ಅಪ್ಪು ರವರ ಎರಡನೇ ತಿಂಗಳ ಪೂಜೆ ಸಂದರ್ಭದಲ್ಲಿ ಸಮಾಧಿಯ ಬಳಿ ಬಂದ ಅಮೆರಿಕ ಮೂಲದ ಮಹಿಳೆ ಯಾರು ಗೊತ್ತೇ?? ಅಪ್ಪು ಇವರಿಗೆ ಏನಾಗಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಇಂದಿಗೆ ಬರೋಬ್ಬರಿ ಎರಡು ತಿಂಗಳು ಕಳೆದಿವೆ. ನಗುವಿನ ಅರಸನನ್ನು ಕಳೆದುಕೊಂಡು ಎರಡು ತಿಂಗಳು ಆಗಿದೆ ಎಂದು ನಂಬಲು ಕೂಡ ಸಾಧ್ಯವಾಗುತ್ತಿಲ್ಲ. ಇಂದಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಮಾಧಿಯನ್ನು ನೋಡಲು ದಿನಾಲು ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋದ ಬರುವುದನ್ನು ನೋಡಿದರೆ ನಿಜಕ್ಕೂ ಹೊಟ್ಟೆಯಲ್ಲಿ ಕಿವುಚಿದಂತೆ ಆಗುತ್ತದೆ. ಸದಾಕಾಲ ಹಸನ್ಮುಖರಾಗಿದ್ದ ಪುನೀತ್ ರಾಜಕುಮಾರ್ ಅವರು ಈಗ ಚಿರನಿದ್ರೆಯಲ್ಲಿ ಇದ್ದಾರೆ ಎಂದರೆ ಮನಸ್ಸು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ.
ಇನ್ನು ಈಗಾಗಲೇ ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರ ಕನಸುಗಳನ್ನು ಪೂರೈಸುವಲ್ಲಿ ನಿರತರಾಗಿದ್ದಾರೆ. ಇತ್ತ ಶಿವಣ್ಣ ಹಾಗೂ ರಾಘಣ್ಣ ಸಾಮಾಜಿಕ ಕೆಲಸಗಳನ್ನು ಮಾಡುವಲ್ಲಿ ಹಾಗೂ ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಇವರ್ಯಾರು ಕೂಡ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖವನ್ನು ಮರೆತಿಲ್ಲ ಆದರೆ ತಾವೇ ದುಃಖಕ್ಕೆ ಒಳಗಾದರೇ ಅಭಿಮಾನಿಗಳಿಗೆ ಸಮಾಧಾನ ಮಾಡುವವರು ಯಾರು ಎಂಬ ಕಾರಣಕ್ಕಾಗಿ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇಂದು ಅಶ್ವಿನಿ ಅವರ ತಮ್ಮ ಕುಟುಂಬಸ್ಥ ರೊಡನೆ ಕಂಠೀರವ ಸ್ಟುಡಿಯೋಗೆ ಬಂದು ಎರಡನೇ ತಿಂಗಳಿನ ಕಾರ್ಯ ಹಾಗೂ ಪೂಜೆಯನ್ನು ಮಾಡಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಒಂದು ವಿಶೇಷ ಘಟನೆ ನಡೆದಿದೆ.

ಅಮೆರಿಕದಿಂದ ಲಿಂದಾ ಎಂಬಾಕೆ ಕ್ಯಾಲಿಫೋರ್ನಿಯಾದಿಂದ ಅಪ್ಪು ಅವರ ಸಮಾಧಿಗೆ ಬಂದಿದ್ದಾರೆ. ಇವರು ಅಪ್ಪು ಅವರ ಸಂಬಂಧಿಕರಾ ಅಥವಾ ಪರಿಚಯದವರಾ ಎಂದು ನೀವು ಕೇಳಬಹುದು. ಎರಡು ಅಲ್ಲ ಗೆಳೆಯರೇ ಬದಲಾಗಿ ಲಿಂದಾ ರವರು ಅಪ್ಪು ಅವರ ಅಪ್ಪಟ ಅಭಿಮಾನಿ. ಮೊದಲಿನಿಂದಲೂ ಕೂಡ ಅಪ್ಪುರವರ ಪ್ರತಿಯೊಂದು ಸಿನಿಮಾಗಳನ್ನು ಇಂಗ್ಲಿಷ್ ಸಬ್ ಟೈಟಲ್ ನಲ್ಲಿ ನೋಡುತ್ತಿದ್ದಾರೆ. ಈಗ ಅಪ್ಪು ರವರನ್ನು ಕಳೆದುಕೊಂಡಿರುವ ದುಃಖಕ್ಕಾಗಿ ಕೇವಲ ಅಪ್ಪುರವರ ಸಮಾಧಿಯನ್ನು ನೋಡಲು ಸಾಗರ ದಾಟಿ ಬಂದಿದ್ದಾರೆ. ಇನ್ನು ಅಶ್ವಿನಿ ಅವರು ಕೂಡ ಲಿಂದಾರವರನ್ನು ಭೇಟಿ ಮಾಡಿ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ನಿಜವಾಗಲು ಇಂತಹ ಅಭಿಮಾನಿಗಳನ್ನು ಪಡೆದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರೇ ಧನ್ಯ ಎಂದು ಹೇಳಬಹುದು.