ನಾನು ಮಾಡುವ ಸಿನೆಮಾಗೆ ಹೀರೋ ಇವರೇ ಎಂದು ಆಯ್ಕೆ ಮಾಡಿ ವಿಶ್ವ ಸುಂದರಿ, ಇವನ್ಯಾಕೆ ಬೇಕು ಎಂದ ನೆಟ್ಟಿಗರು. ಬೇರೆ ಯಾರು ಸಿಗಲಿಲ್ಲವೇ ಎಂದು ಟ್ರೊಲ್.
ನಮಸ್ಕಾರ ಸ್ನೇಹಿತರೇ ಭಾರತಕ್ಕೆ ಬರೋಬ್ಬರಿ 21 ವರ್ಷಗಳ ಬಳಿಕ ಭುವನ ಸುಂದರಿ ಕಿರೀಟ ದೊರೆತಿದೆ.2 021 ನ ಮಿಸ್ ಯೂನಿವರ್ಸ್ ಪಟ್ಟ ಪಂಜಾಬ್ ನ ಸುಂದರಿ ಹರ್ನಾಜ್ ಕೌರ್ ಸಂಧು ಪಾಲಾಗಿದೆ. ಮೂಲತಃ ರಂಗಭೂಮಿ ನಟಿಯಾಗಿದ್ದ ಹರ್ನಾಜ್ ಕೌರ್ ಸಂಧು ಐದು ವರ್ಷಗಳ ಕಾಲ ವಿವಿಧ ನಾಟಕಗಳಲ್ಲಿ ಅಭಿನಯಿಸಿದ್ದರಂತೆ. ತದನಂತರ ಮಾಡೆಲಿಂಗ್ ಜಗತ್ತಿಗೆ ಹೋದೆ ಎಂದು ಹೇಳಿದ್ದಾರೆ.

ಪ್ರತಿಷ್ಠಿತ ಕೀರಿಟ ದೊರೆತ ನಂತರ ಮಾತನಾಡಿದ ಹರ್ನಾಜ್ ಸಂಧು, ತನಗೂ ಬಾಲಿವುಡ್ ನಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿಕೊಂಡರು. ಆದರೇ ನಾನು ನಟಿಸುವ ಸಿನಿಮಾಕ್ಕೆ ಇವರೆ ನಿರ್ದೇಶಕರಾಗಬೇಕು ಹಾಗೂ ಇವರೇ ನಾಯಕರಾಗಬೇಕು ಎಂದು ಷರತ್ತು ಹಾಕಿದ್ದಾರೆ. ಅಷ್ಟಕ್ಕೂ ಹರ್ನಾಜ್ ಇಷ್ಟಪಟ್ಟಿರುವ ಆ ನಟ ಹಾಗೂ ನಿರ್ದೇಶಕ ಯಾರು ಎಂಬುದನ್ನ ತಿಳಿಯೋಣ.
ಹರ್ನಾಜ್ ಇಷ್ಟಪಟ್ಟಿರುವ ನಟ ಎಂದರೇ ಅದು ಶಾರೂಖ್ ಖಾನ್. ಹೌದು ಹರ್ನಾಜ್ ಗೆ ನಟ ಶಾರೂಖ್ ಖಾನ್ ಎಂದರೇ ಪಂಚಪ್ರಾಣವಂತೆ. ಮೊದಲಿನಿಂದಲೂ ನನಗೆ ಅವರ ವ್ಯಕ್ತಿತ್ವ ಇಷ್ಟ. ಹಾಗಾಗಿ ನಾನು ಬಾಲಿವುಡ್ ನಲ್ಲಿ ನಟಿಸಬೇಕೆಂದರೇ ಆ ಸಿನಿಮಾದ ನಾಯಕ ನಟನಾಗಿ ಶಾರೂಖ್ ಖಾನ್ ಇರಬೇಕು ಎಂದು ಹೇಳಿದ್ದಾರೆ. ಇನ್ನು ಆ ಸಿನಿಮಾ ನಿರ್ದೇಶನವನ್ನು ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರು ಮಾಡಬೇಕಂತೆ. ಬನ್ಸಾವಿ ಸಿನಿಮಾಗಾಗಿ ಮಾಡುವ ಕೆಲಸ, ಕಲಾತ್ಮಕತೆ, ಅವರ ಕಥೆ, ಚಿತ್ರಕತೆ , ನಿರ್ದೇಶನದ ಶೈಲಿ ನನಗೆ ಬಹಳ ಇಷ್ಟ. ಅವರು ನಿರ್ದೇಶಿಸಿರುವ ಎಲ್ಲಾ ಸಿನಿಮಾಗಳನ್ನು ನಾನು ನೋಡಿದ್ದೇನೆ ಎಂದು ಹೇಳಿದರು. ಇದಾದ ಬಳಿಕ ಇವರ ಹೇಳಿಕೆ ಸಾಕಷ್ಟು ಟ್ರೊಲ್ ಗಳು ಬಂದಿದ್ದು, ಹಲವಾರು ವರ್ಷಗಳಿಂದ ಯಶಸ್ಸು ಕಾಣದ ಇವರ ಮೇಲೆ ಯಾಕೆ ನಿಮಗೆ ಕಣ್ಣು ಬೇರೆ ಯಾರನ್ನಾದರೂ ಆಯ್ಕೆ ಮಾಡಿ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.