಿತವಾಗಿ ನಿಮ್ಮ ಇಂಟರ್ನೆಟ್ ಎನ್ನುವುದು 100% ಸ್ಪೀಡ್ ಆಗಿರುತ್ತದೆ.

ಆಂಡ್ರಾಯ್ಡ್ ಬಳಕೆದಾರರು ಎಸ್ಎಂಎಸ್ ಮೂಲಕ ಮಾಡುವುದಾದರೆ MO ಎಂದು ಟೈಪ್ ಮಾಡಿ 54321 ನಂಬರ್ಗೆ ಸೆಂಡ್ ಮಾಡಬೇಕು. ಆಗ ಸೆಟ್ಟಿಂಗ್ ಗಳೊಂದಿಗೆ ಏರ್ಟೆಲ್ ಸಂಸ್ಥೆ ಸಂದೇಶವನ್ನು ಕಳುಹಿಸುತ್ತದೆ. ಆಗ ನಾವು ಓಕೆ ಎಂದು ಕ್ಲಿಕ್ ಮಾಡಿದರೆ ಏರ್ಟೆಲ್ ನ ಹೊಸ ಎಪಿಎನ್ ಸೆಟ್ಟಿಂಗ್ಗಳನ್ನು ನಿಮ್ಮ ಫೋನಿನಲ್ಲಿ ಪಡೆಯಬಹುದಾಗಿದೆ. ಇದಾದ ನಂತರ ನಿಮ್ಮ ಫೋನನ್ನು ರೀಸ್ಟಾರ್ಟ್ ಮಾಡಿದರೆ ಸಾಕು ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಅಥವಾ ಏರ್ಟೆಲ್ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ನಿಮ್ಮ ಫೋನ್ ನಂಬರ್ ಅನ್ನು ನಮೂದಿಸಿದರೆ ಸಾಕು ಬರುವ ಎಸ್ಎಂಎಸ್ ಗೆ ಓಕೆ ಎಂದು ರಿಪ್ಲೈ ಮಾಡಿದರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಇದಲ್ಲದೆ ಮೂರನೇದಾಗಿ ಹಸ್ತಚಾಲಿತ ಎಪಿಎನ್ ಸೆಟ್ಟಿಂಗ್ ಮಾಡುವ ವಿಧಾನವೂ ಕೂಡ ಇದೆ. ಆದರೆ ಅದಕ್ಕೆ ಹೋಲಿಸಿದರೆ ನಾವು ಈ ಮೇಲೆ ಹೇಳಿರುವ ಎರಡು ವಿಧಾನಗಳು ಅತ್ಯಂತ ಸುಲಭವಾದದ್ದು. ಹೀಗಾಗಿ ನೀವು ಇದನ್ನೇ ಬಳಸುವುದು ಉತ್ತಮ.