ತನ್ನ ಕನಸಿನ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ, ಮದುವೆಯಾಗಲು ಹುಡುಗ ಹೇಗಿರಬೇಕಂತೆ ಗೊತ್ತೇ??

996

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಿಂದ ತನ್ನ ಸಿನಿಮಾ ಪಯಣವನ್ನು ಪ್ರಾರಂಭಿಸಿ ಈಗಾಗಲೇ ಭಾರತದ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಕೂಡ ಬಹುಬೇಡಿಕೆಯ ನಾಯಕ ನಟಿಯಾಗಿ ಮಿಂಚುತ್ತಿದ್ದಾರೆ ನಮ್ಮ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ರಶ್ಮಿಕ ಮಂದಣ್ಣ ನವರು ಈಗಾಗಲೇ ನಾಯಕ ನಟಿಯಾಗಿ ಕನ್ನಡ ತೆಲುಗು ತಮಿಳು ಹಿಂದಿ ಚಿತ್ರರಂಗಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚು ಹಾಗೂ ದೊಡ್ಡ ಮಟ್ಟದ ಸಾಧನೆ ಮಾಡಿರುವ ರಶ್ಮಿಕಾ ಮಂದಣ್ಣ ನವರ ಕುರಿತಂತೆ ಖಂಡಿತವಾಗಿ ಎಲ್ಲರೂ ಮೆಚ್ಚಲೇಬೇಕಾಗಿದ್ದು.

ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಕೂಡ ರಶ್ಮಿಕ ಮಂದಣ್ಣನವರು ಸದಾ ಆಕ್ಟಿವ್. ಈ ಸಂದರ್ಭದಲ್ಲಿ ರಶ್ಮಿಕ ಮಂದಣ್ಣ ನವರಿಗೆ ಅಭಿಮಾನಿಗಳು ನಿಮ್ಮನ್ನು ಮದುವೆ ಆಗುವ ಹುಡುಗ ಹೇಗಿರಬೇಕು ಎಂಬುದಾಗಿ ಅಭಿಮಾನಿಗಳು ಹೇಳಿದ್ದಾರೆ. ಹೀಗಾಗಿ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ನವರು ನನ್ನನ್ನು ಮದುವೆಯಾಗುವ ಹುಡುಗ ಹೇಗಿರಬೇಕು ಎಂಬುದರ ಕುರಿತಂತೆ ವಿವರಣೆಯನ್ನು ನೀಡಿದ್ದಾರೆ.

ರಶ್ಮಿಕ ಮಂದಣ್ಣ ನವರನ್ನು ಮದುವೆ ಆಗುವ ಹುಡುಗ ಅವರಿಗಿಂತ ಉದ್ದ ಇರಬೇಕು. ಯಾವತ್ತು ಸೀರಿಯಸ್ ಆಗಿರಬಾರದು ಅಂದರೆ ಕೋಪದಲ್ಲಿ ಇರಬಾರದು. ವಯಸ್ಸಿನ ಅಂತರ ಎಷ್ಟಿದ್ದರೂ ಪರವಾಗಿಲ್ಲ ನನ್ನ ಜೊತೆ ಸಮಯ ಕಳೆಯಬೇಕು ಹಾಗೂ ರೋಮ್ಯಾಂಟಿಕ್ ಆಗಿರಬೇಕು. ಧೂಮಪಾನವನ್ನು ಖಡ-ಖಂಡಿತವಾಗಿ ಮಾಡಲೇಬಾರದು. ಆತ ತುಂಬಾ ಒಳ್ಳೆಯವನಾಗಿರಬೇಕು ಹಾಗೂ ನನ್ನನ್ನು ಇಷ್ಟ ಪಡಬೇಕು. ಪ್ರಮುಖವಾಗಿ ಅವರ ನಡವಳಿಕೆ ನನಗೆ ಇಷ್ಟವಾಗಬೇಕು. ಕೊನೆಯದಾಗಿ ನನ್ನ ಇಷ್ಟದ ಬಗ್ಗೆ ಕೇಳದಿದ್ದರೂ ನನ್ನ ಬಳಿ ಎಂದಿಗೂ ಸುಳ್ಳನ್ನು ಮಾತ್ರ ಹೇಳಲೇಬಾರದು ಎಂಬುದಾಗಿ ಕಂಡೀಷನ್ ಹಾಕಿದ್ದಾರೆ ರಶ್ಮಿಕ ಮಂದಣ್ಣ ನವರು‌. ರಶ್ಮಿಕಾ ಮಂದಣ್ಣ ನವರ ಈ ಕಂಡೀಶನ್ ಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.