ಲಾಕ್ಡೌನ್ ಚಿಂತೆಯಲ್ಲಿ ಕಡಿಮೆಯಾಯಿತು ಚಿನ್ನದ ದರ, ಮಧ್ಯಮ ವರ್ಗದವರಿಗೆ ಚಿನ್ನ ಕೈಗೆಟುವ ಬೆಲೆಯಲ್ಲಿ. ಎಷ್ಟಿದೆ ಗೊತ್ತೇ?? ಹೂಡಿಕೆಗೆ ಇದು ಸರಿಯಾದ ಸಮಯವೇ?
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ದೇಶ ಎನ್ನುವುದು ಇಡೀ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಚಿನ್ನ ಖರೀದಿ ಮಾಡುವಂತಹ ದೇಶ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಇದಕ್ಕೆಲ್ಲ ಕಾರಣಿಕರ್ತರು ನಮ್ಮ ದೇಶದ ಹೆಣ್ಣುಮಕ್ಕಳು ಎಂದರೇ ತಪ್ಪಾಗಲಾರದು. ಕನಸಿನ ಖರೀದಿಗೆ ಮಾತ್ರವಲ್ಲದೆ ಹೂಡಿಕೆಗೂ ಕೂಡ ಉಪಯೋಗವಾಗುತ್ತದೆ. ಕೆಲವೊಮ್ಮೆ ಚಿನ್ನವನ್ನು ಖರೀದಿಸಲು ಕೆಲವು ಕುಟುಂಬಗಳಿಗೆ ಸಾಧ್ಯವಾಗುವುದಿಲ್ಲ ಯಾಕೆಂದರೆ ಚಿನ್ನದ ಬೆಲೆ ಎನ್ನುವುದು ಗಗನವನ್ನು ಮುಟ್ಟುತ್ತಿರುತ್ತದೆ.
ಹೀಗಾಗಿ ಮಧ್ಯಮ ವರ್ಗದ ಕುಟುಂಬಗಳಿಗೆ ಚಿನ್ನವನ್ನು ಖರೀದಿಸಲು ಅದು ಬೆಲೆ ಕಡಿಮೆ ಆಗುವವರೆಗೂ ಕೂಡ ಕಾಯಬೇಕಾಗುತ್ತದೆ. ಆದರೆ ಈಗ ಚಿನ್ನದ ಖರೀದಿಯನ್ನು ಮಾಡಬಯಸುವ ಗ್ರಾಹಕರಿಗೆ ಸಿಹಿಸುದ್ದಿಯನ್ನು ನೀಡಿದೆ. ಹೌದು ಗೆಳೆಯರೇ ಆಭರಣ ಪ್ರಿಯರಿಗೆ ಚಿನ್ನದ ದರ ಕಡಿಮೆಯಾಗಿರುವ ಸಿಹಿ ಸುದ್ದಿ ಸಿಕ್ಕಿದೆ. ಚಿನ್ನವನ್ನು ಖರೀದಿ ಮಾಡಲು ಕಾಯುತ್ತಿದ್ದಂತಹ ಜನರಿಗೆ ಇದು ಖಂಡಿತವಾಗಿ ಶುಭ ಸುದ್ದಿಯಾಗಿ ಪರಿಣಮಿಸಿದೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಹಾಗಿದ್ದರೆ ಈಗ ಚಿನ್ನದ ದರ ಎಷ್ಟು ಎಷ್ಟು ಕಡಿಮೆಯಾಗಿದೆ ಎಂಬುದರ ಕುರಿತಂತೆ ವಿವರವಾಗಿ ನಿಮಗೆ ಹೇಳಲು ಹೊರಟಿದ್ದೇವೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 45350 ರೂಪಾಯಿ ಆಗಿದೆ. 200 ಗ್ರಾಂ ಚಿನ್ನಕ್ಕೆ 453500 ಆಗಿದೆ. ಅಂದರೆ ಇಲ್ಲಿ ದೈನಂದಿನ ದರದಲ್ಲಿ ಸಾವಿರ ರೂಪಾಯಿ ಕಡಿಮೆಯಾಗಿದೆ. ಈ ಕಡೆ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 49480 ರೂಪಾಯಿ ಆಗಿದ್ದು 100 ಗ್ರಾಂ ಚಿನ್ನಕ್ಕೆ 494800 ರೂಪಾಯಿ ಆಗಿದೆ. ಇಲ್ಲಿ ಕೂಡ ಒಂದು 1100 ರೂಪಾಯಿ ಕಡಿಮೆಯಾಗಿದೆ. ಈ ಸುದ್ದಿಯನ್ನು ಕೇಳಿದ ತಕ್ಷಣ ಖಂಡಿತವಾಗಿಯೂ ಆಭರಣ ಪ್ರಿಯರು ಚಿನ್ನದಂಗಡಿಗೆ ಹೋಗಿ ರೇಟ್ ಕಡಿಮೆ ಇದ್ದಾಗಲೇ ಚಿನ್ನವನ್ನು ಖರೀದಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇವಲ ಖರೀದಿಗೆ ಮಾತ್ರವಲ್ಲದೆ ಕಷ್ಟದ ಸಮಯದಲ್ಲಿ ಆಭರಣವನ್ನು ಅಡವಿಟ್ಟು ತಮ್ಮ ಕಷ್ಟಗಳನ್ನು ಕೂಡ ಪರಿಹರಿಸಿಕೊಳ್ಳಬಹುದಾಗಿದೆ ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.