ತೆಂಗಿನಮರದಿಂದ ಮಗು ಅಳುವ ಶಬ್ದ ಕೇಳಿಸುತ್ತಿತ್ತು ಹೋಗಿ ನೋಡಿದರೆ ಏನಾಗಿತ್ತು ಗೊತ್ತಾ?? ಊರಿಗೆ ಊರೇ ಶಾಕ್ ಆಗಿದ್ದಾಗ ಟ್ವಿಸ್ಟ್ ಏನು ಗೊತ್ತೇ??

1,744

ನಮಸ್ಕಾರ ಸ್ನೇಹಿತರೇ ಇಂದು ನಾವು ಹೇಳಹೊರಟಿರುವ ಘಟನೆಯನ್ನು ಕೇಳಿದರೆ ಖಂಡಿತವಾಗಿ ನೀವು ಅಳುವುದೋ ನಗುವುದೋ ಎಂಬ ಭಾವನೆಗೆ ಗೊಂದಲದಲ್ಲಿ ಬೀಳುವುದಂತೂ ಗ್ಯಾರಂಟಿ. ಇಂದು ನಾವು ಮಾತನಾಡುತ್ತಿರುವುದು ತಮಿಳುನಾಡಿನ ನಂದಿಗುಡಿ ಎಂಬ ಊರಿನಲ್ಲಿ ವ್ಯವಸಾಯ ಮಾಡಿಕೊಂಡಿರುವ ರಮೇಶ್ ಹಾಗೂ ಸುನಿತಾ ದಂಪತಿಗಳ ಕುರಿತಂತೆ. ಇನ್ನು ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ಇನ್ನು ಇವರ ಊರಿನಲ್ಲಿ ತೆಂಗಿನ ಮರಗಳು ಹಾಗೂ ಮಾವಿನ ಮರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದವು.

ಒಂದು ದಿನ ಸುನಿತಾ ಮನೆಯಲ್ಲಿ ಕೆಲಸ ಮಾಡುತ್ತಿರಬೇಕಾದರೆ ಮೇಕೆಗಳಿಗೆ ಸೊಪ್ಪು ತರಬೇಕೆಂದು ತೆಂಗಿನ ಮರದ ತೋಟಕ್ಕೆ ಸೊಪ್ಪನ್ನು ತರಲು ಹೋಗುತ್ತಾರೆ. ಇನ್ನು ಸೊಪ್ಪನ್ನು ಸವರುತ್ತಿರಬೇಕಾದರೆ ತೋಟದಲ್ಲಿ ಮಗುವಿನ ಅಳುವಿನ ಸದ್ದು ಕೇಳಿಬರುತ್ತದೆ. ಅರೆ ಇದ್ಯಾರಪ್ಪ ಮಗುವನ್ನು ಇಲ್ಲಿ ಬಿಟ್ಟು ಹೋಗಿರುವುದು ಎಲ್ಲಿಂದ ಮಗುವಿನ ಅಳು ಕೇಳಿಬರುತ್ತಿದೆ ಎಂಬುದಾಗಿ ಸುನೀತ ಗೊಂದಲದಲ್ಲಿ ಬೀಳುತ್ತಾಳೆ. ತೆಂಗಿನ ಮರದ ಸುತ್ತೆಲ್ಲ ತಿರುಗಾಡಿ ಮಗು ಎಲ್ಲಿದೆ ಎಂಬುದಾಗಿ ನೋಡುತ್ತಾರೆ ಆದರೆ ಎಲ್ಲೂ ಕೂಡ ಮಗು ಸಿಗುವುದಿಲ್ಲ. ಹುಡುಕಾಡುತ್ತಿರುವ ಬೇಕಾದರೆ ಮಗುವಿನ ಸದ್ದು ಅರ್ಧಕ್ಕೆ ನಿಲ್ಲುತ್ತದೆ. ಮತ್ತೆ ಕೊಂಚ ಹೊತ್ತಿನ ನಂತರ ಮಗುವಿನ ಅಳು ಎನ್ನುವುದು ಕೇಳಲು ಆರಂಭವಾಗುತ್ತದೆ. ಸುನಿತಾಳಿಗೆ ತೆಂಗಿನಮರದಿಂದ ಮಗುವಿನ ಅಳು ಸದ್ದು ಕೇಳಿಬರುತ್ತಿತ್ತು. ತೆಂಗಿನ ಮರದ ಸುತ್ತ ಎಲ್ಲಿ ನೋಡಿದರೂ ಕೂಡ ಮಗುವಿನ ಪತ್ತೆ ಇರಲಿಲ್ಲ.

ಇದಾದ ನಂತರ ಪ್ರತಿದಿನ ದಿನಕ್ಕೆ ಕಡಿಮೆಯೆಂದರೂ ಹತ್ತು ಬಾರಿಯಾದರೂ ಆ ಮಗುವಿನ ಸದ್ದು ತೆಂಗಿನ ಮರದ ತೋಟದಿಂದ ಕೇಳಿಬರುತ್ತಿತ್ತು. ಭಯಬಿದ್ದ ಸುನೀತಾ ತನ್ನ ಗಂಡ ರಮೇಶನಿಗೆ ಈ ವಿಚಾರವನ್ನು ಮುಟ್ಟಿಸುತ್ತಾಳೆ. ಅದಕ್ಕೆ ರಮೇಶ ಉಡಾಫೆಯಾಗಿ ಅದು ನಿನ್ನ ಭ್ರಮೆ ಇರಬೇಕು ಎಂಬುದಾಗಿ ನಿರ್ಲಕ್ಷಿಸುತ್ತಾನೆ. ಆದರೆ ಒಂದು ದಿನ ರಾತ್ರಿ ಮನೆಯವರೆಲ್ಲರೂ ಊಟ ಮಾಡಿ ಮಲಗುವ ಸಂದರ್ಭದಲ್ಲಿ ಮತ್ತೆ ಆ ಮಗುವಿನ ಅಳುವಿನ ಸದ್ದು ತೆಂಗಿನ ಮರದ ತೋಟದಿಂದ ಕೇಳಿಬರುತ್ತದೆ. ಈಗ ಕೊನೆಗೂ ಕೂಡ ರಮೇಶ್ ನಿಗೆ ಸುನಿತಾಳ ಮಾತು ನಂಬಲೇ ಬೇಕಾಗಿಬಂತು. ಆದರೂ ಕೂಡ ಅದು ರಾತ್ರಿ ಬೆಕ್ಕಿನ ಅಳುವಿನ ಸದ್ದು ಇರಬಹುದು ಅದು ಕೂಡ ಮಗುವಿನ ಅಳುವ ಸದ್ದಿನಂತೆ ಕಾಣುತ್ತದೆ ಎಂಬುದಾಗಿ ಹೇಳುತ್ತಾನೆ ಆದರೆ ಸುನೀತ ಬೆಕ್ಕಿನ ಅಳುವಿನ ಸದ್ದಿಗೂ ಮಗುವಿನ ಅಳುವಿನ ಸದ್ದಿಗೂ ಇರುವ ವ್ಯತ್ಯಾಸ ನನಗೆ ಗೊತ್ತಿಲ್ವಾ ಎಂಬುದಾಗಿ ಗದರಿಸುತ್ತಾರೆ.

ಆ ರಾತ್ರಿ ಟಾರ್ಚ್ ಹಿಡಿದು ಅದೇನೆಂದು ನೋಡೇಬಿಡೋಣ ಎಂಬುದಾಗಿ ರಮೇಶ್ ಧೈರ್ಯ ಮಾಡಿಕೊಂಡು ತೋಟಕ್ಕೆ ಹೋಗುತ್ತಾನೆ. ಅವರ ಹಿಂದೆ ಆತನ ಪತ್ನಿ ಸುನೀತಾ ಕೂಡ ಬರುತ್ತಾಳೆ. ತೆಂಗಿನ ಮರದ ತೋಟಕ್ಕೆ ಹೋದಾಗ ಮಗುವಿನ ಅಳುವಿನ ತೆಂಗಿನ ಮರದ ತುದಿಯಿಂದ ಬರುತ್ತಿದ್ದು ಅಲ್ಲಿ ಕೊಂಚ ಬೆಳಕು ಕೂಡ ಬಂದು ಹಾಗೆ ಮತ್ತೆ ಮಗುವಿನ ಅಳುವಿನ ಸದ್ದು ಹಾಗೂ ಬೆಳಕು ನಿಂತುಹೋಯಿತು. ಇದಕ್ಕೆ ಹೆದರಿಕೊಂಡ ಇಬ್ಬರು ಮನೆಗೆ ಹೋಗಿ ಮಲಗುತ್ತಾರೆ. ಮಾರನೇದಿನ ಸುನೀತಾ ತನ್ನ ಅಣ್ಣನಿಗೆ ಫೋನ್ ಮಾಡಿ ಅಣ್ಣ ಹೀಗೆ ನಡೆಯುತ್ತಿದೆ ಎಂಬುದಾಗಿ ಇರುವ ವಿಚಾರಗಳನ್ನು ವಿವರವಾಗಿ ಹೇಳುತ್ತಾರೆ.

ಇನ್ನೊಮ್ಮೆ ಏನಾದರೂ ಅದೇ ರೀತಿಯ ಮಗುವಿನ ಅಳುವಿನ ಸದ್ದು ಕೇಳಿದರೆ ನನಗೆ ಕರೆ ಮಾಡು ನಾನು ಬರುತ್ತೇನೆ ಎಂಬುದಾಗಿ ಅಣ್ಣ ಧೈರ್ಯ ತುಂಬುತ್ತಾನೆ. ಮತ್ತೆ ಅದೇ ದಿನ ರಾತ್ರಿ 8 ಗಂಟೆಗೆ ಊಟ ಮಾಡುವ ಸಂದರ್ಭದಲ್ಲಿ ಮಗುವಿನ ಅಳುವಿನ ಶಬ್ದ ಕೇಳಿದಾಗ ಸುನಿತಾ ತನ್ನ ಅಣ್ಣನಿಗೆ ಕರೆ ಮಾಡುತ್ತಾಳೆ. ಅಣ್ಣ ತನ್ನ ಗೆಳೆಯರೊಂದಿಗೆ ಹಾಗೂ ಸುಮಾರು ನೂರಕ್ಕೂ ಅಧಿಕ ಊರಿನವರೊಂದಿಗೆ ಪಂಜಿನೊಂದಿಗೆ ಬರುತ್ತಾನೆ. ಅವರು ಬರುವುದಕ್ಕಿಂತ ಮುಂಚೆ ಕ್ಷೀಣವಾಗಿ ಕೇಳಿಸುತ್ತಿದ್ದ ಮಗುವಿನ ಅಳುವಿನ ಸದ್ದು ಅವರು ಬಂದಾಗ ಇನ್ನಷ್ಟು ಜೋರಾಗಿ ಕೇಳಲು ಪ್ರಾರಂಭವಾಯಿತು.

ನಂತರ ಸಡನ್ನಾಗಿ ಮಗುವಿನ ಅಳುವಿನ ಸದ್ದು ನಿಂತು ಹೋಯಿತು. ಆಗ ಅಲ್ಲಿದ್ದವರಲ್ಲಿ ಒಬ್ಬ ಪಂಜನ್ನು ನೋಡಿದರೆ ಎಂತಹ ದೆವ್ವವಾದರೂ ಕೂಡ ಓಡಿಹೋಗುತ್ತದೆ ಎಂಬುದಾಗಿ ಹೇಳಿದೆ. ಆಗ ಮತ್ತೆ ಮಗುವಿನ ಅಳುವಿನ ಸದ್ದು ಜೋರಾಯಿತು. ಆಗ ಇದನ್ನು ಮಂತ್ರವಾದಿ ಮೂಲಕ ಪರಿಹರಿಸೋಣ ಎಂಬುದಾಗಿ ಮಾರನೆದಿನ ಮಂತ್ರವಾದಿಯನ್ನು ಕರೆಸುತ್ತಾರೆ. ಮಂತ್ರವಾದಿ ಮರಕ್ಕೆ ದಾರವನ್ನು ಕಟ್ಟಿ ಅರಿಶಿನ-ಕುಂಕುಮವನ್ನು ಬಳಿದು ಹಾಲನ್ನು ಅಭಿಷೇಕ ಮಾಡಿ ಪೂಜೆ ಮಾಡಿ ನಾನು ಇಲ್ಲಿರುವ ಭೂತವನ್ನು ಈಗಾಗಲೇ ಓಡಿಸಿ ಸಮಸ್ಯೆಯನ್ನು ಪರಿಹರಿಸಿದ್ದೇನೆ ಎಂಬುದಾಗಿ ಹೇಳಿ ರಮೇಶ್ ನಿಂದ ಸಂಭಾವನೆಯನ್ನು ಪಡೆದುಕೊಂಡು ಹೋಗುತ್ತಾನೆ. ಅಂತೂ ಇಂತೂ ದೆವ್ವದ ಕಾಟ ತಪ್ಪಿತಲ್ಲ ಎಂಬುದಾಗಿ ನೆಮ್ಮದಿಯನ್ನು ಪಡೆದುಕೊಂಡು ಇಬ್ಬರು ಮನೆಗೆ ಹೋಗಿ ಮಲಗುತ್ತಾರೆ.

ಆದರೆ ಮಾರನೇ ದಿನ ಬೆಳ್ಳಂಬೆಳಗ್ಗೆ ಎಡಬಿಡದಂತೆ ಮಗುವಿನ ಅಳುವಿನ ಸದ್ದು ತೆಂಗಿನ ಮರದ ತೋಟದಿಂದ ಕೇಳುತ್ತಲೇ ಇತ್ತು. ಇಷ್ಟು ಮಾತ್ರವಲ್ಲದೆ ಈಗ ತೋಟದಲ್ಲಿ ನಡೆದಾಡುವ ಸದ್ದುಗಳು ಕೂಡ ಕೇಳಿಬರುತ್ತಿತ್ತು. ಹೆದರಿಕೆ ಇದ್ದರೂ ಕೂಡ ಏನಾದರಾಗಲಿ ನೋಡಿಕೊಂಡು ಬಂದೇ ಬಿಡೋಣ ಎಂಬುದಾಗಿ ಇಬ್ಬರು ಕೂಡ ತೆಂಗಿನಮರದ ಹೋಗುತ್ತಾರೆ. ಇನ್ನು ತೆಂಗಿನ ಮರದ ಬಳಿ ಬಂದಾಗ ಒಬ್ಬ ವ್ಯಕ್ತಿ ಸರಸರನೆ ತೆಂಗಿನ ಮರದಿಂದ ಕೆಳಗಿಳಿದು ಬಂದ ಆಗ ದಂಪತಿಗಳಿಬ್ಬರು ಕೂಡ ಬೆಚ್ಚಿಬೀಳುತ್ತಾರೆ.

ಆದರೆ ಸುಧಾರಿಸಿಕೊಂಡು ನೋಡಿದಾಗ ತೆಂಗಿನ ಕಾಯಿಗಳನ್ನು ಕೀಳುವ ಪಕ್ಕದೂರಿನ ಸಿದ್ದಲಿಂಗ ಎಂದು ತಿಳಿದುಬರುತ್ತದೆ. ಆಗ ಸಿದ್ದಲಿಂಗ ನೀವು ಒಮ್ಮೆ ನನ್ನನ್ನು ತೆಂಗಿನಕಾಯಿ ಗಳನ್ನು ಕೀಳಿಸಲು ಕಳಿಸಿದ್ದೀರಾ ಅಲ್ಲವೇ ಸಂದರ್ಭದಲ್ಲಿ ನಾನು ನನ್ನ ಮೊಬೈಲ್ ಫೋನನ್ನು ಮರೆತು ಇಲ್ಲಿ ಬಿಟ್ಟು ಹೋಗಿದ್ದೆ. ಅಂದಿನಿಂದ ಇಂದಿನವರೆಗೂ ಕೂಡ ನಾನು ಎಲ್ಲೆಲ್ಲಿ ಕಾಯಿಯನ್ನು ಕೇಳಲು ಹೋಗಿದ್ದೇನೋ ಅಲ್ಲಿಗೆ ಹೋಗಿ ಫೋನ್ ಮಾಡಿ ಹುಡುಕುತ್ತಿದ್ದೆ. ಕೊನೆಗೆ ನನಗೆ ಇಲ್ಲಿ ನನ್ನ ಫೋನ್ ದೊರೆಯಿತು ಎಂಬುದಾಗಿ ಹೇಳುತ್ತಾನೆ. ಅಲ್ಲಿಯವರೆಗೂ ಮಗುವಿನ ಅಳು ಕೇಳಿಸಿದ್ದು ಯಾವುದೋ ಭೂತದ್ದು ಅಲ್ಲ ಬದಲಾಗಿ ಸಿದ್ದಲಿಂಗ ಫೋನ್ ರಿಂಗ್ಟೋನ್ ದು. ಈ ಕಥೆ ಕೇಳಿದ ಮೇಲೆ ನಿಮಗೇನನ್ನಿಸಿತು ಎಂಬುದನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.