ಸುಖವಾಗಿ ಸಂಸಾರ ಮಾಡಿಕೊಂಡಿದ್ದ ಪತಿ, ತನ್ನ ಹೆಂಡತಿಯ ಈ ಫೋಟೋ ನೋಡಿದ ಕೂಡ ಡೈವೋರ್ಸ್ ನೀಡಿದ ಯಾಕೆ ಗೊತ್ತೇ??

11,101

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಆಧುನಿಕತೆ ಎನ್ನುವುದು ಜಗತ್ತನ್ನು ಸಾಕಷ್ಟು ದೊಡ್ಡ ಮಟ್ಟದಲ್ಲಿ ಆವರಿಸಿಕೊಂಡು ಎಲ್ಲವೂ ಕೂಡ ಯಾಂತ್ರಿಕವಾಗಿ ಬಿಟ್ಟಿದೆ ಎಂದರೆ ಖಂಡಿತವಾಗಿ ಅತಿಶಯೋಕ್ತಿಯಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರೊಂದು ಫೋಟೋವನ್ನು ನಾವು ನೋಡಿದರೆ ಅದರ ಹಿಂದೆ ಬೇರೆ ಅರ್ಥ ಇರುತ್ತದೆ ಎಂಬುದು ನಾವು ಊಹಿಸಿಕೊಳ್ಳುವುದಿಲ್ಲ ಆದರೆ ನಿಜವಾಗಿ ಅದರ ಹಿಂದೆ ಬೇರೆ ಅರ್ಥ ಇದ್ದೇ ಇರುತ್ತದೆ.

ಇಂದು ನಾವು ಹೇಳಲು ಹೊರಟಿರುವುದು ಪತ್ನಿಯ ಒಂದು ಫೋಟೋವನ್ನು ನೋಡಿ ಆಕೆಯ ಗಂಡ ಕೋಪಗೊಳ್ಳುತ್ತಾನೆ ಮಾತ್ರವಲ್ಲದೆ ವಿಚ್ಛೇದನವನ್ನು ಕೂಡ ಪಡೆದುಕೊಳ್ಳುತ್ತಾನೆ. ಹಾಗಿದ್ದರೆ ಅಷ್ಟಕ್ಕೂ ನಡೆದಿದ್ದಾದರೂ ಏನು ಎಂಬುದನ್ನು ಕೂಡ ನಿಮಗೆ ವಿವರವಾಗಿ ಹೇಳುತ್ತೇವೆ. ನಾವು ಮಾತನಾಡಲು ಹೊರಟಿರುವ ಕಥೆಯ ನಾಯಕ ಹಾಗೂ ನಾಯಕಿಯ ಹೆಸರು ಥಾಮಸ್ ಹಾಗೂ ಐರಿಸ್. ಇಬ್ಬರು ಕೂಡ ಹೊಸದಾಗಿ ಮದುವೆ ಆಗಿರುವವರು ತನ್ನ ಹೆಂಡತಿಗಾಗಿ ಹೆಚ್ಚಿನ ಸಮಯವನ್ನು ನೀಡಲು ತನ್ನ ಆಫೀಸ್ನಿಂದ ದೀರ್ಘವಾದ ರಜೆಯನ್ನು ಥಾಮಸ್ ಪಡೆದುಕೊಂಡಿದ್ದ.

ಇಷ್ಟೊಂದು ಅನ್ಯೋನ್ಯವಾಗಿದ್ದ ದಂಪತಿಗಳು ವಿವಾಹ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂದರೇ ನೋಡಿದವರಿಗೆ ಯಾರಿಗೂ ಕೂಡ ನಂಬಲು ಸಾಧ್ಯವಿಲ್ಲ. ಥಾಮಸ್ ರಫ್ತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣದಿಂದಾಗಿ ಯಾವಾಗಲೂ ಮನೆಯಿಂದ ಹೊರಗೆ ಇರಬೇಕಾಗಿತ್ತು. ಹೀಗಾಗಿ ಮೊದಲಿನಂತೆ ಹೆಂಡತಿಯನ್ನು ಪ್ರತಿದಿನ ನೋಡಲು ಸಾಧ್ಯವಾಗುತ್ತಿರಲಿಲ್ಲ. ವಾರಾಂತ್ಯಗಳಲ್ಲಿ ಕೂಡ ಆದರೆ ಈ ಕೆಲಸ ಇರುತ್ತಿತ್ತು. ಇನ್ನು ಐರಿಸ್ ಕೂಡ ಗಂಡನಿಗೆ ಕೆಲಸ ಮಾಡಲು ಯಾವಾಗಲೂ ಕೂಡ ಬೆಂಬಲ ನೀಡುತ್ತಿದ್ದಳು. ಆದರೆ ಥಾಮಸ್ ಗೆ ಮಾತ್ರ ಹೆಂಡತಿ ಜೊತೆಗೆ ಇರಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಬೇಸರ ಕಾಡುತ್ತಿತ್ತು.

ಹೀಗಾಗಿ ಥಾಮಸ್ ಒಂದು ನಿರ್ಧಾರಕ್ಕೆ ಬಂದಿದ್ದ. ಅದೇನೆಂದರೆ ಹೆಂಡತಿಗಾಗಿ ಇಂತಹ ಒಳ್ಳೆ ಸಂಭಾವನೆ ಪಡೆಯುವ ಕೆಲಸವನ್ನೇ ಬಿಡಲು ನಿರ್ಧರಿಸಿದ್ದ. ಯಾಕೆಂದರೆ ಆತನ ಪ್ರಕಾರ ಥಾಮಸ್ ಈಗಾಗಲೇ ಒಳ್ಳೆಯ ಮಟ್ಟದ ಸಂಭಾವನೆಯನ್ನು ಪಡೆದುಕೊಂಡಿದ್ದ ಉಳಿತಾಯ ಮಾಡಿರುವ ಹಣದಿಂದ ಮನೆಯನ್ನು ಕಟ್ಟಿಸಿ ಹೆಂಡತಿಯೊಂದಿಗೆ ಸದಾಕಾಲ ಜೀವಿಸಲು ನಿರ್ಧರಿಸಿದ್ದ. ಹೀಗಾಗಿ ಒಂದು ದಿವಸ ಆತ ಐರಿಸ್ ಗೆ ತಾನು ಕೆಲಸ ಬಿಡುವ ನಿರ್ಧಾರವನ್ನು ಸರ್ಪ್ರೈಸ್ ಆಗಿ ಹೇಳಲು ಸಜ್ಜಾಗಿದ್ದ. ಅಂದು ಶನಿವಾರ ಬಿಡುವು ಮಾಡಿಕೊಂಡು ರೂಮಿನಲ್ಲಿ ಬಂದು ಕುಳಿತುಕೊಂಡಿದ್ದ. ಆತ ಹೆಂಡತಿಯ ಬಳಿಗೆ ಹೋಗಲು ಇನ್ನು ಕೇವಲ ಎರಡು ದಿನಗಳು ಮಾತ್ರ ಉಳಿದಿದ್ದವು. ಆಗಾಗ ತನ್ನ ಹೆಂಡತಿಗೆ ಪ್ರೇಮ ಸಂದೇಶಗಳನ್ನು ಕೂಡ ಕಳಿಸಿಕೊಡುತ್ತಿದ್ದ.

ಥಾಮಸ್ ತನ್ನ ಜೀವನದ ಕುರಿತಂತೆ ಮುಂದಿನ ದಿನಗಳಲ್ಲಿ ಸಂತೋಷವಾಗಿ ತನ್ನ ಹೆಂಡತಿಯೊಂದಿಗೆ ಬಾಳಿ ಬದುಕುವ ಕನಸುಕಂಡಿದ್ದು ಅದು ನನಸಾಗುತ್ತಿದೆ ಎಂಬುದಾಗಿ ಖುಷಿಪಟ್ಟಿದ್ದ. ಅವನು ಕೆಲಸ ಬಿಟ್ಟು ಇನ್ನೂ ಮನೆಗೆ ಹೋಗುವುದಕ್ಕೆ ಕೇವಲ ಎರಡು ದಿನಗಳಷ್ಟೇ ಬಾಕಿ ಉಳಿದಿದ್ದವು. ಹೀಗಾಗಿ ತನ್ನ ಮುಂದಿನ ಜೀವನದಲ್ಲಿ ಸಾಕಷ್ಟು ರೋಮಾಂಚಿತನಾಗಿದ್ದೆ ಥಾಮಸ್. ಅದೇ ಸಮಯದಲ್ಲಿ ಆತನ ಪತ್ನಿ ತನ್ನ ಭಾವಚಿತ್ರವನ್ನು ಆತನಿಗೆ ಫೋನ್ ಸಂದೇಶದ ಮೂಲಕ ಕಳಿಸಿದ್ದಳು. ಅದನ್ನು ನೋಡಿದ ಥಾಮಸ್ ಕೂಡಲೇ ಉರಿದು ಬಿದ್ದ.

ಯಾಕೆಂದರೆ ಐರಿಸ್ ಕಳಿಸಿರುವ ಫೋಟೋ ಸಾಮಾನ್ಯವಾಗಿ ನೋಡಿದರೆ ಮಾಮೂಲಿ ಗಿಟಾರ್ ಇರುವಂತೆ ಆಕೆ ರೂಮಿನಲ್ಲಿ ಒಬ್ಬಳೇ ಕುಳಿತಿರುವಂತೆ ಕಾಣುತ್ತದೆ. ಆದರೆ ಈ ಭಾವಚಿತ್ರವನ್ನು ಸೂಕ್ಷ್ಮವಾಗಿ ನೋಡಿದರೆ ಮಂಚದ ಕೆಳಗಡೆ ಕಪ್ಪು ಕೈಗಳು ಕಾಣುವುದು ತೋರುತ್ತದೆ. ಅದರ ಅರ್ಥದಲ್ಲಿ ಆಕೆ ಬೇರೆಯವರೊಂದಿಗೆ ಬೇಡ ಸಂಬಂಧವನ್ನು ಹೊಂದಿದ್ದಾರೆ ಎಂಬುದಾಗಿದೆ.

ಹೆಂಡತಿ ಕುರಿತು ಸಾಕಷ್ಟು ಕನಸುಕಂಡಿದ್ದು ತಮಗೆ ಈ ಫೋಟೋವನ್ನು ನೋಡಿದ ನಂತರ ವೈವಾಹಿಕ ಜೀವನದ ಮೇಲೆ ಇರುವಂತಹ ಎಲ್ಲಾ ಭರವಸೆ ಹಾಗೂ ನಂಬಿಕೆಗಳು ಮುರಿದುಹೋಗುತ್ತದೆ. ಇದಾದ ಮರುಕ್ಷಣವೇ ಹೆಂಡತಿಯ ಜೊತೆಗೆ ಒಂಟಿ ಮನೆಯಲ್ಲಿ ಬಾಳುವ ಕನಸುಕಂಡಿದ್ದ ಥಾಮಸ್ ಕೋಪದಿಂದ ಹೆಂಡತಿಗೆ ವಿವಾಹ ವಿಚ್ಛೇದನವನ್ನು ನೀಡುತ್ತಾನೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಹಂಚಿಕೊಳ್ಳಿ.