ದಿನಕ್ಕೊಂದು ಟ್ವಿಸ್ಟ್, ಪ್ರೇಕ್ಷಕರಿಗೆ ಶಾಕ್ ನೀಡಿದ ಮತ್ತೊಂದು ಜೊತೆ ಜೊತೆಯಲಿ ಟ್ವಿಸ್ಟ್, ಇದು ಬೇಡವೇ ಬೇಡ ಎಂದ ನೆಟ್ಟಿಗರು. ಏನಂತೆ ಗೊತ್ತೇ??

884

ನಮಸ್ಕಾರ ಸ್ನೇಹಿತರೇ ಕನ್ನಡದ ಫೇಮಸ್ ಧಾರಾವಾಹಿ ಯಾವುದೆಂದರೇ ಅದು ಜೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆಜೊತೆಯಲಿ ಎಂಬ ಮಾತುಗಳು ಕೇಳಿ ಬರುತ್ತವೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕನ್ನಡತಿ ಧಾರಾವಾಹಿಗೆ ಆಗಾಗ ಇದು ಟಿ.ಆರ್.ಪಿ ವಿಷಯದಲ್ಲಿ ಪೈಪೋಟಿ ನೀಡುತ್ತಿರುತ್ತದೆ. ಆರ್ಯವರ್ಧನ್ ಹಾಗೂ ಅನು ಸಿರಿಮನೆ ನಡುವಿನ ವಯಸ್ಸಿನ ಅಂತರವನ್ನು ಮರೆತು ಪ್ರೀತಿಸುವ ಈ ಕತೆಗೆ ಶುರುವಾತಿನಿಂದಲೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಕಿರುತೆರೆಯಲ್ಲಿ ಇಂದಿಗೂ ನಂಬರ್ ಒನ್ ಆಗಿದೆ.

ಇನ್ನು ಈ ಧಾರಾವಾಹಿಯಲ್ಲಿ ಅನು ಹಾಗೂ ಆರ್ಯ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಇನ್ನೇನೂ ಸಂಸಾರ ಸಾಗಿಸುತ್ತಾರೆ ಅನ್ನುವ ವೇಳೆಗೆ ಈಗ ಧಾರಾವಾಹಿಯ ಕತೆಗೆ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಸಾಮಾನ್ಯವಾಗಿ ಹೀರೋ ಆದವನು ಸಡನ್ ಆಗಿ ವಿಲನ್ ಆದರೇ ನೋಡುವ ಪ್ರೇಕ್ಷಕ ಅದನ್ನು ಜೀರ್ಣಿಸಿಕೊಳ್ಳುವುದಿಲ್ಲ. ಅದೇ ರೀತಿಯ ಪ್ರಸಂಗ ಈಗ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಸಹ ಆಗಿದೆ.

ಕತೆಯಲ್ಲಿ ಆರ್ಯವರ್ಧನ್ ಗೆ ಬಹಳ ನಿಷ್ಠಾವಂತ ಎಂಬ ಪ್ರಾಮುಖ್ಯತೆ ನೀಡಲಾಗಿತ್ತು. ಅದೇ ರೀತಿ ಅನು ಸಿರಿಮನೆ ಗೂ ಸಹ ಅದೇ ಪ್ರಾಮುಖ್ಯತೆ ನೀಡಲಾಗಿತ್ತು. ಆದರೇ ಈಗ ಆರ್ಯವರ್ಧನ್ ಪಾತ್ರ ನೆಗೆಟಿವ್ ಶೇಡ್ ಪಡೆದುಕೊಳ್ಳುತ್ತಿದೆ.ಆರ್ಯವರ್ಧನ್ ಈ ಮೊದಲು ರಾಜನಂದಿನಿ ಎಂಬುವವರನ್ನು ಮದುವೆಯಾಗಿರುತ್ತಾರಂತೆ. ಅವಳ ಆಸ್ತಿ ತಾಯಿ ಶಾರದಾ ದೇವಿ ಮತ್ತು ಹರ್ಷನ ಹೆಸರಿನಲ್ಲಿ ಇರುತ್ತದೆ. ಅದನ್ನ ಹೊಡೆಯಲು ಈಗ ಆರ್ಯವರ್ಧನ್ ಸಂಚು ರೂಪಿಸುತ್ತಿದ್ದಾನೆ. ಈಗ ಪ್ರೇಕ್ಷಕರು ಈ ದೃಷ್ಯಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನೀವು ಜನತೆಗೆ ಯಾವ ಸಂದೇಶ ನೀಡುತ್ತಿದ್ದಿರಿ ಎಂದು ಕೇಳುತ್ತಿದ್ದಾರೆ. ಕತೆ ಸರಿ ದಾರಿಗೆ ಮರಳದಿದ್ದಲ್ಲಿ ಜೊತೆಜೊತೆಯಲಿ ಧಾರಾವಾಹಿ ಬಹಿಷ್ಕರಿಸುತ್ತೇವೆಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.