ದರ್ಶನ್ ಅಂದು ಮಾಡಿದ ತಪ್ಪಿಗೆ ಇಂದಿಗೂ ಕೂಡ ವಿಷ್ಣು ಅಭಿಮಾನಿಗಳು ಬೇಸರವಾಗಿಯೇ ಇದ್ದಾರೆ, ದರ್ಶನ್ ಈ ರೀತಿ ಮಾಡಿದ್ದು ಎಷ್ಟು ಸರಿ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಅಗ್ರಪಂಕ್ತಿಯಲ್ಲಿ ಕಾಣಸಿಗುವುದು ವರನಟ ರಾಜಕುಮಾರ್ ಸಾಹಸಸಿಂಹ ವಿಷ್ಣುವರ್ಧನ್ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಕರಾಟೆ ಕಿಂಗ್ ಶಂಕರ್ ನಾಗ್ ರವರು. ಇವರು ಇಂದಿಗೂ ಕೂಡ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಸದಾಕಾಲ ಅಜರಾಮರವಾಗಿ ಉಳಿದುಕೊಂಡಿದ್ದಾರೆ. ಇವರು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ ಅವರ ಕುರಿತಂತೆ ಯಾರೂ ಕೂಡ ಕೆಮ್ಮೋ ಹಾಗಿಲ್ಲ ಯಾಕೆಂದರೆ ಅವರಿಗೆ ರಾಜ್ಯದಾದ್ಯಂತ ಕೋಟ್ಯಂತರ ಅಭಿಮಾನಿಗಳ ದಂಡೇ ಇದೆ. ಈಗ ನಾವು ಮಾತನಾಡಲು ಹೊರಟಿರುವುದು ಸಾಹಸಸಿಂಹ ವಿಷ್ಣುವರ್ಧನ್ ರವರ ಕುರಿತಂತೆ.
ವಿಷ್ಣುವರ್ಧನ್ ರವರು ಎಂದರೆ ಕನ್ನಡಿಗರಿಗೆ ಪೂಜ್ಯ ಭಾವನೆಯಲ್ಲಿ ಇರುವ ವ್ಯಕ್ತಿ. ತಮ್ಮ ಸಿನಿಮಾ ನಟನೆಯಿಂದಾಗಿ ಹಾಗೂ ನಿಜ ಜೀವನದಲ್ಲಿ ಇರುವ ಚಿನ್ನದಂತಹ ವ್ಯಕ್ತಿತ್ವದಿಂದಾಗಿ ಕೋಟ್ಯಾಂತರ ಅಭಿಮಾನಿಗಳನ್ನು ಹಾಗೂ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ ನಮ್ಮ ವಿಷ್ಣು ದಾದಾ. ಇನ್ನು ಇದೆ ಕೆಲವು ಸಮಯಗಳ ಹಿಂದೆ ವಿಷ್ಣುವರ್ಧನ್ ರವರ ಕುರಿತಂತೆ ತೆಲುಗು ನಟನಾಗಿರುವ ವಿಜಯ್ ರಂಗರಾಜು ಕೆಟ್ಟದಾಗಿ ಮಾತನಾಡಿದ್ದ. ಆಗ ಇಡೀ ಕನ್ನಡ ಚಿತ್ರರಂಗವೇ ವಿಜಯ್ ರಂಗರಾಜು ಗೆ ಹಿಗ್ಗಾಮುಗ್ಗಾ ಟೀಕಾಪ್ರಹಾರ ಗಳನ್ನು ಹಾಗೂ ಎಚ್ಚರಿಕೆ ನೀಡಿತ್ತು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿಚ್ಚ ಸುದೀಪ್ ಹೀಗೆ ಹಲವಾರು ನಟರು ವಿಷ್ಣುವರ್ಧನ್ ರವರ ನೆರಳಿನಲ್ಲಿ ಬೆಳೆದುಕೊಂಡು ಬಂದವರು. ವಿಷ್ಣುವರ್ಧನ್ ರವರನ್ನು ವಿಜಯ್ ರಂಗರಾಜು ನಾನು ಅವರಿಗೆ ಕಾಲರ್ ಪಟ್ಟಿ ಹಿಡಿದು ಹೊಡೆಯಲು ಹೋಗಿದ್ದೆ ಎಂಬುದಾಗಿ ತೆಗಳಿದಾಗ ಕಿಚ್ಚ ಸುದೀಪ್ ಪುನೀತ್ ರಾಜಕುಮಾರ್ ಸೇರಿದಂತೆ ಬಹುತೇಕ ಕನ್ನಡ ಚಿತ್ರರಂಗದ ಎಲ್ಲ ನಟರೂ ಕೂಡ ರಂಗರಾಜು ರವರಿಗೆ ವಾರ್ನಿಂಗ್ ನೀಡಿದ್ದರು. ಆದರೆ ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾವುದೇ ಪ್ರತಿಕ್ರಿಯೆ ನೀಡದಿದ್ದದ್ದು ಅವರ ಅಭಿಮಾನಿಗಳಿಗೆ ಹಾಗು ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ನಿರಾಸೆಯನ್ನು ಮೂಡಿಸಿದ್ದಂತೂ ಸುಳ್ಳಲ್ಲ, ಅದೇ ಕಾರಣಕ್ಕಾಗಿ ದರ್ಶನ್ ಸರ್ ಮೇಲೆ ಎಷ್ಟೇ ಪ್ರೀತಿ ತೋರಿದರೂ ಕೂಡ ಕೊಂಚ ಬೇಸರವಂತೂ ಇಂದಿಗೂ ಇದ್ದೆ ಇದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.