ರಂಗು ರಂಗೋಲಿ ಕಾರ್ಯಕ್ರಮದಲ್ಲಿ ಕುಣಿಯುವುದಕ್ಕೆ ರಾಧಿಕಾ ರವರು ಪಡೆದುಕೊಂಡಿರುವ ಸಂಭಾವನೆ ಎಷ್ಟು ಕೋಟಿ ಗೊತ್ತಾ?? ಯಪ್ಪಾ ಇಷ್ಟೊಂದಾ??

56,879

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪಾಶ್ಟಾತ್ಯ ದೇಶಗಳ ಆಚರಣೆಯಂತೆ ಹೊಸ ವರ್ಷದ ಆಚರಣೆ ಮುಗಿಲು ಮುಟ್ಟಿದೆ. ನಿಜ ಹೇಳಬೇಕು ಎಂದರೆ ಭಾರತೀಯ ಆಚರಣೆಯ ಹೊಸ ವರ್ಷದ ಆಚರಣೆಗಿಂತ ಒಂದು ಮಟ್ಟಕ್ಕೆ ಹೆಚ್ಚಾಗಿ ಭಾರತೀಯರು ಈ ಹೊಸ ವರ್ಷವನ್ನು ಅದ್ದೊರಿಯಾಗಿ ಸ್ವಾಗತ ಮಾಡಿದ್ದಾರೆ. ಇನ್ನು ಒಬ್ಬರಲ್ಲ ಇಬ್ಬರಲ್ಲ ಬಹುತೇಕ ಜನರು ತಮ್ಮದೇ ಆದ ಶೈಲಿಯಲ್ಲಿ ಹೊಸ ವರ್ಷವನ್ನು ಸ್ವಾಗತ ಮಾಡಿರುವುದು ವಿಶೇಷ. ಇನ್ನು ಇದಕ್ಕೆ ನಮ್ಮ ನೆಚ್ಚಿನ ವಾಹಿನಿಗಳು ಕೂಡ ಹೊರತಲ್ಲ.

ಹೌದು ಕನ್ನಡ ವಾಹಿನಿಗಳು ಕೂಡ ಹೊಸ ವರ್ಷದ ಸಮಯದಲ್ಲಿ ಪ್ರೇಕ್ಷಕರಿಗೆ ಭರ್ಜರಿಯಾಗಿ ಮನರಂಜನೆ ನೀಡುವುದನ್ನು ಮರೆತಿಲ್ಲ. ಪ್ರತಿ ವಾಹಿನಿಗಳು ಕೂಡ ಸಾಕಷ್ಟು ಕಷ್ಟ ಪಟ್ಟು, ಪ್ಲಾನ್ ಮಾಡಿ ಹೊಸ ವರ್ಷದ ಸಮಯದಲ್ಲಿ ಪ್ರೋಗ್ರಾಮ್ ಗಳನ್ನು ಮಾಡಿದ್ದಾರೆ. ಅದಕ್ಕೆ ಖರ್ಚು ಕೂಡ ಹಾಗೆ ಮಾಡಿದ್ದಾರೆ. ಇನ್ನು ನಮ್ಮ ನಿಮ್ಮೆಲ್ಲರ ನೆಚ್ಚಿನ ವಾಹಿನಿಯಾದ ಕಲರ್ಸ್ ಕನ್ನಡ ವಾಹಿನಿಯು ರಂಗು ರಂಗೋಲಿ ಕಾರ್ಯಕ್ರಮದ ಮೂಲಕ ಪ್ರೇಕ್ಷಕರ ಮನೆಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಕ್ರಮದಲ್ಲಿ ಹಲವಾರು ತಾರೆಗಳು ಬಂದು ಮನರಂಜನೆ ನೀಡಿ, ಡಾನ್ಸ್ ಮಾಡಿ, ಆಟ ಹಾಡಿ, ಪ್ರೇಕ್ಷಕರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದರು.

ಇನ್ನು ಈ ಕಾರ್ಯಕ್ರಮದಲ್ಲಿ ಹಲವಾರು ತಾರೆಯರು ಭಾಗವಹಿಸಿದ್ದರೂ ಕೂಡ ಪ್ರೇಕ್ಷಕರಿಗೆ ಅತಿ ಹೆಚ್ಚು ಇಷ್ಟವಾದದ್ದು ಮಾತ್ರ, ಕನ್ನಡದ ಒಂದು ಕಾಲದ ಟಾಪ್ ನಟಿ ರಾಧಿಕಾ ರವರ ಡಾನ್ಸ್ ಕಾರ್ಯಕ್ರಮ. ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ಹಾಗಾಗ್ಗೇ ಕಾಣಿಸಿಕೊಳ್ಳುತ್ತಿದ್ದರು ಕೂಡ ರಾಧಿಕಾ ರವರು ಸಿನೆಮಾದಂತೆಯೇ ಇಲ್ಲೂ ಕೂಡ ಅದ್ಭುತ ಡಾನ್ಸ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುವುದಕ್ಕೆ ರಾಧಿಕಾ ರವರು ತೆಗೆದುಕೊಂಡಿರುವ ಸಂಭಾವನೆ ಕೇಳಿದರೆ ಖಂಡಿತವಾಗಿ ನೀವು ಕೂಡ ಬೆಚ್ಚಿಬೀಳ್ತಿರಾ. ಹೌದು ಗೆಳೆಯರೆ ರಾಧಿಕಾ ರವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಹೊಸ ವರ್ಷದ ಕಾರ್ಯಕ್ರಮ ವಾಗಿರುವ ರಂಗು ರಂಗೋಲಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುವುದಕ್ಕೆ ಬರೋಬ್ಬರಿ ನಾಲ್ಕು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ