ಪ್ರೀತಿ ಮಾಡಿ ತನ್ನ ಇಡೀ ಜೀವನವನ್ನೇ ಹಾಳುಮಾಡಿಕೊಂಡ ನಟಿ, ಭಾರತ ಚಿತ್ರರಂಗದ ಸ್ಟಾರ್ ನಟಿಯಾಗಿ ಮಿಂಚಬೇಕಾಗಿದ್ದ ಮೋನಲ್ ಜೀವನ ಏನಾಗಿ ಹೋಯ್ತು ಗೊತ್ತೇ??

2,527

ನಮಸ್ಕಾರ ಸ್ನೇಹಿತರೇ ಇಂದು ನಾವು ಹೇಳಲು ಹೊರಟಿರುವುದು ಚಿತ್ರರಂಗದ ಸ್ಟಾರ್ ನಟಿಯೊಬ್ಬರ ಜೀವನಕ್ಕೆ ಸಂಬಂಧಪಟ್ಟಂತಹ ವಿಚಾರದ ಕುರಿತಂತೆ. ಖಂಡಿತವಾಗಿಯೂ ಈ ವಿಚಾರ ನಿಮಗೆ ಸಾಕಷ್ಟು ಹತ್ತಿರವಾಗಿದ್ದರು ಕೂಡ ಅದರ ಅರಿವು ನಿಮಗೆ ಇಲ್ಲದೆ ಇರಬಹುದು. ನಾವು ಮಾತನಾಡಲು ಹೊರಟಿರುವುದು ನಟಿ ಸಿಮ್ರಾನ್ ರವರ ತಂಗಿ ಮೋನಲ್ ಕುರಿತಂತೆ. ಸಿಮ್ರನ್ ರವರು ಕನ್ನಡ ಚಿತ್ರರಂಗದಲ್ಲಿ ಕೂಡ ನಟಿಸಿದ್ದು ಅವರು ನಟಿಸಿರುವ ಏಕೈಕ ಕನ್ನಡ ಸಿನಿಮಾವೆಂದರೆ ಶಿವಣ್ಣ ನಟನೆಯ ಸಿಂಹದಮರಿ. ಅದಾದ ನಂತರ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸುತ್ತಾ ಹೋಗುತ್ತಾರೆ. ಇನ್ನು ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಜನಪ್ರಿಯ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಇವರ ತಂಗಿ ಯಾಗಿರುವ ಮೋನಲ್ ಕೂಡ ಅಕ್ಕನಂತೆ ನಟಿಯಾಗಬೇಕೆಂಬ ಕನಸನ್ನು ಹೊತ್ತುಕೊಂಡು ಚಿತ್ರರಂಗಕ್ಕೆ ಕಾಲಿಟ್ಟವರು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಮೋನಲ್ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದರು. ಅದಾಗಲೇ ಅವರಿಗೆ ಬೇರೆ ಬೇರೆ ಭಾಷೆಗಳಿಂದ ಹಲವಾರು ಚಿತ್ರಗಳ ಅವಕಾಶಗಳು ಕೂಡ ಹುಡುಕಿಕೊಂಡು ಬರುತ್ತಿದ್ದವು. ಆದರೆ ಅದಾಗಲೇ ಅವರು ತಮ್ಮದೇ ರೂಮಿನಲ್ಲಿ ನೇತಾಡಿಕೊಂಡ ಪರಿಸ್ಥಿತಿಯಲ್ಲಿ ಸಿಕ್ಕಿದ್ದರು. ಹೌದು ಗೆಳೆಯರೆ ಮೋನಲ್ ರವರು ತಮ್ಮ ಜೀವವನ್ನು ತಮ್ಮ ಕೈಯಾರೆ ತಾವೇ ಕಳೆದುಕೊಂಡಿದ್ದರು.

ನಟಿ ಮೊನಲ್ ರವರ ಮರಣವನ್ನು ಅಂದಿನ ಸುದ್ದಿ ಮಾಧ್ಯಮಗಳು ಸಾಕಷ್ಟು ಕೌತುಕವಾಗಿ ಬಿಂಬಿಸುತ್ತವೆ. ಉದಯೋನ್ಮುಖ ನಟಿ ಆಗಬೇಕಾಗಿದ್ದ ಮೊದಲ ರವರು ಅನಿರೀಕ್ಷಿತವಾಗಿ ತಮ್ಮ ಜೀವವನ್ನು ಕಳೆದುಕೊಂಡಿರುವುದು ಹಲವಾರು ಜನರ ಅನುಮಾನಕ್ಕೆ ಕಾರಣವಾಯಿತು. ಅದಕ್ಕಿಂತ ಹೆಚ್ಚಾಗಿ ತನ್ನ ತಂಗಿಯ ಮರಣದ ಕುರಿತಂತೆ ಅವರ ಅಕ್ಕ ಸಿಮ್ರಾನ್ ಹೇಳಿರುವುದು ಕೂಡ ಸಾಕಷ್ಟು ಸುದ್ದಿಗೆ ಕಾರಣವಾಗಿತ್ತು. ಅದನ್ನು ತಿಳಿಯುವ ಮುನ್ನ ಮೋನಲ್ ರವರ ಹಿನ್ನೆಲೆ ಹಾಗೂ ಅವರ ಸಿನಿಮಾ ಜರ್ನಿ ಕುರಿತಂತೆ ತಿಳಿದುಕೊಳ್ಳೋಣ ಬನ್ನಿ.

ಮೋನಲ್ ರವರು ತಮ್ಮ ತಂದೆ ಹಾಗೂ ತಾಯಿಗೆ ಕೊನೆಯ ಮಗಳಾಗಿ ಜನಿಸುತ್ತಾರೆ. ಇನ್ನು ಇವರು ಜನಿಸಿರುವುದು ದೆಹಲಿಯಲ್ಲಿ ನಂತರ ಮುಂಬೈಗೆ ಉನ್ನತ ಶಿಕ್ಷಣಕ್ಕಾಗಿ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಏನನ್ನಾದರೂ ಸಾಧಿಸಬೇಕೆಂಬ ಛಲ ಇವರಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ಸಿಮ್ರನ್ ರವರು ಅದಾಗಲೇ ತಮಿಳು ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ಹೆಸರನ್ನು ಸಂಪಾದಿಸುತ್ತಾರೆ. ಆ ಸಂದರ್ಭದಲ್ಲಿ ಮೊನಲ್ ರವರು ಸಿಮ್ರನ್ ರವರ ತಂಗಿ ಎಂದು ಎಲ್ಲರಿಗೂ ತಿಳಿಯುತ್ತದೆ. ಹೀಗಾಗಿ ಮಾಡೆಲಿಂಗ್ ಮಾಡುತ್ತಿದ್ದ ಸಮಯದಲ್ಲಿ ಮೋನಲ್ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ.

ಇನ್ನು ನಟಿ ಮೋನಲ್ ರವರು 2001ರಲ್ಲಿ ತಮ್ಮ ಇಪ್ಪತ್ತು ವರ್ಷ ವಯಸ್ಸಿನವರಿರಬೇಕಾದರೆ ನಟಿಸಲು ಪ್ರಾರಂಭ ಮಾಡುತ್ತಾರೆ. ಕನ್ನಡದಲ್ಲಿ ಇಂದ್ರಧನುಶ್ ಎಂಬ ಚಿತ್ರದಲ್ಲಿ ಕೂಡ ನಟಿಸುತ್ತಾರೆ. ಆದರೆ ಅವರಿಗೆ ಹೆಸರನ್ನು ತಂದುಕೊಟ್ಟಂತಹ ಚಿತ್ರವೆಂದರೆ ವಿಜಯ್ ನಟನೆಯ ಬದ್ರಿ ಚಿತ್ರ. ಇದಾದನಂತರ ತೆಲುಗು ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಇನ್ನು 2001 ರ ಕೊನೆಯ ಹೊತ್ತಿಗೆ ತಮಿಳು ಚಿತ್ರರಂಗದಲ್ಲಿ ಮೋನಲ್ ಪ್ರಧಾನ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ 2002 ರ ಹೊತ್ತಿಗೆ ತಮ್ಮದೇ ಮನೆಯಲ್ಲಿ ಚೆನ್ನೈನಲ್ಲಿ ನಿರ್ಜೀವ ಸ್ಥಿತಿಯಲ್ಲಿ ಕಾಣಸಿಗುತ್ತಾರೆ. ಇನ್ನು ಇದಕ್ಕೆ ಕಾರಣವಾಗಿದ್ದು ಮೋನಲ್ ರವರು ಡ್ಯಾನ್ಸ್ ಮಾಸ್ಟರ್ ಆಗಿದ್ದಂತಹ ಪ್ರಸನ್ನ ರವರ ಪ್ರೇಮಪಾಶಕ್ಕೆ ಬಿದ್ದಿದ್ದರು. ಆದರೆ ಆಕೆಯನ್ನು ಆತ ನಂತರ ಬಿಟ್ಟು ಹೋಗಿದ್ದೆ ಇದಕ್ಕೆ ಕಾರಣವಾಗಿತ್ತು.

ಇದರ ಜೊತೆ ಎಲ್ಲರಿಗೂ ತಿಳಿದಿತ್ತು ಹಾಗೂ ಸಿಮ್ರನ್ ಅವರು ಕೂಡ ಇದೇ ವಿಚಾರವನ್ನು ಹೇಳುತ್ತಾರೆ. ಇನ್ನು ಆತನಿಗೂ ಕೂಡ ಯಾವುದೇ ಶಿಕ್ಷೆ ಆಗಲಿಲ್ಲ. ಯಾವುದೇ ಸಾಕ್ಷ್ಯಾಧಾರಗಳು ಇಲ್ಲದ ಕಾರಣದಿಂದಾಗಿ ಮೋನಲ್ ರವರ ಮರಣದ ಪ್ರಕರಣ ಯಾವುದೇ ಫಲಿತಾಂಶ ವಿಲ್ಲದೆ ಮುಚ್ಚಿಹೋಯಿತು. ತನ್ನ ಸಿನಿಮಾ ಜೀವನದ ಕುರಿತಂತೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದ ಮೊನಲ್ ರವರು ಕೇವಲ 21ನೇ ವಯಸ್ಸಿಗೆ ತನ್ನ ಜೀವನವನ್ನು ಯಾವನೋ ಒಬ್ಬನ ಕಾರಣದಿಂದಾಗಿ ಮುಗಿಸಿ ಕೊಂಡಿದ್ದು ಎಷ್ಟರಮಟ್ಟಿಗೆ ಸರಿ. ಒಳ್ಳೆಯ ಜೀವನವನ್ನು ಹೊಂದಿದಂತಹ ಮೋನಲ್ ಹೀಗೆ ಮಾಡಿದ್ದು ಖಂಡಿತವಾಗಿಯೂ ಇಂದಿಗೂ ಕೂಡ ಎಲ್ಲರ ಮನಸ್ಸಿನಲ್ಲಿ ಉತ್ತರ ಸಿಗದ ಪ್ರಶ್ನೆಯಂತೆ ಕಾಡುತ್ತಿದೆ.