ನಡುರಾತ್ರಿ ಕುಡಿದು ಗಲಾಟೆ ಮಾಡಿದ ದಿವ್ಯ ಸುರೇಶ್ ಪ್ರಕರಣದಲ್ಲಿ ಮತ್ತೊಂದು ತಿರುವು, ನಿಜವಾಗಲೂ ಅಲ್ಲಿ ನಡೆದದ್ದು ಏನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ರವರು ಸಾಕಷ್ಟು ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ಮೊದಮೊದಲು ಬಿಗ್ ಬಾಸ್ ಕನ್ನಡ ಸೀಸನ್ 8 ಪ್ರಾರಂಭವಾದಾಗ ಮಂಜು ಪಾವಗಡ ಜೊತೆಗೆ ಕಂಡುಬಂದು ಸಾಕಷ್ಟು ಸುದ್ದಿಯಾಗಿದ್ದರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಕೂಡ ಆಗಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಪ್ರಬಲ ಸ್ಪರ್ಧಿಯಾಗಿ ಕಂಡುಬರುತ್ತಾರೆ ಎಂಬುದಾಗಿ ಮೊದಮೊದಲು ಅಂದಾಜಿಸಲಾಗಿತ್ತು. ಆದರೆ ಬರ್ತಾ ಬರ್ತಾ ಕೇವಲ ಟ್ರೋಲ್ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಇದೀಗ ದಿವ್ಯ ಸುರೇಶ್ ಅವರು ಬ್ರಿಗೇಡ್ ರಸ್ತೆಯಲ್ಲಿ ಕಂಠಪೂರ್ತಿ ಕುಡಿದುಕೊಂಡು ಗಲಾಟೆ ಮಾಡಿರುವುದಕ್ಕಾಗಿ ಸುದ್ದಿಯಾಗಿದ್ದಾರೆ. ಬಿಗ್ ಬಾಸ್ ನಲ್ಲಿ ಕೂಡ ಮೊದಮೊದಲಿಗೆ ಮಜಾ ಭಾರತದಿಂದ ಖ್ಯಾತಿಯನ್ನು ಗಳಿಸಿದ್ದ ಮಂಜು ಪಾವಗಡ ರವರ ಹಿಂದೆ ಗೆಲ್ಲುವುದಕ್ಕಾಗಿ ಸುತ್ತಾಡಿದ್ದಾರೆ ಎಂಬುದಾಗಿ ಕೂಡ ಮಾತುಗಳು ಕೇಳಿಬಂದಿತ್ತು. ಮೊದಲರ್ಧದಲ್ಲಿ ಮಂಜು ಪಾವಗಡ ರವರು ಕೂಡ ಇವರ ಸುತ್ತ ಸುತ್ತಾಡುತ್ತಿದ್ದರು. ಆದರೆ ದ್ವಿತೀಯಾರ್ಧದಲ್ಲಿ ಮಂಜು ಪಾವಗಡ ರವರು ಬುದ್ಧಿವಂತಿಕೆಯನ್ನು ತೋರಿಸಿ ಅವರಿಂದ ದೂರವಾಗಿ ಬಿಗ್ ಬಾಸ್ ಕನ್ನಡ ಸೀಸನ್ 8 ಗೆಲ್ಲುತ್ತಾರೆ.

ಆದರೆ ದಿಗೆ ಸುರೇಶ್ ರವರು ಮಾತ್ರ ಮತ್ತದೇ ಮಾರ್ಗವನ್ನು ಅನುಸರಿಸಿ ಬಿಗ್ ಬಾಸ್ ಕನ್ನಡ ಸೀಸನ್ ಎಂಟರಲ್ಲಿ 6ನೇ ಸ್ಥಾನಕ್ಕೆ ಜಾರುತ್ತಾರೆ. ಇನ್ನು ಬಿಗ್ ಬಾಸ್ ನಿಂದ ಹೊರಬಂದ ನಂತರ ಮಂಜು ಪಾವಗಡ ರವರ ತಂದೆ ತಾಯಿಯ ಜೊತೆ ಕೂಡ ಸಾಕಷ್ಟು ಆತ್ಮೀಯರಾಗಿದ್ದರು ದಿವ್ಯ ಸುರೇಶ್. ತನ್ನ ಜೀವನವನ್ನು ಕಟ್ಟಿಕೊಳ್ಳಲು ಸಿಕ್ಕಸಿಕ್ಕ ಕೆಲಸವನ್ನು ಮಾಡಿಕೊಂಡು ಸಿನಿಮಾಗಳಲ್ಲಿ ಕೂಡ ಫೋನ್ ಮಾಡಿಕೊಂಡು ಎಲ್ಲರಲ್ಲು ಅವಕಾಶವನ್ನು ಪಡೆಯಲು ಶ್ರಮ ಪಡುತ್ತಿರುವ ಮಂಜು ಪಾವಗಡ ಎಲ್ಲಿ, ದೊಡ್ಡ ದೊಡ್ಡ ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳೊಂದಿಗೆ ಸುತ್ತಾಡುವ ದಿವ್ಯ ಸುರೇಶ್ ರವರು ಎಲ್ಲಿ ಎಂಬುದಾಗಿ ನೆಟ್ಟಿಗರು ಮಾತನಾಡಿಕೊಂಡಿದ್ದರು.
ಇವರಿಬ್ಬರ ಮದುವೆ ಎನ್ನುವುದು ಗಾಳಿಸುದ್ದಿಯನ್ನುವುದು ಮೊದಲೇ ನಿರ್ಧಾರವಾಗಿತ್ತು ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ. ಮೊದಮೊದಲು ದಿವ್ಯ ಸುರೇಶ್ ರವರ ಜೊತೆಗೆ ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಜು ಪಾವಗಡ ಈಗ ಕಿರುತೆರೆ ಕಾರ್ಯಕ್ರಮ ಹಾಗೂ ಸಿನಿಮಾ ಶೋಗಳಲ್ಲೇ ಬ್ಯೂಸಿಯಾಗಿದ್ದಾರೆ. ಇತ್ತ ದಿವ್ಯ ಸುರೇಶ್ ಅವರು ಕೂಡ ತಮ್ಮ ಗೆಳೆಯರೊಂದಿಗೆ ಬ್ರಿಗೇಡ್ ರೋಡ್ ಎಂಜಿ ರೋಡ್ ಎಂದು ಪಾರ್ಟಿಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ನಿನ್ನೆ ರಾತ್ರಿ ಮಾತ್ರ ಅವರ ಗ್ರಹಚಾರ ಕೆಟ್ಟಿದೆ ಎಂದು ಕಾಣುತ್ತದೆ. ಪಬ್ ನಲ್ಲಿ ಡಿಜೆ ಸುರೇಶ್ ರವರು ಕಂಠಪೂರ್ತಿ ಕುಡಿದು ಪಾನಮತ್ತರಾಗಿದ್ದರು.

ನಿನ್ನೆ ನೈಟ್ ಕರ್ಫ್ಯೂ ಜಾರಿಯಾಗಿದ್ದ ಕಾರಣದಿಂದಾಗಿ ದಿವ್ಯ ಸುರೇಶ್ ರವರು ತಮ್ಮ ಸ್ನೇಹಿತರೊಂದಿಗೆ ಕುಡಿದನಂತರ ಪೊಲೀಸರು ಬರುತ್ತಿರುವ ವಿಚಾರವನ್ನು ತಿಳಿದು ಕೆಳಗಿಳಿದು ಬರುತ್ತಾರೆ. ಆದರೆ ಅದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಅವರನ್ನು ನೋಡಿ ದಿವ್ಯ ಸುರೇಶ್ ಎಂದು ಗುರುತಿಸಿ ವಿಡಿಯೋ ಮಾಡುತ್ತಾ ಏನು ಮೇಡಂ ಈಗಾಗಲೇ ತಡರಾತ್ರಿ ಆಗಿದೆ ನೈಟ್ ಕರ್ಫ್ಯೂ ಇದ್ದರೂ ಕೂಡ ಹೀಗೆ ಕುಡಿದುಕೊಂಡು ಬಂದಿದ್ದೀರಲ್ಲ ಎಂಬುದಾಗಿ ವಿಡಿಯೋ ಮಾಡುತ್ತಲೇ ಕೇಳುತ್ತಾನೆ.
ಆಗ ಅದಕ್ಕೆ ದಿವ್ಯ ಸುರೇಶ್ ರವರು ಕುಡಿದ ಮತ್ತಿನಲ್ಲಿದ್ದ ಕಾರಣದಿಂದಾಗಿ ಒಳ್ಳೊಳ್ಳೆಯ ಪದಗಳಿಂದ ಆತನಿಗೆ ಸಿಕ್ಕಾಪಟ್ಟೆ ಬೈದುಬಿಟ್ಟಿದ್ದಾರೆ. ಸ್ನೇಹಿತರೊಂದಿಗೆ ಆ ವ್ಯಕ್ತಿಯ ಮೇಲೆ ಎಗ್ಗಾಮುಗ್ಗಾ ಕೂಗಾಡಿದ್ದಾರೆ. ಕೇವಲ ದಿವ್ಯ ಸುರೇಶ್ ರವರು ಮಾತ್ರವಲ್ಲದೆ ಆಕೆಯ ಸ್ನೇಹಿತರು ಕೂಡ ಆ ವ್ಯಕ್ತಿಯ ಮೇಲೆ ಕೂಗಾಡಲು ಮುಂದಾಗಿರುವುದು ಕೂಡ ಇಲ್ಲಿ ದೊಡ್ಡ ಸನ್ನಿವೇಶ ಸೃಷ್ಟಿ ಮಾಡುವಲ್ಲಿ ಕಾರಣವಾಗಿದೆ. ಇದನ್ನು ನೋಡಿದ ಅಲ್ಲೇ ಇದ್ದ ಪೊಲೀಸರು ಕೂಡ ಬಂದು ಅವರಿಗೆ ಮಾಧ್ಯಮದವರು ಕೂಡ ಈ ಘಟನೆಯನ್ನು ವರದಿ ಮಾಡಿದ್ದಾರೆ.

ಮೊದಲ ಕುಡಿದ ಗುಂಗಿನಲ್ಲಿದ್ದ ದಿವ್ಯ ಸುರೇಶ್ ರವರು ಪೊಲೀಸರು ವಿಚಾರಿಸಲು ಬಂದಾಗ ಅವರ ಮೇಲೆ ಕೂಡ ಕಿರಿಕ್ ಮಾಡಿಕೊಂಡಿದ್ದಾರೆ. ನಂತರ ಪೊಲೀಸರು ಆಕಡೆಯಿಂದ ಕ್ಯಾಬ್ ಮಾಡಿಕೊಂಡು ಹೋಗಿ ಎಂದು ದಿವ್ಯ ಸುರೇಶ್ ಹಾಗೂ ಆಕೆ ಗೆಳೆಯರನ್ನು ಮನವೊಲಿಸಿ ಹೋಗುವಂತೆ ಮಾಡಿದ್ದಾರೆ. ಇನ್ನು ಈ ಎಲ್ಲಾ ಅವಾಂತರಗಳು ಕೂಡ ಮಾಧ್ಯಮದವರ ವಿಡಿಯೋದಲ್ಲಿ ಸೆರೆಯಾಗಿದ್ದು ಸುದ್ದಿಮಾಧ್ಯಮಗಳಲ್ಲಿ ದೊಡ್ಡಮಟ್ಟದ ಸಂಚಲನವನ್ನು ಸೃಷ್ಟಿಸಿದೆ. ಒಂದು ಕಡೆ ದಿವ್ಯ ಸುರೇಶ ರವರಂತಹ ದೊಡ್ಡ ಮನುಷ್ಯರು ಕರ್ಫ್ಯೂ ನಲ್ಲಿ ಕುಡಿಯಲು ಪರದಾಡುತ್ತಿದ್ದಾರೆ. ಇನ್ನೊಂದು ಕಡೆ ಕೆಲವು ಸಾಮಾನ್ಯ ಜನರು ಬದುಕಿನ ನಿರ್ವಹಣೆ ಮಾಡಲು ಕಷ್ಟಪಡುತ್ತಿದ್ದಾರೆ. ಇಷ್ಟೇ ಜೀವನ ವಾಗಿಬಿಟ್ಟಿದೆ.