ಏರ್ಟೆಲ್ ಗ್ರಾಹಕರಿಗೆ ತಾತ್ಕಾಲಿಕ ನೆಮ್ಮದಿ, ಹೊಸ ವರ್ಷದ ಅಂಗವಾಗಿ ಭರ್ಜರಿ ಆಫರ್, ಈ ಕೂಡಲೇ ರಿಚಾರ್ಜ್ ಮಾಡಿ ಹಾಗೂ ಪಡೆಯಿರಿ ಬಂಪರ್. ಏನು ಗೊತ್ತೇ??

17,313

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಸಂಸ್ಥೆಗಳು ಸಾಕಷ್ಟು ದರ ಏರಿಕೆ ಮಾಡಿರುವುದು ನೀವು ಸುದ್ದಿಮಾಧ್ಯಮಗಳಲ್ಲಿ ಕೇಳಿರುತ್ತೀರಿ ಮತ್ತು ನೀವು ಉಪಯೋಗ ಮಾಡುವುದರಲ್ಲಿ ಕೂಡ ಇದನ್ನು ನೀವು ಅನುಭವಕ್ಕೆ ಪಡೆದಿರುತ್ತೀರಿ. ಏರ್ಟೆಲ್ ವೊಡಾಫೋನ್ ಐಡಿಯಾ ಹಾಗೂ ಜಿಯೋ ಸಂಸ್ಥೆಗಳು ಕೂಡ ತಮ್ಮ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿಯನ್ನು ಮುಟ್ಟಿಸಿದ್ದವು. ಈ ಸಂದರ್ಭದಲ್ಲಿ ಏರ್ಟೆಲ್ ಸಂಸ್ಥೆ ತನ್ನ ಗ್ರಾಹಕರಿಗೆ ಕೊಂಚ ಮಟ್ಟದ ನಿರಾಳ ವನ್ನು ತರಲು ಪ್ರಯತ್ನಿಸಿದೆ.

ಸೇವೆಗಳ ದುಬಾರಿ ತನದಿಂದ ಗ್ರಾಹಕರನ್ನು ಹೊರತರಲು ಏರ್ಟೆಲ್ ಸಂಸ್ಥೆ ತನ್ನ ಗ್ರಾಹಕರಿಗೆ ರಿಯಾಯಿತಿಗಳನ್ನು ನೀಡಲು ಪ್ರಯತ್ನಿಸುತ್ತಿದೆ. ಇದರ ಮೊದಲ ಪ್ರಯತ್ನವಾಗಿ ಏರ್ಟೆಲ್ ಸಂಸ್ಥೆ ತನ ಗ್ರಾಹಕರಿಗೆ ಪ್ರೀಪೇಯ್ಡ್ ರಿಚಾರ್ಜ್ ಮೇಲೆ ಐವತ್ತು ರೂಪಾಯಿ ರಿಯಾಯಿತಿಯನ್ನು ನೀಡಲು ಮುಂದಾಗಿದೆ. ಹಾಗಿದ್ದರೆ ಇದು ಯಾವ ರೀಚಾರ್ಜ್ ನಲ್ಲಿ ಹಾಗೂ ಹೇಗೆ ದೊರಕುತ್ತದೆ ಎಂಬುದರ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ ತಪ್ಪದೇ ಲೇಖನಿಯನ್ನು ಕೊನೆಯವರೆಗೂ ಓದಿ. ಏರ್ಟೆಲ್ ಗ್ರಾಹಕರಿಗೆ ಐವತ್ತು ರೂಪಾಯಿ ರಿಯಾಯಿತಿಯನ್ನು ನೀಡುತ್ತಿದೆ ಆದರೆ ಇದು ಕೇವಲ ಏರ್ಟೆಲ್ ಥ್ಯಾಂಕ್ಯು ಅಪ್ಲಿಕೇಶನ್ ಬಳಕೆದಾರರಿಗೆ ಮಾತ್ರ ಎನ್ನುವುದು ಮತ್ತೊಂದು ಗಮನಿಸಬೇಕಾದ ಅಂತಹ ವಿಚಾರ.

ಈ ತರಹ ರಿಯಾಯಿತಿಯನ್ನು ನೀಡುವ ಮೂಲಕ ಗ್ರಾಹಕರು ಏರ್ಟೆಲ್ ಅಪ್ಲಿಕೇಶನ್ ಗೆ ಚಂದಾದಾರರಾಗುತ್ತಾರೇ ಎನ್ನುವ ಹೊಸ ಐಡಿಯಾ ಕೂಡ ಇಲ್ಲಿದೆ. ಹೆಚ್ಚುವರಿ ಡೇಟಾ ಕೂಪನ್ ಗಳನ್ನು ಕೂಡ ಏರ್ಟೆಲ್ ಸಂಸ್ಥೆ ನೀಡುತ್ತಿದೆ. Rs.599 ಪ್ರಿಪೇಯ್ಡ್ ರಿಚಾರ್ಜ್ ನಲ್ಲಿ ನಿಮಗೆ 50 ರೂಪಾಯಿ ರಿಯಾಯಿತಿ ದೊರಕುತ್ತದೆ. ಡಿಸ್ನಿ ಹಾಗೂ ಹಾಟ್ಸ್ಟಾರ್ ಗಳಂತಹ ಒಟಿಟಿ ಅಪ್ಲಿಕೇಶನ್ ಗಳ ಉಪಯೋಗ ಕೂಡ ಮಾಡಬಹುದಾಗಿದೆ. 28 ದಿನಗಳವರೆಗೆ ದಿನಕ್ಕೆ 3 ಜಿಬಿ ಡೇಟಾ ಕೂಡ ಸಿಗುತ್ತದೆ. 50 ರೂಪಾಯಿ ರಿಯಾಯಿತಿ ದರವನ್ನು ಕಡಿತಗೊಳಿಸಿ ಕೇವಲ 549 ರೂಪಾಯಿ ಗೆ ಈ ಪ್ಲ್ಯಾನ್ ದೊರಕುತ್ತದೆ. ಇನ್ನೊಂದು 549 ರೂಪಾಯಿ ರೀಚಾರ್ಜ್ ಪ್ಲ್ಯಾನ್ 56 ದಿನಗಳವರೆಗೆ ದೈನಂದಿನ 2gb ಡೇಟಾವನ್ನು ನೀಡಿ ನೂರು ಮೆಸೇಜುಗಳನ್ನು ಕೂಡ ನೀಡುತ್ತದೆ. ಅನಿಯಮಿತ ಕರೆ ಹಾಗೂ 4gb ಡೇಟಾ ಕೂಪನ್ ಕೂಡ ಸಿಗುತ್ತದೆ. ನೀವು ಏರ್ಟೆಲ್ ಚಂದಾದಾರರಾಗಿದ್ದರೆ ಈ ರಿಚಾರ್ಜ್ ಪ್ಲಾನ್ ವಿವರಗಳು ನಿನಗೆ ಉಪಯೋಗಕರ ವಾಗಬಹುದು .