ಅಲ್ಲು ಅರ್ಜುನ್ ರವರ ದುಬಾರಿ ಬೆಲೆಯ ವ್ಯಾನಿಟಿ ವ್ಯಾನ್ ಬೆಲೆ ಎಷ್ಟು ಗೊತ್ತಾದರೆ ತಲೆ ತಿರುಗುತ್ತದೆ, ಒಳಗಡೆ ಹೇಗಿದೆ ತೋರಿಸ್ತೇವೆ ನೋಡಿ.

1,899

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ತಾಯಿಯಾಗಿರುವ ನಟ ಯಾರು ಎಂದು ಕೇಳಿದಾಗ ನಮಗೆಲ್ಲ ನೆನಪು ಬರುವುದು ಅಲ್ಲುಅರ್ಜುನ್ ರವರ ಹೆಸರು ಎಂದರೆ ತಪ್ಪಾಗಲ್ಲ. ಯಾಕೆಂದರೆ ಅವರು ಮೊದಲಿನಿಂದಲೂ ಕೂಡ ತಮ್ಮ ಲುಕ್ ಬಗ್ಗೆ ವಿಶೇಷವಾದ ಕಾಳಜಿ ಹೊಂದಿದ್ದರು.

ಅಲ್ಲು ಅರ್ಜುನ್ ರವರು ಗಂಗೋತ್ರಿ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ಅಲ್ಲು ಅರ್ಜುನ್ ರವರು ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ನಟ ಆಗಿರುವ ಅಲ್ಲು ಅರವಿಂದ್ ಅವರ ಪುತ್ರನಾಗಿರುತ್ತಾರೆ. ನಟಿಸಿದ್ದು ಕೇವಲ ತೆಲುಗು ಚಿತ್ರರಂಗದಲ್ಲಿ ಆದರೂ ಕೂಡ ಹಿಂದಿ ಚಿತ್ರರಂಗದಲ್ಲಿ ಕೂಡ ಹಲವಾರು ಅಭಿಮಾನಿಗಳನ್ನು ಅಲ್ಲು ಅರ್ಜುನ್ ಅವರು ಹೊಂದಿದ್ದಾರೆ. ಅದಕ್ಕೆ ಉತ್ತಮ ನಿದರ್ಶನವೆಂದರೆ ಇತ್ತೀಚಿಗಷ್ಟೇ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ಹಿಂದಿಯಲ್ಲಿ ಬಿಡುಗಡೆಯಾಗಿ ಈಗಾಗಲೇ ಬರೋಬ್ಬರಿ 50 ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಪಡೆಯುವತ್ತ ಮುನ್ನುಗ್ಗುತ್ತಿದೆ. ಈಗ ಸುದ್ದಿಯಾಗುತ್ತಿರುವುದು ಅವರ ಸಿನಿಮಾಗಿಂತ ಹೆಚ್ಚಾಗಿ ಅವರ ವ್ಯಾನಿಟಿ ವ್ಯಾನ್ ಕುರಿತಂತೆ.

ಹೌದು ಗೆಳೆಯರೇ ಫಾಲ್ಕನ್ ಹೆಸರಿನಲ್ಲಿ ಕಪ್ಪು ಬಣ್ಣದಲ್ಲಿ ಮಿಂಚುತ್ತಿರುವ ಈ ಸುಂದರ ವ್ಯಾನಿಟಿ ವ್ಯಾನ್ ಬೆಲೆ ಕೇಳಿದರೆ ಖಂಡಿತವಾಗಿ ನಿಮಗೆ ಕೂಡ ಆಶ್ಚರ್ಯ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಈ ದುಬಾರಿ ಬೆಲೆಯ ವ್ಯಾನಿಟಿ ವ್ಯಾನ್ ಬೆಲೆ ಹಾಗೂ ಅದರ ವಿಶೇಷತೆಗಳನ್ನು ನಿಮಗೆ ಹೇಳಲಿದ್ದೇವೆ. ಅಲ್ಲು ಅರ್ಜುನ್ ರವರ ಫಾಲ್ಕನ್ ವ್ಯಾನಿಟಿ ಬ್ಯಾಗ್ ಬೆಲೆ ಬರೋಬ್ಬರಿ ಏಳು ಕೋಟಿ ರೂಪಾಯಿ. ಇದನ್ನು ರೆಡ್ಡಿ ಕಸ್ಟಮ್ಸ್ ಸಂಸ್ಥೆಯವರು ಬರೋಬ್ಬರಿ ಐದು ತಿಂಗಳುಗಳ ಕಾಲ ಮಾಡಿಫಿಕೇಷನ್ ಮಾಡಲು ತೆಗೆದುಕೊಂಡಿದ್ದಾರೆ. ಇದರಲ್ಲಿ ಎಎ ಅಂದರೆ ಅಲ್ಲುಅರ್ಜುನ್ ರವರ ಹೆಸರನ್ನು ಸೂಚಿಸುವ ಸಾಂಕೇತಿಕ ಗುರುತು ಕೂಡ ದೊಡ್ಡದಾಗಿದೆ. ಎಲ್ಲಾ ಐಷಾರಾಮಿ ಸುವ್ಯವಸ್ಥೆ ಗಳು ಕೂಡ ಈ ವ್ಯಾನಿಟಿ ವ್ಯಾನ್ ನಲ್ಲಿ ಇದೆ. ಒಟ್ಟಾರೆಯಾಗಿ ಹೇಳುವುದಾದರೆ ಅಲ್ಲು ಅರ್ಜುನ್ ರವರಷ್ಟೇ ಸ್ಟೈಲಿಶ್ ಆಗಿ ಅವರ ವ್ಯಾನಿಟಿ ವ್ಯಾನ್ ಕೂಡ ಇದೆ.