ಅದಿತಿ ಪ್ರಭುದೇವ ಮದುವೆಯಾಗುತ್ತಿರುವ ಹುಡುಗ ಯಾರು ಮತ್ತು ಆತನ ಬಳಿಯಿರುವ ಆಸ್ತಿ ಎಷ್ಟು ಕೋಟಿಯಂತೆ ಗೊತ್ತಾ??

120

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಉದಯೋನ್ಮುಖ ನಟಿ ಎಂದರೆ ಅದು ನಟಿ ಅದಿತಿ ಪ್ರಭುದೇವ. ತನ್ನ ಅದ್ಭುತ ನಟನೆಯಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಮೊದಲಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು ನಮ್ಮ ನಟಿ ಅದಿತಿ ಪ್ರಭುದೇವ. ಗುಂಡ್ಯಾನ ಹೆಂಡತಿ ಧಾರವಾಹಿ ಮೂಲಕ ಪರಿಚಿತರಾಗಿ ಅದಿತಿ ಪ್ರಭುದೇವ ನಂತರ ನಾಗಿಣಿ ಧಾರವಾಹಿಯಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಕೃಷ್ಣ ಅಜಯ್ ರಾವ್ ನಟನೆಯ ಧೈರ್ಯಂ ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಂಡರು ಕೂಡ ಜನಪ್ರಿಯತೆ ಸಿಕ್ಕಿದ್ದು ಧನ್ವೀರ್ ನಟನೆಯ ಬಜಾರ್ ಚಿತ್ರದ ಮೂಲಕ.

ನಂತರ ಸಿಂಗ ಬ್ರಹ್ಮಚಾರಿ ಹೀಗೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದ ಅಪ್ಪಟ ಕನ್ನಡತಿ ನಟಿಯೆಂದರೆ ಅದಿತಿ ಪ್ರಭುದೇವ ಎನ್ನಬಹುದು. ಅಷ್ಟರಮಟ್ಟಿಗೆ ಮಾಡರ್ನ್ ದುನಿಯಾದಲ್ಲಿ ಸಾಂಸ್ಕೃತಿಕವಾಗಿ ಕಾಣುತ್ತಾರೆ. ಇನ್ನು ಇವರು ಒಮ್ಮೆ ಅವರ ಮದುವೆ ಕುರಿತಂತ ಕೇಳಿದಾಗ ನಾನು ಅರೆಂಜ್ ಮ್ಯಾರೇಜ್ ಆಗುತ್ತೇನೆ ಯಾಕೆಂದರೆ ಲವ್ ಮಾಡಿ ಮದುವೆಯಾಗಲು ಟೈಮಿಲ್ಲ ಎಂಬುದಾಗಿ ಹಾಸ್ಯಸ್ಪದವಾಗಿ ಹೇಳಿದ್ದರು. ಆದರೆ ಈಗ ಅದಿತಿ ಪ್ರಭುದೇವ ರವರ ಮದುವೆಯನ್ನು ನೋಡಲು ಅವರ ಮನೆಯ ಹಿರಿಯವರು ಕಾತರರಾಗಿದ್ದು ಅದಿತಿ ಪ್ರಭುದೇವ ರವರು ಈಗ ತಾವು ಪ್ರೀತಿಸಿರುವ ಹುಡುಗನನ್ನು ಮದುವೆ ಆಗಲು ಹೊರಟಿದ್ದಾರೆ.

ಹಾಗಿದ್ದರೆ ಆ ಹುಡುಗ ಯಾರು ಮತ್ತು ಆತನ ಬಳಿ ಎಷ್ಟು ಕೋಟಿ ಆಸ್ತಿ ಇದೆ ಎಂಬುದರ ಕುರಿತಂತೆ ನಿಮಗೆ ಹೇಳುತ್ತೇವೆ. ಹೌದು ಗೆಳೆಯರ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಯಶಸ್ ಎಂಬುವವರನ್ನು ನಟಿ ಅದಿತಿ ಪ್ರಭುದೇವ ರವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಅತಿಶೀಘ್ರದಲ್ಲೇ ಗುರು ಹಿರಿಯರ ಸಮ್ಮುಖದಲ್ಲಿ ಇವರಿಬ್ಬರ ಮದುವೆ ನೆರವೇರಲಿದೆ. ಇನ್ನು ಯಶಸ್ಸು ರವರು ಅಗ್ರಿಕಲ್ಚರ್ ನಲ್ಲಿ ಎಂಜಿನಿಯರಿಂಗ್ ಮಾಡಿದ್ದಾರೆ. ಇವರ ಸ್ವಂತ ಕಾಫಿ ಎಸ್ಟೇಟ್ ಹಾಗೂ ತೋಟವಿದ್ದು ಲಕ್ಷಾಂತರ ಗಳಿಕೆ ಮಾಡುವವರಾಗಿದ್ದಾರೆ. ಇನ್ನು ಇವರ ಒಟ್ಟು ಆಸ್ತಿ ಎರಡರಿಂದ ಎರಡುವರೆ ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ, ಈ ಕುರಿತು ಸಾಕಷ್ಟು ವಿಡಿಯೋ ಗಳು ಕೂಡ ಹರಿದಾಡುತ್ತಿವೆ. ಅದಿತಿ ಪ್ರಭುದೇವ ರವರ ಮದುವೆಯನ್ನು ನೋಡಲು ಯಾರೆಲ್ಲ ಕಾತುರರಾಗಿದ್ದೀರಿ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.