RRR ಚಿತ್ರದ ಪ್ರಮೋಷನ್ ಗಾಗಿ ಖರ್ಚು ಮಾಡಿರುವ ಹಣ ಎಷ್ಟು ಕೋಟಿ ಗೊತ್ತಾ?? ಇನ್ನು ಒಂದು ಸಿನೆಮ ಮಾಡಬಹುದಾಗಿತ್ತು ಅಲ್ಲವೇ??

450

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಚಿತ್ರರಂಗದಲ್ಲಿ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರಾಗಿ ರುವ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮರಾಜು ರವರ ಜೀವನಾಧಾರಿತ ಕಥೆಯನ್ನು ಹೊಂದಿರುವ ಚಿತ್ರವಾಗಿದೆ ಆರ್ ಆರ್ ಆರ್. ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ಬಾಹುಬಲಿಗೆ ಅಧಿಕ ನಿರೀಕ್ಷೆಯನ್ನು ಹೊಂದಿದೆ. ಚಿತ್ರ ಬರೋಬ್ಬರಿ 400 ಕೋಟಿ ಬಜೆಟ್ ನಲ್ಲಿ ಮೂಡಿ ಬಂದಿದೆ.

ನಾಯಕನಟರಾಗಿ ಜೂನಿಯರ್ ಎನ್ಟಿಆರ್ ಹಾಗೂ ರಾಮಚರಣ್ ನಾಯಕಿ ಆಲಿಯಾ ಭಟ್ ಈಗಾಗಲೇ ದೇಶದ ವಿವಿಧ ಭಾಗಗಳಿಗೆ ಈಗಾಗಲೇ ಪ್ರಮೋಷನ್ ಮಾಡಿ ಬಂದಿದ್ದಾರೆ. ಈಗಲೂ ಕೂಡ ಚಿತ್ರದ ಪ್ರಮೋಷನ್ ಚಟುವಟಿಕೆಗಳು ದೇಶದ ನಾನಾ ಭಾಗಗಳಲ್ಲಿ ನಡೆಯುತ್ತಿದೆ. ಚಿತ್ರ ಇದೇ ಜನವರಿ 7ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ. ಹೀಗಾಗಿ ರಾಜಮೌಳಿಯವರು ಪ್ರಮೋಷನ್ ಕೂಡ ಹೇಗೆ ಮಾಡಬೇಕೆಂಬುದನ್ನು ಪ್ಲಾನ್ ಮಾಡಿ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಈಗಾಗಲೇ ಮುಂಬೈ ಚೆನ್ನೈ ಕೊಚ್ಚಿ ಬೆಂಗಳೂರು-ಹೈದರಾಬಾದ್ ಹೀಗೆ ದೇಶದ ನಾನಾ ಭಾಗಗಳಿಗೆ ಚಿತ್ರದ ಕಾರ್ಯಕ್ರಮವನ್ನು ಚಿತ್ರತಂಡ ನಡೆಸಿದೆ. ಇಷ್ಟು ಮಾತ್ರವಲ್ಲದೆ ಹಿಂದಿಯ ಬಿಗ್ ಬಾಸ್ ಕಪಿಲ್ ಶರ್ಮಾ ಶೋ ಪ್ರೊ ಕಬಡ್ಡಿ ಕಾರ್ಯಕ್ರಮ ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಕೂಡ ಪ್ರಮೋಷನ್ ಮಾಡಿದ್ದಾರೆ ರಾಜಮೌಳಿ ನೇತೃತ್ವದ ಚಿತ್ರತಂಡ.

ಚಿತ್ರಕ್ಕೆ ಕೋಟ್ಯಾಂತರ ರೂಪಾಯಿ ಸುರಿದಂತೆ ಅದರ ಪ್ರಮೋಷನ್ ಗೆ ಕೂಡ ನಿರ್ಮಾಪಕರು ಕೋಟ್ಯಾಂತರ ರೂಪಾಯಿ ಸುರಿದಿದ್ದಾರೆ. ಕೆಲವರು ಹೇಳುವ ಪ್ರಕಾರ ಆರ್ ಆರ್ ಆರ್ ಚಿತ್ರದ ಪ್ರಮೋಷನ್ ಗೆ ಸುರಿದಿರುವ ಹಣದಲ್ಲಿ ಒಂದು ಚಿತ್ರವನ್ನು ನಿರ್ಮಾಣ ಮಾಡಬಹುದಂತೆ. ಬರೋಬ್ಬರಿ 24 ಕೋಟಿ ರೂಪಾಯಿ ಹಣವನ್ನು ಪ್ರಮೋಷನ್ ಗಾಗಿ ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಹಲವಾರು ಸುದ್ದಿಗೋಷ್ಠಿ ಯುಟ್ಯೂಬ್ ಚಾನೆಲ್ ಗಳಲ್ಲಿ ಕೂಡ ಸಂದರ್ಶನವನ್ನು ನೀಡಿದ್ದಾರೆ. ಪ್ರತಿಯೊಂದು ಪ್ರಮೋಷನ್ ಚಟುವಟಿಕೆಗಳನ್ನು ರಾಜಮೌಳಿಯವರೇ ರೆಡಿ ಮಾಡಿದ್ದಾರೆ ಹೀಗಾಗಿ ಅದು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಜನವರಿ 7ರಂದು ನಾವು ನೋಡಬೇಕಾಗಿದೆ.