ಬಿಗ್ ನ್ಯೂಸ್: ಕೇವಲ ಬ್ಯಾಟ್ಸ್ ಮನ್ ಗಳಿಗೆ ಅಷ್ಟೇ ಅಲ್ಲಾ, ಇನ್ನು ಮುಂದೆ ಬೌಲರ್ ಗಳಿಗೂ ಕೂಡ ಫ್ರೀ ಹಿಟ್. ಹೇಗಿರಲಿಗೆ ಗೊತ್ತೇ ಬೌಲರ್ ಗಳ ಫ್ರೀ ಹಿಟ್??
ನಮಸ್ಕಾರ ಸ್ನೇಹಿತರೇ ಇಡೀ ವಿಶ್ವದಲ್ಲಿ ಫುಟ್ಬಾಲ್ ಹೊರತುಪಡಿಸಿದರೆ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಕ್ರೀಡೆಯೆಂದರೆ ಕ್ರಿಕೆಟ್ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು ಯಾಕೆಂದರೆ ಅಷ್ಟೊಂದು ಜನಪ್ರಿಯತೆಯನ್ನು ಖಂಡಗಳ ಎಲ್ಲೆಯನ್ನು ಮೀರಿ ದೇಶಗಳಲ್ಲಿ ವ್ಯಾಪಕವಾಗಿ ಹರಡಿದೆ. ಇನ್ನು ಆಗಾಗ ಕ್ರಿಕೆಟ್ನಲ್ಲಿ ನಿಯಮಗಳು ಬದಲಾಗುತ್ತಲೇ ಇರುತ್ತದೆ. ಇನ್ನು ಈಗ ನಾವು ಮಾತನಾಡಲು ಹೊರಟಿರುವುದು ನೋಬಾಲ್ ಕುರಿತಂತೆ. ಮೊದಲು ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಬೌಲರ್ ನೋಬಾಲ್ ಹಾಕಿದರೆ ಅದಕ್ಕೆ ಬ್ಯಾಟ್ಸ್ಮನ್ ಗೆ ಫ್ರೀ ಹಿಟ್ ಸಿಗುತ್ತಿತ್ತು. ನಂತರ ಇದನ್ನು ಏಕದಿನ ಕ್ರಿಕೆಟ್ ಗೆ ಕೂಡ ಪರಿಚಯಿಸಲಾಗಿತ್ತು.
ಆದರೆ ಈಗ ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಹೊಸ ರೂಲ್ಸ್ ಒಂದನ್ನು ತರಲು ಐಸಿಸಿ ಯೋಚಿಸಿದೆಯಂತೆ. ಬ್ಯಾಟ್ಸ್ ಮನ್ ಗಳಿಗೆ ಹೇಗೆ ಬೌಲರ್ಗಳು ನೋಬಾಲ್ ಹಾಕಿದಾಗ ಫ್ರೀ ಹಿಟ್ ಸಿಗುತ್ತದೆಯೋ ಹಾಗೆಯೇ ಬೌಲರ್ಗಳಿಗೆ ಕೂಡ ಫ್ರೀ ಹಿಟ್ ನೀಡುವ ಯೋಜನೆಯನ್ನು ಮಾಡುತ್ತಿದೆ. ಐಸಿಸಿ ನಿಯಮಗಳ ಪ್ರಕಾರ ಒಬ್ಬ ಬ್ಯಾಟ್ಸ್ಮನ್ ಔಟಾದ ನಂತರ ಇನ್ನೊಬ್ಬ ಬ್ಯಾಟ್ಸ್ಮನ್ ಕ್ರೀಸ್ ಗೆ ಬರಲು ಕೇವಲ 20 ಸೆಕೆಂಡ್ ಸಮಯವನ್ನು ತೆಗೆದುಕೊಳ್ಳಬೇಕು. ಆದರೆ ಇಂದಿನ ಸಮಯದಲ್ಲಿ ಬ್ಯಾಟ್ಸ್ಮನ್ಗಳು ಕ್ರೀಸಿಗೆ ಬರಲು ತಮಗೆ ಬೇಕಾದಂತಹ ಸಮಯವನ್ನು ತೆಗೆದುಕೊಳ್ಳುತ್ತಾರೆ. ಇದನ್ನು ಹತೋಟಿಗೆ ತರಲು ಐಸಿಸಿ ಹೊಸ ನಿಯಮಗಳನ್ನು ಜಾರಿಗೆ ತರಲಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್ ಬ್ಯಾಶ್ ಟೂರ್ನಮೆಂಟ್ ನಲ್ಲಿ ಪಂದ್ಯಗಳು ನಿಧಾನಗತಿಯಲ್ಲಿ ನಡೆದು ತಡವಾಗಿ ಮುಗಿಯುತ್ತಿದ್ದವು ಎಂಬುದಾಗಿ ಸುದ್ದಿಯಾಗಿತ್ತು. ಇದರ ಕುರಿತಂತೆ ಮೊದಮೊದಲಿಗೆ ಬೌಲಿಂಗ್ನಲ್ಲಿ ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದಾಗಿ ತಂಡದ ಕಪ್ತಾನ ಮೇಲೆ ದಂಡವನ್ನು ವಿಧಿಸುತ್ತಿದ್ದರು. ನಂತರ ಕೂಲಂಕುಷವಾಗಿ ಅಧ್ಯಯನ ಮಾಡಿದ ನಂತರ ಇದು ಬೌಲಿಂಗ್ನಿಂದ ತಡವಾಗುತ್ತಿಲ್ಲ ಬದಲಾಗಿ ಬ್ಯಾಟ್ಸ್ಮನ್ ಗಳಿಂದ ತಡವಾಗುತ್ತಿದೆ ಎಂಬುದಾಗಿ ತಿಳಿದುಬರುತ್ತದೆ.

ಹೌದು ಗೆಳೆಯರೆ ಬ್ಯಾಟ್ಸ್ಮನ್ಗಳು ಔಟಾದ ನಂತರ ಕ್ರೀಸಿಗೆ ಬರಲು ಸಾಕಷ್ಟು ಸಮಯಗಳು ಅಂದರೆ 2ನಿಮಿಷ ಕ್ಕಿಂತ ಅಧಿಕ ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಬೆಳಕಿಗೆ ಬರುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಈಗ ಬೌಲರ್ಗಳಿಗೆ ಕೂಡ ಫ್ರೀ ಹಿಟ್ ಅವಕಾಶವನ್ನು ನೀಡಲು ಯೋಚಿಸಿದೆ. ಇದರಿಂದಾಗಿ ಬ್ಯಾಟ್ಸ್ಮನ್ಗಳು ಕ್ರೀಸಿಗೆ ಬರಲು ವಿನಾಕಾರಣ ಸಮಯವನ್ನು ಹಾಳು ಮಾಡುವುದನ್ನು ತಪ್ಪಿಸಬಹುದು ಎಂಬ ಯೋಜನೆಯಾಗಿದೆ.
ಬ್ಯಾಟ್ಸ್ಮನ್ಗಳ ಫ್ರೀ ಹಿಟ್ ಬಗ್ಗೆ ನಿಮಗೆ ತಿಳಿದಿರಬಹುದು ಹಾಗಾದರೆ ಬೌಲರ್ಗಳ ಫ್ರೀ ಹಿಟ್ ಹೇಗಿರಬಹುದು ಎಂಬ ಯೋಚನೆ ನಿಮ್ಮಲ್ಲಿ ಬರಬಹುದು. ಅದಕ್ಕೂ ಕೂಡ ನಮ್ಮಲ್ಲಿ ಸರಿಯಾದ ಉತ್ತರವಿದೆ ಬನ್ನಿ ನಾವು ನಿಮಗೆ ಹೇಳುತ್ತೇವೆ. ಅದೇನೆಂದರೆ ಒಂದುವೇಳೆ ಬ್ಯಾಟ್ಸ್ಮನ್ ಕ್ರೀಸಿಗೆ ಎಪ್ಪತ್ತು ಸೆಕೆಂಡ್ ಒಳಗೆ ಬರದಿದ್ದರೆ ಬೌಲರ್ ಗೆ ಫ್ರೀ ಹಿಟ್ ಘೋಷಿಸಲಾಗುತ್ತದೆ. ಆಗ ಬ್ಯಾಟ್ಸ್ಮನ್ ನನ್ನು ಪಕ್ಕದಲ್ಲಿ ನಿಲ್ಲಿಸಲಾಗುತ್ತದೆ ನಂತರ ಬೌಲರ್ ಬಳಿ ವಿಕೆಟ್ಗೆ ಓಡಿಬಂದು ಬೌಲ್ ಮಾಡಲು ಹೇಳಲಾಗುತ್ತದೆ. ಒಂದು ವೇಳೆ ಆತ ಬೌಲ್ಡ್ ಮಾಡಿದರೆ ಔಟ್ ಎಂಬುದಾಗಿ ತೀರ್ಮಾನ ನೀಡಲಾಗುತ್ತದೆ.

ಒಂದು ವೇಳೆ ಬೌಲರ್ ಔಟ್ ಮಾಡಲು ವಿಫಲನಾದರೆ ಬ್ಯಾಟ್ಸ್ಮನ್ ಬಚಾವಾಗಬಹುದಾಗಿದೆ. ಇದನ್ನು ಮುಂದಿನ ಕೆಎಫ್.ಸಿ ಬಿಗ್ ಬಾಶ್ ಸರಣಿಯಲ್ಲಿ ಜಾರಿಗೆ ತರುವ ಎಲ್ಲಾ ಪ್ರಯತ್ನಗಳು ಕೂಡ ನಡೆಯುತ್ತಿದ್ದು ಒಂದು ವೇಳೆ ಇಲ್ಲಿ ಸಫಲವಾದರೆ ಐಸಿಸಿ ತನ್ನ ಮುಂದಿನ ಎಲ್ಲ ಪಂದ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ಟಿ-ಟ್ವೆಂಟಿ ಪಂದ್ಯಾಟಗಳಲ್ಲಿ ಈ ನಿಯಮವನ್ನು ಜಾರಿಗೆ ತರಬಹುದು ಅಂತಹ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.