ಶುರುವಾಯಿತು ದ್ರಾವಿಡ್ ರವರ ಅಸಲಿ ಆಟ, ಭಾರತವನ್ನು ಗೆಲ್ಲಿಸುವುದಕ್ಕಾಗಿ ಹಿರಿಯ ಆಟಗಾರರಿಗೆ ಕೊಟ್ಟ ಎಚ್ಚರಿಕೆ ಏನು ಗೊತ್ತೇ??

7,646

ನಮಸ್ಕಾರ ಸ್ನೇಹಿತರೇ ಕನ್ನಡಿಗ ರಾಹುಲ್ ದ್ರಾವಿಡ್ ಕೋಚ್ ಆದ ನಂತರ ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿರುವುದು ಗಮನಿಸಿದ್ದಿರಿ. ಸದ್ಯ ದಕ್ಷಿಣ ಆಫ್ರಿಕಾ ವಿರುದ್ದ ಸರಣಿ ಆಡುತ್ತಿರುವ ಭಾರತ ತಂಡದ ಹಿರಿಯ ಆಟಗಾರರಿಗೆ ರಾಹುಲ್ ದ್ರಾವಿಡ್ ಒಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಹೌದು ಸದ್ಯ ಭಾರತ ತಂಡದಲ್ಲಿ 7 ಆಟಗಾರರು 33ಕ್ಕೂ ಹೆಚ್ಚು ವಯಸ್ಸಿನವರಾಗಿದ್ದರೇ, ಐದು ಆಟಗಾರರು 30 ವರ್ಷ ಮೇಲಿನವರಾಗಿದ್ದಾರೆ.

ಸೆಂಚೂರಿಯನ್ ನ ಪಂದ್ಯಕ್ಕೆ ಆಯ್ಕೆಯಾದ ಇಲೆವೆನ್ ಬಗ್ಗೆ ಮಾತನಾಡಿದ ರಾಹುಲ್ ದ್ರಾವಿಡ್, ತಂಡದಲ್ಲಿ ಸ್ಥಾನ ಪಡೆದ ಪ್ರತಿಯೊಬ್ಬ ಆಟಗಾರನೂ, ಅಂತಿಮ ಇಲೆವೆನ್ ನಲ್ಲಿ ಆಡಲು ಆಸೆಪಡುತ್ತಿರುತ್ತಾನೆ. ಕೆಲವೊಮ್ಮೆ ನಾವು ಆಟಗಾರರೊಂದಿಗೆ ಕೆಟ್ಟ ಸಂಭಾಷಣೆ ನಡೆಸಬೇಕಾಗುತ್ತದೆ. ಹಾಗೆ ನಡೆಸಿದಾಗ ಆಟಗಾರನ ಮನಸ್ಸಿಗೆ ಬೇಜಾರವಾದರೂ, ನಾವು ಸುಮ್ಮನಿರಬೇಕಾಗುತ್ತದೆ. ಅಂತಿಮವಾಗಿ ಗೆಲ್ಲುವ ಹನ್ನೊಂದರ ಬಳಗವನ್ನಷ್ಟೇ ನಾವು ಮೈದಾನಕ್ಕೆ ಇಳಿಸಬೇಕಾಗುತ್ತದೆ ಎಂದು ಹೇಳಿದ್ದರು.

ಈ ಹೇಳಿಕೆ ಹಿರಿಯ ಆಟಗಾರರಿಗೆ ಎಚ್ಚರಿಕೆಯ ಕರೆಘಂಟೆಯಾಗಿದೆ. ಸದ್ಯ ಭಾರತ ತಂಡದ ಬೆಂಚ್ ಸ್ಟ್ರೆಂತ್ ಅತ್ಯುತ್ತಮವಾಗಿದ್ದು, ಪದೇ ಪದೇ ವಿಫಲರಾಗುತ್ತಿರುವ ಹಿರಿಯ ಆಟಗಾರರು ಅಥವಾ ಫಿಟ್ನೇಸ್ ಹಾಗೂ ಫಾರ್ಮ್ ಕೊರತೆಯಿಂದ ಬಳಲುತ್ತಿರುವ ಆಟಗಾರರನ್ನು ಮುಲಾಜಿಲ್ಲದೇ ತಂಡದಿಂದ ಹೊರಗಿಡಲಿದ್ದಾರಂತೆ. ಈ ಕಾರಣಕ್ಕಾಗಿ ಸೆಂಚೂರಿಯನ್ ಪಂದ್ಯದಲ್ಲಿ ಇಶಾಂತ್ ಶರ್ಮಾ ಬದಲು ಮಹಮದ್ ಸಿರಾಜ್ ಸ್ಥಾನ ಪಡೆದಿರುವುದು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಖಡಕ್ ಕೋಚ್ ಆಗಿರುವ ರಾಹುಲ್ ದ್ರಾವಿಡ್ ನಿಂದ ತಂಡ ಮತ್ತಷ್ಟು ಯಶಸ್ಸುಗಳಿಸಲಿ ಎಂದು ಹಾರೈಸೋಣ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.