ಇತಿಹಾಸದಲ್ಲಿ ಅತ್ಯಂತ ಮೂವರು ಸುಂದರ ರಾಣಿಯರು ಯಾರು ಗೊತ್ತಾ, ಇವರಿಗಾಗಿ ಯುದ್ಧವೇ ನಡೆದುಹೋಗಿದ್ದವು. ಹೇಗಿದ್ದರೂ ಗೊತ್ತೇ??
ನಮಸ್ಕಾರ ಸ್ನೇಹಿತರೇ ಮಹಿಳೆಯಿಂದ ಮೇಲೆ ಆಕೆಯ ಮುಖಕ್ಕೆ ಸೌಂದರ್ಯ ಎನ್ನುವುದು ಶೋಭೆ ತರುವಂತಹ ಆವರಣವಾಗಿದೆ. ಇನ್ನು ಇಂದು ನಾವು ಹೇಳಲು ಹೊರಟಿರುವುದು ಇದೇ ಮಾದರಿಯ ವಿಚಾರ. ನಮ್ಮ ಇತಿಹಾಸವನ್ನು ಕೆದಕಿ ನೋಡಿದರೆ ಅಲ್ಲಿ ಹಲವಾರು ಯು’ದ್ಧಗಳು ಮಹಿಳೆಯರಿಗಾಗಿ ನಡೆದಿದೆ ಎಂಬುದು ನೀವೆಲ್ಲಾ ನಂಬಲೇ ಬೇಕಾದಂತಹ ಅಂಶ.
ಉದಾಹರಣೆಗೆ ಮಹಾಭಾರತದಲ್ಲಿ ದ್ರೌಪದಿ ಗಾಗಿ ನಡೆದರೆ ರಾಮಾಯಣದಲ್ಲಿ ಸೀತಾಮಾತೆಗಾಗಿ ನಡೆದಿತ್ತು. ಹೌದು ಗೆಳೆಯರೇ ಇದೇ ಮಾದರಿಯಲ್ಲಿ ಇತಿಹಾಸದಲ್ಲಿ ಕೂಡ ಹಲವಾರು ಸುಂದರ ರಾಣಿ ಯರಿಗಾಗಿ ಕದನಗಳು ನಡೆದಿವೆ. ಹಾಗಿದ್ದರೆ ಆ ಸುಂದರ 3 ರಾಣಿಯರು ಯಾರು. ಅವರ ಕುರಿತಂತೆ ಎಲ್ಲಾ ವಿಚಾರಗಳನ್ನು ನಾವು ನಿಮಗೆ ಸವಿಸ್ತಾರವಾಗಿ ಹೇಳಲಿದ್ದೇವೆ ಬನ್ನಿ ತಪ್ಪದೇ ಈ ವಿಚಾರವನ್ನು ಕೊನೆಯವರೆಗೂ ಓದಿ.

ರಾಣಿ ಪದ್ಮಿನಿ ರಾಣಿ ಪದ್ಮಿನಿ ಚಿತ್ತೋಡಗಡ ರಾಣಿಯಾಗಿದ್ದಳು. ಇನ್ನು ಇತಿಹಾಸದಲ್ಲೇ ಅತ್ಯಂತ ಸುಂದರಿ ಎಂಬ ಕಥೆಗಳು ಕೂಡ ಇತಿಹಾಸದ ಪುಟಗಳಲ್ಲಿ ಹರಿದಾಡುತ್ತವೆ. ಅವಳ ಸೌಂದರ್ಯಕ್ಕೆ ಮಾರು ಹೋಗಿ ಚಿತ್ತೋಡದ ರಾಜ ರಾಜಾ ರತನ್ ಸಿಂಗ್ ಇವಳನ್ನು ಮದುವೆಯಾಗುತ್ತಾನೆ. ಹಿಂದಿನ ಕಾಲದಲ್ಲಿ ಭಾರತದ ದೇಶದಾದ್ಯಂತ ಅಲ್ಲಾವುದ್ದೀನ್ ಖಿಲ್ಜಿ ಸಂತಾನದ ಪ್ರಾಬಲ್ಯವಿತ್ತು.
ಇನ್ನು ರಾಣಿ ಪದ್ಮಿನಿಯ ಸೌಂದರ್ಯದ ವಿಚಾರ ಅಲ್ಲಾವುದ್ದಿನ್ ಖಿಲ್ಜಿ ಗೂ ಕೂಡ ತಿಳಿಯಿತು. ಹೀಗಾಗಿ ಆತ ಚಿತ್ತೋಡ ಕ್ಕೆ ಮುತ್ತಿಗೆ ಹಾಕಿ ಎಂಟು ತಿಂಗಳುಗಳ ಕಾಲ ಡೇರೆ ಹಾಕಿದ್ದ. ಕೊನೆಗೂ ಕೂಡ ಆತ ರಾಣಿಯನ್ನು ಪಡೆಯಲು ಆಗಲಿಲ್ಲ. ಯಾಕೆಂದರೆ ರಾಣಿ ಪದ್ಮಿನಿ ಪರಪುರುಷನ ಕೈಗೆ ಸಿಗುವುದಕ್ಕಿಂತ ಸತಿಸಹಗಮನ ಮಾಡುವುದೇ ಮೇಲೆ ಎಂಬುದಾಗಿ ಸಾಮೂಹಿಕ ಅಗ್ನಿ ಪ್ರವೇಶಕ್ಕೆ ತುತ್ತಾದರು. ಇನ್ನು ಇದು ಇತ್ತೀಚಿಗಷ್ಟೇ ಬಾಲಿವುಡ್ನಲ್ಲಿ ರಣವೀರ್ ಸಿಂಗ್ ಶಾಹಿದ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಕಾಂಬಿನೇಷನ್ನಲ್ಲಿ ಪದ್ಮಾವತಿ ಚಿತ್ರವಾಗಿ ಕೂಡ ಮೂಡಿಬಂದು ಪ್ರೇಕ್ಷಕರ ಮನ ಗೆಲ್ಲಲು ಯಶಸ್ವಿಯಾಗಿತ್ತು.

ರಾಣಿ ಜೋಧಾಬಾಯಿ ಆಮೇರ್ ರಾಜಪುತ್ ಸಂಸ್ಥಾನದ ರಾಜಕುಮಾರಿ ಆಗಿರುವ ರಾಣಿ ಜೋಧಾಬಾಯಿ ಅವರನ್ನು ಮುಘಲ್ ಸಂಸ್ಥಾನದ ಬಾದಶಹ ಅಕ್ಬರ್ ಮದುವೆಯಾಗಿರುವುದು ನಿಮಗೆಲ್ಲಾ ಇತಿಹಾಸದ ಪುಟಗಳಿಂದ ಕೇಳಿ ಅದನ್ನು ತಿಳಿದುಕೊಂಡಿರುತ್ತೀರಿ. ಇನ್ನು ಜೋದಾಬಾಯಿ ಯನ್ನು ಪಡೆಯಲು ಕೂಡ ಅಕ್ಬರ್ ಆಮೇರ್ ಮೇಲೆ ದಂಡೆತ್ತಿ ಹೋಗಿದ್ದ.
ಇದಕ್ಕೆ ಕಾರಣ ಒಂದು ಸಮಾರಂಭದಲ್ಲಿ ಜೋಧಾಬಾಯಿ ಯನ್ನು ನೋಡಿದ್ದ ಅಕ್ಬರ್ ಅವಳಿಗೆ ಸಂಪೂರ್ಣವಾಗಿ ಮನಸೋತು ಹಾಕಿಯನ್ನು ತನ್ನವಳನ್ನಾಗಿ ಮಾಡಬೇಕೆಂಬ ಆಸೆಯಿಂದ ಅವಳ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅವಳನ್ನು ಗೆದ್ದುಕೊಂಡು ಬಂದಿದ್ದ. ಇನ್ನು ಇವರಿಬ್ಬರ ಪ್ರೇಮ ಪುರಾಣದ ಕುರಿತಂತೆ ಬಾಲಿವುಡ್ನಲ್ಲಿ ಜೋಧಾಅಕ್ಬರ್ ಎಂಬ ಸಿನಿಮಾ ಕೂಡ ಬಂದಿದ್ದು ಐಶ್ವರ್ಯ ರೈ ಬಚ್ಚನ್ ಹಾಗೂ ಹೃತಿಕ್ ರೋಷನ್ ಇದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶಹಜಾದಿ ಫಿರೋಜಾ ಖಿಲ್ಜಿಯ ಮಗಳಾಗಿರುವ ಫಿರೋಜಾ ಸಾಕಷ್ಟು ಸುಂದರಿಯಾಗಿದ್ದಳು. ಇನ್ನು ಈಕೆ ಚಾಲೋರ್ ನ ರಾಜನನ್ನು ಪ್ರೀತಿಸುತ್ತಿದ್ದಳು. ಇದರಿಂದ ಕ್ರೋಧಿತನಾಗಿ ಅಂತಹ ಕೆಲಸ ರಾಜ್ಯಕ್ಕೆ ದಂಡೆತ್ತಿ ಹೋಗಿ ಆತನನ್ನು ಮುಗಿಸಿ ಬರುತ್ತಾನೆ. ನೋಡಿದ್ರಲ್ಲ ಗೆಳೆಯರೇ ಈ ಮೂರು ರಾಣಿಯರು ಇತಿಹಾಸದಲ್ಲಿ ಅತ್ಯಂತ ಹೆಚ್ಚು ಸುಂದರಿಯರು ಎಂಬ ಪಟ್ಟವನ್ನು ಪಡೆದುಕೊಂಡವರು. ಇವರ ಕುರಿತಂತೆ ನಾವು ನಿಮಗೆ ವಿವರವಾಗಿ ಉಪಯುಕ್ತ ಮಾಹಿತಿಗಳನ್ನು ನೀಡಿದ್ದೇವೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.