ಯಶ್ ರವರ ಅಮ್ಮನಿಗೆ ಪುನೀತ್ ರಾಜ್ ರವರು ನೀಡಿದ್ದ ಮಾತು ಏನು ಗೊತ್ತೇ?? ಅಪ್ಪು ಆ ಮಾತನ್ನು ಉಳಿಸಿಕೊಳ್ಳಲೇ ಇಲ್ಲ ಎಂದ ಯಶ್ ತಾಯಿ. ಏನು ಗೊತ್ತೇ??

171

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ 50 ದಿನಗಳಿಗೂ ಕೂಡ ಅಧಿಕವಾಗಿ ಸಮಯಗಳು ಕಳೆದುಹೋಗಿದೆ. ಕನ್ನಡ ಚಿತ್ರರಂಗದ ಸ್ವಚ್ಛಂದ ಮನಸ್ಸಿನ ಇಷ್ಟವಾದ ನೆಚ್ಚಿನ ನಟ ಆಗಿದ್ದರು ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಹಾಗೂ ರಾಕಿಂಗ್ ಸ್ಟಾರ್ ಯಶ್ ರವರು ಸಾಕಷ್ಟು ಸಹೋದರತ್ವದ ಸಂಬಂಧವನ್ನು ನಡೆಸಿಕೊಂಡು ಬಂದಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ರವರ ಅಮ್ಮ ಆಗಿರುವ ಪುಷ್ಪರವರ ಮೊದಲಿನಿಂದಲೂ ಕೂಡ ಅಣ್ಣಾವ್ರ ಅಭಿಮಾನಿಯಾಗಿದ್ದರು.

ಅಣ್ಣಾವ್ರ ಕಾಲಾನಂತರ ರಾಕಿಂಗ್ ಸ್ಟಾರ್ ಯಶ್ ಹಾಗೂ ಅವರ ತಂಗಿ ಅವರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಿನಿಮಾಗಳು ಎಂದರೆ ಎಲ್ಲಿಲ್ಲದ ಅಚ್ಚುಮೆಚ್ಚು. ಇನ್ನೊಮ್ಮೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಯಶ್ ರವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಶ್ ರವರ ಅಮ್ಮನಿಗೆ ಎಲ್ಲಿಲ್ಲದ ಸಂತೋಷ ಎನ್ನುವುದು ಉಕ್ಕಿ ಬಂದಿತ್ತು. ಚಿಕ್ಕಂದಿನಿಂದಲೂ ಕೂಡ ಪುನೀತ್ ರಾಜಕುಮಾರ್ ಅವರ ಬಾಲ್ಯದ ನಟನೆ ಹಾಗೂ ಪ್ರಬುದ್ಧ ನಟನೆಯನ್ನು ನೋಡಿಕೊಂಡು ಇಷ್ಟಪಟ್ಟು ಕೊಂಡು ಬಂದವರು ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ. ಇನ್ನು ಇತ್ತೀಚಿಗಷ್ಟೇ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮನೆಗೆ ಹೋಗಿ ಸಾಂತ್ವನ ಹೇಳಿದ ಪುಷ್ಪರವರ ಕೊನೆಗೂ ಕೂಡ ಅಪ್ಪು ನನಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ಇಲ್ಲ ಎಂಬುದಾಗಿ ಹೇಳಿದ್ದಾರೆ.

ಅದೇನೆಂದರೆ ಪುಷ್ಪ ಅವರಿಗೆ ಮೊದಲಿನಿಂದಲೂ ಕೂಡ ಅಪ್ಪು ಎಂದರೆ ಎಲ್ಲಿಲ್ಲದ ಅಚ್ಚುಮೆಚ್ಚು. ಒಮ್ಮೆ ಪುಷ್ಪ ರವರು ಯಶ್ ಹಾಗೂ ಅಪ್ಪು ಒಂದೇ ಸಿನಿಮಾದಲ್ಲಿ ನಟಿಸಬೇಕೆನ್ನುವುದು ಆಸೆಪಟ್ಟು ಮೂವರಿಗೂ ಕೂಡ ಹೇಳಿದ್ದರು. ಇದಕ್ಕೆ ಯಶ್ ಅಪ್ಪು ಹಾಗೂ ಅಶ್ವಿನಿ ಅವರ ಒಪ್ಪಿಗೆ ಕೂಡ ಸಿಕ್ಕಿತ್ತು. ಕೆಜಿಎಫ್ ಚಾಪ್ಟರ್ 2 ಹಾಗೂ ದ್ಲಿತ್ವ ಚಿತ್ರದ ನಂತರ ಇಬ್ಬರೂ ಜೊತೆಯಾಗಿ ನಟಿಸುವ ಪ್ಲಾನಿಂಗ್ ಇತ್ತು. ಆದರೆ ಈಗ ವಿಧಿ ಅದಕ್ಕೆ ಅವಕಾಶ ನೀಡದೆ ಇರುವುದೇ ವಿಷಾದನೀಯವಾಗಿದೆ. ದೈಹಿಕವಾಗಿ ಅಪ್ಪು ನಮ್ಮನ್ನೆಲ್ಲಾ ಅಗಲಿ ಇರಬಹುದು ಆದರೆ ಮಾನಸಿಕವಾಗಿ ಇಂದಿಗೂ ಕೂಡ ನಮ್ಮ ಮನಸಿನಾಳದಲ್ಲಿ ಅಜರಾಮರರಾಗಿ ಉಳಿದುಕೊಂಡಿದ್ದಾರೆ.