ಕನ್ನಡದ ಹೊಸ ಟಾಪ್ ಧಾರವಾಹಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಗಾಗಿ ಉಮಾಶ್ರೀ ರವರು, ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

528

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಕನ್ನಡ ಪ್ರೇಕ್ಷಕರಿಗೆ ಕಿರುತೆರೆಯ ಧಾರವಾಹಿಗಳಲ್ಲಿ ಒಲವು ಬಂದಿದ್ದು ಹಲವಾರು ಸ್ಟಾರ್ ನಟ ಹಾಗೂ ನಟಿಯರು ಕೂಡ ಧಾರಾವಾಹಿಗಳಲ್ಲಿ ನಟಿಸಲು ಪ್ರಾರಂಭಿಸಿದ್ದಾರೆ. ದಾರವಾಹಿ ಗಳಿಗಿರುವ ಜನಪ್ರಿಯತೆ ಹಾಗೂ ಜನರಿಂದ ಸಿಗುವ ಪ್ರೀತಿ ಹಾಗೂ ಗೌರವ ಗಳು ಅವರು ಧಾರವಾಹಿ ಕ್ಷೇತ್ರಕ್ಕೆ ಬರಲು ಕಾರಣ ಎಂದು ಹೇಳಬಹುದಾಗಿದೆ.

ಇನ್ನು ಈ ಹಿಂದೆಯಷ್ಟೇ ವಿಷ್ಣುವರ್ಧನ್ ರವರ ಅಳಿಯ ಆಗಿರುವ ಅನಿರುದ್ಧ ಅವರು ಕೂಡ ಜೊತೆ ಜೊತೆಯಲ್ಲಿ ದಾರವಾಹಿಯಲ್ಲಿ ನಟಿಸಲು ಪ್ರಾರಂಭಿಸಿದ್ದರು. ಈಗ ಕನ್ನಡ ಚಿತ್ರರಂಗದ ಜನಪ್ರಿಯ ಹಾಗೂ ಬಹುಬೇಡಿಕೆಯ ಖ್ಯಾತ ಪೋಷಕ ನಟಿ ಹಾಗೂ ಹಾಸ್ಯ ನಟಿ ಆಗಿರುವ ಉಮಾಶ್ರೀ ಅವರು ಕೂಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಎಂಬ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೇ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದ್ದಂತಹ ರತ್ನನ್ ಪ್ರಪಂಚ ಚಿತ್ರದಲ್ಲಿ ಉಮಾಶ್ರೀ ಅವರ ನಟನೆ ವ್ಯಾಪಕವಾಗಿ ಜನಮನ್ನಣೆಯನ್ನು ಗಳಿಸಿತ್ತು. ಇನ್ನು ಈಗ ಇವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ದಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಈ ಧಾರವಾಹಿಗೆ ಇನ್ನಷ್ಟು ಬೇಡಿಕೆಯನ್ನು ಸೃಷ್ಟಿಸಿದೆ. ಸಿನಿಮಾ ರಾಜಕೀಯ ಕ್ಷೇತ್ರದ ನಂತರ ಈಗ ಕಿರುತೆರೆ ಕ್ಷೇತ್ರಕ್ಕೆ ಕೂಡ ಉಮಾಶ್ರೀಯವರು ಕಾಲಿಟ್ಟಿರುವುದು ಅಭಿಮಾನಿಗಳಿಗೆ ಇನ್ನಷ್ಟು ಸಂತೋಷವನ್ನು ನೀಡಿದೆ.

ಇನ್ನು ಪುಟ್ಟಕ್ಕನ ಮಕ್ಕಳು ಧಾರವಾಹಿಯನ್ನು ನಿರ್ದೇಶಿಸುತ್ತಿರುವುದು ಹಾಗೂ ನಿರ್ಮಿಸುತ್ತಿರುವುದು ಜೊತೆ ಜೊತೆಯಲಿ ಖಾತಿಯ ನಿರ್ದೇಶಕ ಆರೂರು ಜಗದೀಶ್. ಇನ್ನು ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ನಡೆಸುತ್ತಿದ್ದ ನಾಯಕ ಅನಿರುದ್ಧ ರವರಿಗೆ ದಿನಕ್ಕೆ ಗರಿಷ್ಠ 30000 ಸಂಭಾವನೆಯನ್ನು ನೀಡಲಾಗುತ್ತಿತ್ತು. ಆದರೆ ಉಮಾಶ್ರೀ ಅವರಿಗೆ ನೀಡುತ್ತಿರುವ ಸಂಭಾವನೆ ಕೇಳಿದರೆ ನೀವು ಕೂಡ ಆಶ್ಚರ್ಯ ಪಡುವುದು ಗ್ಯಾರಂಟಿ. ಹೌದು ಗೆಳೆಯರೇ ಉಮಾಶ್ರೀ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿಗಾಗಿ ಪ್ರತಿದಿನ ಬರೋಬ್ಬರಿ 45 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಈ ದಾರವಾಹಿ ಕೂಡ ಅದೇ ಮಟ್ಟದ ಯಶಸ್ಸನ್ನು ಕಾಣಲಿ ಎಂದು ಹಾರೈಸೋಣ.