ಬಿಗ್ ನ್ಯೂಸ್: ಕೊನೆಗೂ ಮದುವೆಗೆ ರೆಡಿ ಆದ ಖ್ಯಾತ ಟಾಪ್ ನಿರೂಪಕಿ ಅನುಶ್ರೀ, ಹುಡುಗ ಯಾರಂತೆ ಗೊತ್ತೇ??

12,186

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದ ಕಿರುತೆರೆಯ ನಂಬರ್ 1 ನಿರೂಪಕಿಯಾಗಿ ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತಿನ್ಯಾರು ಅಲ್ಲ ನಮ್ಮ ನೆಚ್ಚಿನ ಅನುಶ್ರೀ ಅವರು. ಅನುಶ್ರೀ ಅವರು ಮೂಲತಹ ಮಂಗಳೂರಿನವರು. ಹೇಳಿಕೊಳ್ಳುವಷ್ಟು ಸ್ಥಿತಿವಂತ ಕುಟುಂಬದಿಂದ ಅವರು ಬಂದಿರಲಿಲ್ಲ. ಶಿಕ್ಷಣವನ್ನು ಕೂಡ ಕಷ್ಟಪಟ್ಟು ಮಾಡಿದರು. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದರಿಂದ ತಾಯಿಯ ಆರೈಕೆಯಲ್ಲಿ ಬೆಳೆದುಕೊಂಡು ಬಂದವರು.

ನಂತರ ಕುಟುಂಬಕ್ಕೆ ಆಧಾರವಾಗಲಿ ಎಂಬ ಕಾರಣಕ್ಕಾಗಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದು ಹಲವಾರು ವರ್ಷಗಳ ಪರಿಶ್ರಮಗಳ ನಂತರ ಈಗ ಕಿರುತೆರೆಯ ಬಹುಬೇಡಿಕೆಯ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಅನುಶ್ರೀ ಅವರು ನಿರೂಪಕಿ ಆಗಿದ್ದು ಕೂಡ ಅಷ್ಟೊಂದು ಸುಲಭವಾಗಿರಲಿಲ್ಲ. ಅದಕ್ಕೂ ಕೂಡ ಆ ದಿನ ರಾತ್ರಿ ಎನ್ನದೆ ಕಷ್ಟಪಟ್ಟಿದ್ದಾರೆ. ಇಂದು ಅನುಶ್ರೀ ಅವರು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಖಂಡಿತ ಅವರ ಪರಿಶ್ರಮವೇ ಕಾರಣ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ಈಗಾಗಲೇ ಅನುಶ್ರೀ ಅವರಿಗೆ ವಯಸ್ಸು 33.

ಹೆಣ್ಣು ಮಕ್ಕಳ ವಯಸ್ಸು ಎಂದಾಕ್ಷಣ ಮೊದಲಿಗೆ ಮಾತು ಬರುವುದೇ ಅವರ ಮದುವೆ ವಿಚಾರ. ಈ ಹಿಂದೆ ಹಲವಾರು ಬಾರಿ ಅನುಶ್ರೀ ಅವರ ಮದುವೆ ವಿಚಾರಗಳು ಬಂದಿದ್ದು ಆದರೆ ಅವುಗಳು ಯಾವುವು ಕೂಡ ಸತ್ಯ ಆಗಿರಲಿಲ್ಲ. ಆದರೆ ಈಗ ಸದ್ಯದಲ್ಲೇ ಅನುಶ್ರೀ ಅವರು ಹಸೆಮಣೆ ಏರುವ ಎಲ್ಲಾ ಲಕ್ಷಣಗಳು ಕೂಡ ಸನ್ನಿಹಿತವಾಗಿದೆ. ಹೌದು ಗೆಳೆಯರೇ ಯುಗಾದಿ ಸಂದರ್ಭದಲ್ಲಿ ಅನುಶ್ರೀ ಅವರ ಮನೆಗೆ ಹೆಣ್ಣು ನೋಡಲು ಹುಡುಗ ಬಂದಿದ್ದ. ಇನ್ನು ಅನುಶ್ರೀ ಅವರನ್ನು ಆತ ಒಪ್ಪಿಕೊಂಡಿದ್ದಾನೆ. ಇನ್ನು ಅನುಶ್ರೀ ಅವರನ್ನು ಮದುವೆ ಆಗುವ ಹುಡುಗ ರಿಯಲ್ ಎಸ್ಟೇಟ್ ಕ್ಷೇತ್ರದವರಾಗಿದ್ದಾರೆ. ತಾಯಿಯ ಆಸೆಗಾಗಿ ಕೊನೆಗೂ ಕೂಡ ಅನುಶ್ರೀ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಅತಿಶೀಘ್ರದಲ್ಲೇ ಎಂಗೇಜ್ಮೆಂಟ್ ನಡೆದು ಮದುವೆ ಕೂಡ ಮುಂದಿನ ವರ್ಷದಲ್ಲಿ ನಡೆಯುವ ಸಾಧ್ಯತೆಗಳು ಬಲ್ಲಮೂಲಗಳ ಪ್ರಕಾರ ದಟ್ಟವಾಗಿ ಕೇಳಿಬರುತ್ತಿದೆ. ಈ ವಿಚಾರ ಈಗ ಅಭಿಮಾನಿಗಳಿಗೂ ಕೂಡ ಸಂತೋಷವನ್ನು ತಂದಿದೆ.