ಹಲವಾರು ದಿನಗಳ ಬ್ರೇಕ್ ನಂತರ ಮತ್ತೊಂದು ಉದ್ಯಮ ಆರಂಭಿಸಿದ ನಟಿ ರಾಗಿಣಿ ದ್ವಿವೇದಿ ಏನು ಗೊತ್ತೇ?? ನೀವು ಮನೆಯಲ್ಲಿ ಕುಳಿತೇ ಎಲ್ಲ ತಿಳಿದುಕೊಳ್ಳಬಹುದು.
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಟಿಯರಲ್ಲಿ ನಟಿ ರಾಗಿಣಿ ಅವರು ಕೂಡ ಒಬ್ಬರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮದಕರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ರಾಗಿಣಿ ಅವರು ಈಗಾಗಲೇ ಹಲವಾರು ಸ್ಟಾರ್ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪರಭಾಷಿಗರಾಗಿದ್ದರು ಕೂಡ ಕನ್ನಡ ಚಿತ್ರರಂಗದಲ್ಲಿ ನಟಿಸಿದ ಮೇಲೆ ಕನ್ನಡವನ್ನು ಚೆನ್ನಾಗಿ ಕಲಿತರು ಹಾಗೂ ಕನ್ನಡ ಸಂಸ್ಕೃತಿಗೆ ಒಗ್ಗಿಕೊಂಡಿದ್ದಾರೆ.
ಇನ್ನು ನಟಿ ರಾಗಿಣಿ ದ್ವಿವೇದಿ ಅವರ ಹಲವಾರು ವಿಚಾರಗಳಿಗೆ ಸುದ್ದಿ ಆದರೂ ಕೂಡ ಚಿತ್ರರಂಗ ಹಾಗೂ ನಟನೆ ಎಂಬ ವಿಚಾರಕ್ಕೆ ಬಂದರೆ ಸದಾ ಶ್ರದ್ಧೆ ವಹಿಸಿ ಕೆಲಸ ಮಾಡುತ್ತಿದ್ದರು. ಇನ್ನು ಕೆಲವು ಪ್ರಕರಣಗಳಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗಡೆ ಬಂದಿರುವ ರಾಗಿಣಿ ದ್ವಿವೇದಿಯವರು ಒಪ್ಪಿಕೊಂಡಿರುವ ಎಲ್ಲಾ ಸಿನಿಮಾಗಳಲ್ಲಿ ಕೂಡ ನಡೆಸಲು ಆರಂಭಿಸಿದ್ದು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ನಟಿ ರಾಗಿಣಿ ದ್ವಿವೇದಿ ಯವರು ನಿಮಗೆಲ್ಲರಿಗೂ ತಿಳಿದಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾಕಷ್ಟು ದೊಡ್ಡಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ.

ಇನ್ನು ಈಗ ನಟನೆಯ ಜೊತೆಗೆ ಹೊಸ ಉದ್ಯಮವನ್ನು ಕೂಡ ನಟಿ ರಾಗಿಣಿ ದ್ವಿವೇದಿ ಅವರ ಪ್ರಾರಂಭಿಸಿದ್ದಾರೆ. ಹಾಗಿದ್ದರೆ ರಾಗಿಣಿ ದ್ವಿವೇದಿ ಅವರು ಪ್ರಾರಂಭಿಸಿರುವ ಹೊಸ ಉದ್ಯಮ ಏನು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ. ಹೌದು ತಮ್ಮ ಜೀವನದ ಆಗುಹೋಗುಗಳನ್ನು ಬೇರೆ ಯಾವುದಾದರೂ ಸ್ಥಳಕ್ಕೆ ಹೋದರೆ ಸ್ಥಳದ ಕುರಿತಂತೆ ಫ್ಯಾಶನ್ ಫಿಟ್ನೆಸ್ ಆರೋಗ್ಯ ಕ್ರಮದ ಕುರಿತಂತೆ ಹೀಗೆ ತಮ್ಮ ಜೀವನದ ಎಲ್ಲಾ ಕ್ಷಣಗಳನ್ನು ಕೂಡ ವಿಡಿಯೋ ಮುಖಾಂತರ ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲಿದ್ದಾರೆ. ರಾಗಿಣಿ ಅವರು ಹೊಸ ಚಾನೆಲ್ ಅನ್ನು ಪ್ರಾರಂಭಿಸಿದ್ದು ಇದರಿಂದ ಹಣ ಕೂಡ ಬರುವುದರಿಂದ ಇದನ್ನು ಹೊಸ ಉದ್ಯಮದ ರೀತಿಯಲ್ಲಿ ತೆಗೆದುಕೊಳ್ಳಬಹುದು.