ನಿಜವಾಗಲೂ ಇನ್ನು ಮುಂದೆ ಮೀರಾ ಅನಿಕೇತ್ ಧಾರಾವಾಹಿಯಲ್ಲಿ ಬರುವುದಿಲ್ಲವೇ?? ಕೊನೆಗೂ ಸಿಕ್ತು ಅಧಿಕೃತ ಉತ್ತರ. ಏನಂತೆ ಗೊತ್ತೇ??

854

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಧಾರವಾಹಿಗಳು ಎಷ್ಟರಮಟ್ಟಿಗೆ ಪ್ರಭಾವವನ್ನು ಬೀರಿದೆ ಎಂಬುದನ್ನು ಕನ್ನಡ ಪ್ರೇಕ್ಷಕರು ಸಿನಿಮಾಗಳಿಗಿಂತ ಹೆಚ್ಚಾಗಿ ಧಾರವಾಹಿಗಳನ್ನು ಈಗ ಇಷ್ಟಪಡುವುದರ ಮೂಲಕ ಗೊತ್ತಾಗುತ್ತಿದೆ. ಈಗ ನಾವು ಮಾತನಾಡಲು ಹೊರಟಿರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿ ಕುರಿತಂತೆ. ಅನಿಕೇತ್ ಸಾಕೇತ್ ಮೀರಾ ಪಾತ್ರಗಳು ಕನ್ನಡಿಗರ ಮನಸ್ಸಿನಲ್ಲಿ ಹಚ್ಚ ಹಸುರಾಗಿ ಉಳಿದುಕೊಂಡಿದ್ದವು.

ಈ ದಾರವಾಹಿಯಲ್ಲಿರುವ ಪಾತ್ರಗಳು ನಿಜ ಜೀವನದಲ್ಲಿ ಕೂಡ ನಮ್ಮ ಜೊತೆಗೆ ಇದ್ದಾವೆ ಎನ್ನುವಷ್ಟರಮಟ್ಟಿಗೆ ಪ್ರೀತಿಯನ್ನು ನೀಡಿದ್ದರು. ಆದರೆ ಈಗ ಇಷ್ಟೊಂದು ಜನಪ್ರಿಯವಾಗಿರುವ ನಮ್ಮನೆ ಯುವರಾಣಿ ಧಾರವಾಹಿಯ ಪ್ರಮುಖ ಪಾತ್ರಗಳಾಗಿರುವ ಅನಿಕೇತ್ ಹಾಗೂ ಮೀರಾ ಪಾತ್ರಗಳ ಕುರಿತಂತೆ ಒಂದು ಆಶ್ಚರ್ಯಕರ ಮಾಹಿತಿ ಈಗ ಹೊರಬಂದಿದೆ. ಇದು ಖಂಡಿತವಾಗಿಯೂ ಧಾರವಾಹಿಯ ಅಭಿಮಾನಿಗಳಿಗೆ ದುಃಖವನ್ನು ನೀಡುವುದಂತೂ ಗ್ಯಾರಂಟಿ. ಈ ದಾರವಾಹಿಯಿಂದ ಈಗ ಅನಿಕೇತ್ ಹಾಗೂ ಮೀರಾ ಪಾತ್ರದಾರಿಗಳಾಗಿರುವ ದೀಪಕ್ ಗೌಡ ಹಾಗೂ ಅಂಕಿತ ಅಮರ್ ರವರು ಹೊರ ಬಂದಿದ್ದಾರಂತೆ.

ಇದು ಮೊದಮೊದಲಿಗೆ ಸುಳ್ಳುಸುದ್ದಿ ಎಂಬುದಾಗಿ ಅಂದುಕೊಳ್ಳಲಾಗಿತ್ತು ಆದರೆ ಈ ಕುರಿತಂತೆ ಅನಿಕೇತ್ ಹಾಗೂ ಮೀರಾ ಪಾತ್ರದಾರಿಗಳ ಆಗಿರುವ ದೀಪಕ್ ಗೌಡ ಹಾಗೂ ಅಂಕಿತ ಅಮರ್ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಪಾತ್ರಗಳಿಂದ ಹೊರಬರುವುದು ದುಖಃವಾಗಿದ್ದರು ಕೂಡ ಅನಿವಾರ್ಯವಾಗಿದೆ ಇಷ್ಟು ವರ್ಷ ನೀಡಿರುವ ಪ್ರೀತಿಗೆ ಧನ್ಯವಾದಗಳು ಎಂಬ ಅರ್ಥ ಬರುವಂತೆ ಪೋಸ್ಟ್ ಹಾಕಿದ್ದಾರೆ. ಸಾಕೇತ್ ಪಾತ್ರಧಾರಿಯಾಗಿರುವ ರಾಘವೇಂದ್ರರವರು ಕೂಡ ನಾನು ನನ್ನ ಕೋಳಿಮರಿ ಹಾಗೂ ಕತ್ತೆ ಮರಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ, ಧಾರವಾಹಿಯನ್ನು ನಿಲ್ಲಿಸಬಹುದು ಆದರೆ ಅದನ್ನೇ ನಂಬಿಕೊಂಡಿರುವ ನೂರಾರು ಜನರ ಕುಟುಂಬ ನಿರ್ವಹಣೆ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ನಮ್ಮನೆ ಯುವರಾಣಿ ಧಾರಾವಾಹಿ ಹೊಸ ರೂಪವನ್ನು ಪಡೆದುಕೊಳ್ಳಲಿದ್ದು ಸಪೋರ್ಟ್ ಮಾಡುವುದಾಗಿ ಪೋಸ್ಟ್ ಮಾಡಿದ್ದಾರೆ. ಆದರೆ ಇಬ್ಬರೂ ಕೂಡ ಯಾವ ಕಾರಣಕ್ಕಾಗಿ ಹೊರಬಂದಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಾಗಿದೆ