ಎರಡು ತಿಂಗಳ ಬಳಿಕ ಅಪ್ಪು ಮರಣಹೊಂದುವ 3 ದಿನದ ಮುಂಚೆ ಹೇಳಿದ ಮಾತನ್ನು ಬಹಿರಂಗ ಪಡಿಸಿದ ಮಾಲಾಶ್ರೀ. ಹೇಳಿದ್ದೇನು ಗೊತ್ತೇ??

1,736

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಚಿತ್ರರಂಗವನ್ನು ಆಳಿದ ನಟಿ ಮಾಲಾಶ್ರೀ ಅವರು. ಇವರನ್ನು ಕನ್ನಡ ಚಿತ್ರರಂಗದ ಕನಸಿನ ರಾಣಿ ಎಂದು ಕರೆಯುತ್ತಾರೆ. ಕನ್ನಡ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದರೂ ಕೂಡ ತಪ್ಪಾಗಲಾರದು. ಒಂದು ಕಾಲದಲ್ಲಿ ನಟರಿಗಿಂತ ಹೆಚ್ಚಾಗಿ ನಿರ್ಮಾಪಕ ಹಾಗೂ ನಿರ್ದೇಶಕರು ಮಾಲಾಶ್ರೀ ಅವರ ಕಾಲ್ ಶೀಟ್ ಗಾಗಿ ಕಾಯುತ್ತಿದ್ದರು. ಇನ್ನು ಇತ್ತೀಚೆಗಷ್ಟೇ ಮಾಲಾಶ್ರೀ ಅವರು ತಮ್ಮ ಪತಿ ಕೋಟಿ ರಾಮು ರವರು ನಿರ್ಮಿಸಿರುವಂತಹ ಕೊನೆಯ ಚಿತ್ರವಾಗಿರುವ ಅರ್ಜುನಗೌಡ ರವರನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಾಕಷ್ಟು ಕಾರ್ಯಗಳಲ್ಲಿ ನಿರತರಾಗಿದ್ದು ಇತ್ತೀಚಿಗೆ ಸುದ್ದಿಯಲ್ಲಿದ್ದಾರೆ.

ಅರ್ಜುನಗೌಡ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ನಟಿಸಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡುವ ಸಮಯದಲ್ಲಿ ಮಾಲಾಶ್ರೀ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ನೆನಪಿಸಿಕೊಂಡಿದ್ದಾರೆ. ಇನ್ನು ತಾವು ನಂಜುಂಡಿ ಕಲ್ಯಾಣ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಅಪ್ಪು ಅವರ ಜೊತೆಗೆ ಆಟವಾಡುತ್ತಿದ್ದ ನೆನಪುಗಳನ್ನು ಕೂಡ ಮೆಲುಕು ಹಾಕಿದ್ದಾರೆ. ನಿರ್ದೇಶಕರ ಬಳಿ ಬೈಸಿಕೊಂಡು ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದುದ್ದು, ಚಿತ್ರೀಕರಣದ ಅವಧಿ ಮುಗಿದ ನಂತರ ಐಸ್ ಕ್ರೀಮ್ ತಿನ್ನುತ್ತಿದ್ದನ್ನು ಕೂಡ ಇಲ್ಲಿ ನೆನಪಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಅಪ್ಪು ಅವರು ಮರಣಹೊಂದುವ 3 ದಿನದ ಮುನ್ನ ಹೇಳಿರುವ ಮಾತೊಂದನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಹೌದು ಗೆಳೆಯರೆ ಮಾಲಾಶ್ರೀಯವರಿಗೆ ಅಪ್ಪು ಅವರು ನಿಧನ ಹೊಂದುವ ಮೂರು ದಿನದ ಮುಂಚೆ ಮದುವೆಯಲ್ಲಿ ಸಿಕ್ಕಿದ್ದರು. ಆ ಸಂದರ್ಭದಲ್ಲಿ ಅಪ್ಪು ಅವರು ಮಾಲಾಶ್ರೀಯವರಿಗೆ ಕೋಟಿ ರಾಮುರವರ ನಿಧನದ ನೆನಪಿನಿಂದ ನೀವು ಹೊರಗೆ ಬರಬೇಕು ನಿಮ್ಮನ್ನು ನಾನು ದುರ್ಗಿ ಚಾಮುಂಡಿ ತರ ನೋಡಬೇಕು ಎಷ್ಟು ದಿನ ಹೇಗೆ ಅಂತ ಕೊರಗುತ್ತಿದೆ ಎಂಬುದಾಗಿ ಅಪ್ಪಿ ಸಮಾಧಾನ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಇದು ನಡೆದ ಮೂರು ದಿನದ ನಂತರ ಅಪ್ಪು ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಮಾಲಾಶ್ರಿ ಅವರು ಕಣ್ಣೀರಿಟ್ಟಿದ್ದರು ಎಂಬುದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳುತ್ತಾರೆ. ಇದೇ ವರ್ಷ ಮಾಲಾಶ್ರೀ ಅವರು ತಮ್ಮ ಪತಿ ಕೋಟಿ ರಾಮು ರವರನ್ನು ಕೂಡ ಕಳೆದುಕೊಂಡಿದ್ದಾರೆ ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.