ಪುಷ್ಪ ಸಿನಿಮಾ ಕೋಟಿ ಕೋಟಿ ದೋಚುತ್ತಿರುವಾಗ ಬಡವ ರಾಸ್ಕಲ್ ಧನಂಜಯ್ ಬಗ್ಗೆ ಪುಷ್ಪ ಸಿನೆಮಾದ ಸ್ಟೇಜ್ ನಲ್ಲಿ ಮಾತನಾಡಿದ ಅಲ್ಲೂ ಅರ್ಜುನ್, ಹೇಳಿದ್ದೇನು ಗೊತ್ತೇ??

31,674

ನಮಸ್ಕಾರ ಸ್ನೇಹಿತರೇ ನಮಗೆಲ್ಲರಿಗೂ ತಿಳಿದಿರುವಂತೆ ಈ ವರ್ಷ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ ಚಿತ್ರ ಎಂದರೆ ಅದು ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ಎಂದು ಖಡಾಖಂಡಿತವಾಗಿ ಹೇಳಬಹುದಾಗಿದೆ. ಯಾಕೆಂದರೆ ಈಗಾಗಲೇ ವಿಶ್ವಾದ್ಯಂತ 300 ಕೋಟಿ ಕಲೆಕ್ಷನ್ ಪೂರೈಸುವತ್ತ ಮುನ್ನುಗ್ಗುತ್ತಿದೆ. ಮೊದಲ ಬಾರಿಗೆ ಅಲ್ಲುಅರ್ಜುನ್ ರವರು ಸ್ಟೈಲಿಷ್ ಪಾತ್ರವನ್ನು ಹೊರತುಪಡಿಸಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಈ ಚಿತ್ರವನ್ನು ಸುಕುಮಾರ್ ಅವರು ಉತ್ತಮ ಶೈಲಿಗೆ ತಕ್ಕಂತೆ ಪಂಚ ಭಾಷೆಗಳ ಪ್ರೇಕ್ಷಕರಿಗೂ ಕೂಡ ಮನಮೆಚ್ಚುವಂತೆ ಮಾಡಿದ್ದರು. ಚಿತ್ರದಲ್ಲಿ ನ್ಯಾಷನಲ್ ಕೃಷ್ ರಶ್ಮಿಕ ಮಂದಣ್ಣ ನವರು ಕೂಡ ನಾಯಕಿಯಾಗಿ ಸಾಕಷ್ಟು ಉತ್ತಮವಾಗಿ ಅಭಿನಯಿಸಿದ್ದರು. ಕೇವಲ ಬಾಕ್ಸಾಫೀಸ್ ನಲ್ಲಿ ಮಾತ್ರವಲ್ಲದೆ ವಿಮರ್ಶಕರ ಮೆಚ್ಚುಗೆಯನ್ನು ಕೂಡ ಚಿತ್ರ ಪಡೆದುಕೊಂಡಿದ್ದು ಇಲ್ಲಿ ನಾವು ಸ್ಮರಿಸಿಕೊಳ್ಳಬಹುದಾಗಿದೆ. ಪುಷ್ಪ ಚಿತ್ರದಲ್ಲಿ ಕನ್ನಡದ ಮತ್ತೊಂದು ಪ್ರತಿಭೆಯಾಗಿರುವ ಡಾಲಿ ಧನಂಜಯ್ ಅವರು ಕೂಡ ನಟಿಸಿದ್ದರು.

ಇತ್ತೀಚಿಗಷ್ಟೇ ಪುಷ್ಪ ಚಿತ್ರದ ಯಶಸ್ವಿ ಸಮಾರಂಭದಲ್ಲಿ ಅಲ್ಲುಅರ್ಜುನ್ ರವರು ಡಾಲಿ ಧನಂಜಯ್ ರವರ ಕುರಿತಂತೆ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ. ಹಾಗಿದ್ದರೆ ಅಲ್ಲು ಅರ್ಜುನ್ ಅವರು ಡಾಲಿ ದಂದೆ ಕುರಿತಂತೆ ಏನು ಹೇಳಿದ್ದಾರೆ ಎಂಬುದನ್ನು ನಾವು ತಿಳಿಯೋಣ ಬನ್ನಿ. ಅಲ್ಲು ಅರ್ಜುನ್ ರವರು ಡಾಲಿ ಧನಂಜಯ್ ರವರನ್ನು ಹೊಗಳುತ್ತಾ ಕನ್ನಡ ಚಿತ್ರರಂಗದಲ್ಲಿ ಟಾಪ್ ಹೀರೋ ಆಗಿ ನಟಿಸಿರುವ ಡಾಲಿ ಧನಂಜಯ್ ರವರು ನೇರವಾಗಿ ನಮ್ಮ ಚಿತ್ರದಲ್ಲಿ ಬಂದು ನನ್ನ ಕೈಯಿಂದ ಸಿನಿಮಾದಲ್ಲಿ ಒದೆ ತಿನ್ನುವ ಪಾತ್ರವನ್ನು ಪಡೆದುಕೊಂಡಿದ್ದರೂ ಕೂಡ ಹಿಂದೆ ಮುಂದೆ ನೋಡದೆ ನಟಿಸಿ ಬಂದಿದ್ದಾರೆ ಅವರಿಗೆ ನನ್ನ ಕೃತಜ್ಞತೆಗಳು ಎಂಬುದಾಗಿ ಹೇಳಿದ್ದಾರೆ, ಹಾಗೂ ನೀನು ಕನ್ನಡದಲ್ಲಿ ಅಷ್ಟೇ ಅಲ್ಲದೆ ಎಲ್ಲ ಭಾಷೆಗಳಲ್ಲೂ ಕೂಡ ದೊಡ್ಡ ಕಲಾವಿದನಾಗಿ ಬೆಲೆಯೇಬೇಕು ಎಂದು ಮನಸ್ಪೂರ್ತಿಯಾಗಿ ಕೋರಿಕೊಳ್ಳುತ್ತೇನೆ, ಚಿತ್ರರಂಗದಲ್ಲಿ ನೀವು ದೊಡ್ಡ ನಟನಾಗಿ ಬೆಳೆಯುತ್ತೀರಿ ಎಂಬುದಾಗಿ ಕೂಡ ಹೇಳಿದ್ದಾರೆ.