ಅಪ್ಪಿ ತಪ್ಪಿಯೂ ಕೂಡ ಈ ನಾಲ್ಕು ಗಂಡನ ವಿಚಾರಗಳನ್ನು ಹೆಂಡತಿ ಬೇರೆಯವರಿಗೆ ಹೇಳಲೇಬಾರದು, ಯಾವ್ಯಾವು ಗೊತ್ತೇ, ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ದೇಶದಲ್ಲಿ ಅತ್ಯಂತ ಬುದ್ಧಿವಂತ ವ್ಯಕ್ತಿ ಯಾರೆಂದು ಕೇಳಿದಾಗ ಚಾಣಕ್ಯನ ಹೆಸರು ಎಲ್ಲರಿಗಿಂತ ಮೊದಲಿಗೆ ಕೇಳಿಬರುತ್ತದೆ. ಐತಿಹಾಸಿಕ ಭಾರತದ ಇತಿಹಾಸದಲ್ಲಿ ಚಾಣಕ್ಯನಿಗೆ ಪ್ರಮುಖವಾದ ಸ್ಥಾನವಿದೆ. ಅಸಮಾನ್ಯ ಜ್ಞಾನವುಳ್ಳ ಪಂಡಿತ ಮಾತ್ರವಲ್ಲದೆ ಮೌರ್ಯ ಸಾಮ್ರಾಜ್ಯದಂತಹ ದೊಡ್ಡ ಸಾಮ್ರಾಜ್ಯವನ್ನು ಸ್ಥಾಪಿಸಲು ನೆರವಾಗಿರುವ ಮುಖ್ಯ ವ್ಯಕ್ತಿ ಕೂಡ ಆಗಿದ್ದರು.
ಇನ್ನು ಇಂದಿಗೂ ಕೂಡ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಚಾಣಕ್ಯ ನೀತಿಯನ್ನು ಅನುಸರಿಸಲಾಗುತ್ತದೆ. ಇನ್ನು ಇಂದು ನಾವು ಹೇಳಲು ಹೊರಟಿರುವ ವಿಚಾರದಲ್ಲಿ ಕೂಡ ಚಾಣಕ್ಯನ ನೀತಿಯಲ್ಲಿ ಇರುವಂತಹ ಕೆಲವು ಅಂಶಗಳನ್ನು ಹೇಳಲು ಹೊರಟಿದ್ದೇವೆ. ಮದುವೆ ಆದ ಮೇಲೆ ಗಂಡನ ಕುರಿತಂತೆ ಈ ನಾಲ್ಕು ವಿಚಾರಗಳನ್ನು ಹೆಂಡತಿಯರು ಯಾರಬಳಿ ಕೂಡ ಹೇಳಿಕೊಳ್ಳಬಾರದು. ಒಂದು ವೇಳೆ ಬೇರೆಯವರ ಬಳಿ ಗಂಡನ ಈ ನಾಲ್ಕು ವಿಚಾರಗಳನ್ನು ಹೇಳಿಕೊಂಡಿದ್ದೆ ಆದರೆ ಖಂಡಿತವಾಗಿಯೂ ಮುಂದಿನ ದಾಂಪತ್ಯ ಜೀವನದಲ್ಲಿ ಅವರಿಗೆ ಸಾಕಷ್ಟು ತೊಂದರೆಗಳು ಎದುರಾಗಬಹುದು.

ಹಾಗಿದ್ದರೆ ಆ 4 ವಿಚಾರಗಳು ಯಾವುವು ಹಾಗೂ ಅದರ ಕುರಿತಂತೆ ಇರುವ ವಿವರಣೆಗಳು ಏನು ಎಂಬುದನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ ತಪ್ಪದೇ ಈ ಲೇಖನಿಯನ್ನು ಕೊನೆಯವರೆಗೂ ಓದಿ. ಜಗಳದ ಕುರಿತು ಹೇಳಿಕೊಳ್ಳಬಾರದು ಮದುವೆ ಎಂದ ಮೇಲೆ ಜಗಳಗಳು ಇಲ್ಲದೆ ಸಂಸಾರ ನಡೆಯುವುದು ಸಾಧ್ಯವೇ ಇಲ್ಲ. ಹಿರಿಯರೇ ಹೇಳಿರುವಂತೆ ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂದು. ಒಂದು ವೇಳೆ ದೀರ್ಘಕಾಲದವರೆಗೆ ಗಂಡನೊಂದಿಗೆ ಜಗಳ ಮಾಡಿಕೊಂಡರು ಕೂಡ ನಿಮ್ಮಲ್ಲಿರುವ ವೈಮನಸ್ಸು ಹಾಗೂ ಮನಸ್ತಾಪಗಳನ್ನು ನಿಮ್ಮಲ್ಲಿ ಇಟ್ಟುಕೊಳ್ಳಬೇಕು ಬೇರೆ ಯಾರ ಬಳಿಯೂ ಹೇಳಿಕೊಳ್ಳಬಾರದು.

ಒಂದು ವೇಳೆ ಹೇಳಿಕೊಂಡಿದ್ದೆ ಆದಲ್ಲಿ ಮುಂದೆ ಒಂದು ದಿನ ಖಂಡಿತವಾಗಿಯೂ ಇದರಿಂದಾಗಿ ನಿಮ್ಮ ಸಂಸಾರ ಮುರಿದು ಹೋಗಬಹುದಾಗಿದೆ. ಗಂಡನ ದೌರ್ಬಲ್ಯವನ್ನು ಹೇಳಿಕೊಳ್ಳಬಾರದು ಗಂಡನ ಯಾವ ವಿಚಾರಕ್ಕಾಗಿ ಹೆಂಡತಿಯ ಬಳಿ ಹೆದರಿಕೊಳ್ಳುತ್ತಾರೆ ಎಂಬುದನ್ನು ಹೆಂಡತಿ ಅರಿತುಕೊಳ್ಳುತ್ತಾರೆ. ಹೀಗಾಗಿ ಈ ವಿಚಾರದ ಕುರಿತಂತೆ ಬೇರೆಯವರಿಗೆ ಹೇಳುವುದು ಉಚಿತವಲ್ಲ. ಇದರಿಂದಾಗಿ ನಿಮ್ಮ ಗಂಡನ ವಿರುದ್ಧ ಬೇರೆ ಯಾರಾದರೂ ಈ ವಿಚಾರವನ್ನು ಬಳಸಿಕೊಳ್ಳಬಹುದಾಗಿದೆ.
ಇದಕ್ಕಾಗಿ ಗಂಡನ ದೌರ್ಬಲ್ಯವನ್ನು ಸಮಾಜದಿಂದ ರಹಸ್ಯವಾಗಿ ಮುಚ್ಚಿಟ್ಟುಕೊಳ್ಳುವ ಜವಾಬ್ದಾರಿಯನ್ನು ಹೆಂಡತಿಯರು ಮಾಡಬೇಕು. ಗಂಡನ ಅನಾರೋಗ್ಯದ ಕುರಿತಂತೆ ಮುಚ್ಚಿಡಬೇಕು ಅನಾರೋಗ್ಯದ ಕುರಿತಂತೆ ವೈದ್ಯರು ಬಿಟ್ಟರೆ ನಿಮಗೆ ಅಂದರೆ ಹೆಂಡತಿಯರಿಗೆ ಮಾತ್ರ ತಿಳಿದಿರಬೇಕು. ಗಂಡನ ಅನಾರೋಗ್ಯದ ಕುರಿತಂತೆ ಸಮಾಜಕ್ಕೆ ತಿಳಿದರೆ ನಿಮ್ಮ ಗಂಡನಿಂದ ಸಮಾಜ ದೂರವಿರಲು ಪ್ರಯತ್ನಪಡುತ್ತದೆ ಇದರಿಂದಾಗಿ ಅವರಿಗೆ ತೊಂದರೆಗಳು ಸಾಕಷ್ಟು ಹೆಚ್ಚಾಗುತ್ತದೆ. ಹೀಗಾಗಿ ಗಂಡನ ಅನಾರೋಗ್ಯದ ಕುರಿತಂತೆ ಸಮಾಜದ ಬಳಿ ಹೇಳಿಕೊಳ್ಳುವುದು ತರವಲ್ಲ.

ಗಂಡನ ಸಂಪಾದನೆ ಕುರಿತಂತೆ ಹೇಳಿಕೊಳ್ಳಬಾರದು ಗಂಡನ ಸಂಪಾದನೆ ಕುರಿತಂತೆ ಯಾವತ್ತೂ ಕೂಡ ಸಮಾಜದವರೊಂದಿಗೆ ಅಂದರೆ ಹೊರಗಿನವರೊಂದಿಗೆ ಎಂದು ಕೂಡ ಹಂಚಿಕೊಳ್ಳಬಾರದು. ಒಂದು ವೇಳೆ ನಿಮ್ಮ ಗಂಡನ ಗಳಿಕೆ ಜಾಸ್ತಿಯಾಗಿದ್ದು ತಿಳಿದರೆ ಅವರಿಂದ ಸಾಲ ಪಡೆದುಕೊಳ್ಳಬಹುದು ಇಲ್ಲವೇ ಗಂಡನ ಗಳಿಕೆ ಕಡಿಮೆಯಾಗಿದೆ ಎಂದು ತಿಳಿದರೆ ಅವರನ್ನು ಅಪಹಾಸ್ಯಕ್ಕೀಡು ಮಾಡಬಹುದಾಗಿದೆ. ಹೀಗಾಗಿ ಗಂಡ ಎಷ್ಟೇ ದುಡಿದರೂ ಕೂಡ ಅದನ್ನು ನಿಮ್ಮಲ್ಲಿಯೇ ಇಟ್ಟುಕೊಂಡು ಅದನ್ನು ಒಳ್ಳೆಯ ರೀತಿಯಲ್ಲಿ ವಿನಿಯೋಗ ಮಾಡುವುದನ್ನು ಕಲಿತುಕೊಳ್ಳಬೇಕು ವಿನಹ ಅದನ್ನು ಊರವರ ಮೇಲೆ ಡಂಗುರ ಸಾರ ಬಾರದು. ಈ ವಿಚಾರವನ್ನು ತಪ್ಪದೆ ನೀವು ವೈವಾಹಿಕ ಜೀವನದಲ್ಲಿ ಇದ್ದರೆ ಎಡೆಬಿಡದೆ ಅನುಸರಿಸಬೇಕು.