ಅಮೂಲ್ಯ ತಾಯಿಯಾದ ಹಿನ್ನೆಲೆಯಲ್ಲಿ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಹೋಗಿ ಕೊಟ್ಟ ದುಬಾರಿ ಗಿಫ್ಟ್ ಏನು ಗೊತ್ತಾ??

5,546

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಬಾಲನಟಿಯಾಗಿ ನಂತರ ನಾಯಕನಟಿಯರಾಗಿ ಜನಪ್ರಿಯತೆ ಪಡೆದವರಲ್ಲಿ ನಟಿ ಅಮೂಲ್ಯ ಅವರು ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ನಟಿ ಅಮೂಲ್ಯ ರವರು ಬಾಲನಟಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರಂತಹ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ತಮ್ಮ ಕೇವಲ 13 ನೇ ವಯಸ್ಸಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಚೆಲುವಿನ ಚಿತ್ತಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಿತರಾಗಿದ್ದರು. ಅತಿ ಕಡಿಮೆ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾದವರ ಪಟ್ಟಿಯಲ್ಲಿ ಕೂಡ ಅಮೂಲ್ಯ ರವರು ಮೊದಲ ಪಂಕ್ತಿಯಲ್ಲಿ ಕಾಣಸಿಗುತ್ತಾರೆ.

ನಟಿ ಅಮೂಲ್ಯ ರವರು ನಾಯಕಿಯಾಗಿ ಕೂಡ ರಾಕಿಂಗ್ ಸ್ಟಾರ್ ಯಶ್ ಗೋಲ್ಡನ್ ಸ್ಟಾರ್ ಗಣೇಶ್ ಚಿರು ಪ್ರೇಮ್ ದುನಿಯಾ ವಿಜಯ್ ಹೀಗೆ ಹಲವಾರು ನಟರೊಂದಿಗೆ ನಟಿಸಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಮೂಲ್ಯ ರವರು ಜಗದೀಶ್ ರವರನ್ನು ವಿವಾಹವಾಗಿದ್ದಾರೆ. ಇನ್ನು ಇತ್ತೀಚಿಗಷ್ಟೇ ಅಮೂಲ್ಯ ರವರು ತಾನು ತಾಯಿ ಆಗುತ್ತೇನೆಂಬ ವಿಚಾರವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಮುಂದಿನ ವರ್ಷದ ಮಾರ್ಚ್ ತಿಂಗಳಿನಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂಬ ವಿಚಾರವನ್ನು ಕೂಡ ಹಂಚಿಕೊಂಡಿದ್ದಾರೆ. ಇನ್ನು ಈ ಕುರಿತಂತೆ ನಟಿ ಅಮೂಲ್ಯ ರವರಿಗೆ ಸ್ಯಾಂಡಲ್ವುಡ್ ನಿಂದ ಅಭಿನಂದನೆಗಳ ಹೊಳೆ ಹರಿದುಬಂದಿತ್ತು. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ನಟಿ ಅಮೂಲ್ಯ ರವರಿಗೆ ತಾಯಿ ಆಗಿರುವ ಹಿನ್ನೆಲೆಯಲ್ಲಿ ವಿಶೇಷವಾದ ಗಿಫ್ಟ್ ನೀಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರೊಂದಿಗೆ ಮೊದಲಿನಿಂದಲೂ ಕೂಡ ಅಮೂಲ್ಯ ರವರು ಸಹೋದರಿಯ ಬಾಂಧವ್ಯವನ್ನು ಹೊಂದಿದ್ದಾರೆ. ಪ್ರತಿಬಾರಿ ಎಲೆಕ್ಷನ್ ನಡೆದಾಗಲೂ ಕೂಡ ಜಗದೀಶ್ ರವರ ಜೊತೆಗೆ ಡಿ ಬಾಸ್ ಕೂಡ ಪ್ರಚಾರಕ್ಕೆ ಹೋಗುತ್ತಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಅವರ ಜೊತೆಗೆ ಅಮೂಲ್ಯ ಅವರ ನಿವಾಸಕ್ಕೆ ತೆರಳಿ ಅಭಿನಂದನೆಗಳನ್ನು ಕೋರಿದ್ದು 5 ಲಕ್ಷ ಬೆಲೆಬಾಳುವ ಬೆಳ್ಳಿ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆಯನ್ನು ನೋಡಿ ಅಮೂಲ್ಯ ರವರು ಭಾವುಕರಾಗಿದ್ದಂತೂ ಸುಳ್ಳಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಈ ದೊಡ್ಡ ಗುಣಕ್ಕೆ ಏನು ಹೇಳುತ್ತೀರಿ ತಪ್ಪದೆ ಕಾಮೆಂಟ್ ಬಾಕ್ಸ್ ನಮ್ಮೊಂದಿಗೆ ಹಂಚಿಕೊಳ್ಳಿ.