ಕೊನೆಗೂ ಫೈನಲ್ ಆಯಿತು ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ವಿಜಯ ರಾಘವೇಂದ್ರ ರವರ ಬದಲಿ ತೀರ್ಪುದಾರ. ಆ ಟಾಪ್ ಕಲಾವಿದ ಯಾರು ಗೊತ್ತೇ??

5,317

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಕಾರ್ಯಕ್ರಮಗಳು ಸಿನಿಮಾಗಳಿಗಿಂತ ಹೆಚ್ಚಾಗಿ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಳ್ಳುವುದರಿಂದಾಗಿ ಪ್ರತಿಯೊಂದು ವಾಹಿನಿಗಳು ತಾ ಮುಂದು ನಾ ಮುಂದು ಎನ್ನುವಂತೆ ಹೊಸ ಹೊಸ ಕಾರ್ಯಕ್ರಮಗಳನ್ನು ತಮ್ಮ ಚಾನೆಲ್ ನಲ್ಲಿ ಪ್ರಸಾರ ಮಾಡುತ್ತಿವೆ. ಈ ಕಡೆ ಪ್ರೇಕ್ಷಕರು ಕೂಡ ಕಿರುತೆರೆಯ ಕಾರ್ಯಕ್ರಮಗಳನ್ನು ಹಾಗೂ ಧಾರವಾಹಿಗಳನ್ನು ವೀಕ್ಷಿಸುವ ಅಲ್ಲೇ ತಮ್ಮ ಆಸಕ್ತಿಯನ್ನು ಹೆಚ್ಚಿಸಿದ್ದಾರೆ. ಅದರಲ್ಲೂ ಕೂಡ ಸಾಕಷ್ಟು ರಿಯಾಲಿಟಿ ಶೋ ಕಾರ್ಯಕ್ರಮಗಳು ಮತ್ತು ವಿವಿಧ ರೀತಿಯ ಕಾರ್ಯಕ್ರಮಗಳು ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಇಂದು ನಾವು ಮಾತನಾಡಲು ಹೊರಟಿರುವುದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಕುರಿತಂತೆ. ಚಿಕ್ಕ ಚಿಕ್ಕ ಮಕ್ಕಳು ತಮ್ಮ ದೊಡ್ಡಮಟ್ಟದ ಪ್ರತಿಭೆಯನ್ನು ಕರ್ನಾಟಕದ ಪ್ರೇಕ್ಷಕರಿಗೆ ತೋರಿಸುವಂತಹ ಕಾರ್ಯಕ್ರಮ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮವಾಗಿದೆ. ಮೊದಲಿಗೆ ಈ ಕಾರ್ಯಕ್ರಮವನ್ನು ಟಿ ಎನ್ ಸೀತಾರಾಮ್ ಲಕ್ಷ್ಮಿ ಅಮ್ಮ ಹಾಗೂ ವಿಜಯ ರಾಘವೇಂದ್ರ ರವರು ತೀರ್ಪುಗಾರರಾಗಿ ನಡೆಸಿಕೊಡುತ್ತಿದ್ದರು. ನಂತರ ಟಿಎನ್ ಸೀತಾರಾಮ್ ರವರ ಸ್ಥಾನಕ್ಕೆ ಮುಖ್ಯಮಂತ್ರಿ ಚಂದ್ರುರವರು ಬರುತ್ತಾರೆ. ಆದರೆ ಈಗ ಅತಿಶೀಘ್ರದಲ್ಲೇ ಪ್ರಾರಂಭವಾಗಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಿಂದ ತೀರ್ಪುಗಾರರ ಸ್ಥಾನದಿಂದ ವಿಜಯ ರಾಘವೇಂದ್ರ ಹೊರಬಂದಿದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಪ್ರಸಾರವಾಗಲಿರುವ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ಹಾಗಿದ್ದರೆ ವಿಜಯರಾಘವೇಂದ್ರ ರವರ ಸ್ಥಾನಕ್ಕೆ ಯಾರು ತೀರ್ಪುಗಾರರಾಗಿ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ ಎಂಬ ಕುತೂಹಲಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಏರ್ಪಟ್ಟಿದ್ದವು. ಅದಕ್ಕೆ ಈಗ ಉತ್ತರ ಸಿಕ್ಕ ಭಾವನೆ ಎಲ್ಲರನ್ನೂ ಮೂಡಿದೆ. ಯಾಕೆಂದರೆ ಬಲ್ಲಮೂಲಗಳ ಪ್ರಕಾರ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಂಡಿದ್ದ ಮಾಸ್ಟರ್ ಆನಂದ್ ರವರೇ ಈ ಬಾರಿಯ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿವೆ ಹರಿದಾಡುತ್ತಿವೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಷ್ಟರಮಟ್ಟಿಗೆ ಸುಳ್ಳು ಎನ್ನುವುದನ್ನು ಅತಿಶೀಘ್ರದಲ್ಲೇ ಪ್ರಾರಂಭವಾಗಲಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮವನ್ನು ನೋಡಿದ ಮೇಲೆ ನಮಗೆ ತಿಳಿಯಲಿದೆ.