ಪುಷ್ಪ ಸಿನೆಮಾದ ಬಗ್ಗೆ ಅಸಮಾಧಾನ ಹೊರಹಾಕಿದ ಅಲ್ಲೂ ಅರ್ಜುನ್ ಪತ್ನಿ, ಕೂಡಲೇ ಮತ್ತೊಂದು ದೃಶ್ಯಕ್ಕೆ ಕತ್ತರಿ ಹಾಕಿದ ಅಲ್ಲು, ಯಾವ ದೃಶ್ಯ ಗೊತ್ತಾ??

4,074

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಇಡೀ ಭಾರತ ಚಿತ್ರರಂಗದಾದ್ಯಂತ ದೊಡ್ಡದಾಗಿ ಸದ್ದು ಮಾಡುತ್ತಿರುವ ಚಿತ್ರವೆಂದರೆ ಅದು ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಪುಷ್ಪ ಚಿತ್ರ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಪುಷ್ಪ ಚಿತ್ರ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಹಲವಾರು ವಿಚಾರಗಳಿಗಾಗಿ ಸುದ್ದಿ ಮಾಡುತ್ತಿದೆ. ಮೊದಲನೇದಾಗಿ ಕನ್ನಡದಲ್ಲಿ ಡಬ್ಬಿಂಗ್ ಆಗಿದ್ದರೂ ಕೂಡ ಕನ್ನಡದಲ್ಲಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ಕರ್ನಾಟಕದಲ್ಲಿ ಬಿಡುಗಡೆಯಾಗಿಲ್ಲ.

ಇದಕ್ಕಾಗಿ ಪುಷ್ಪ ಚಿತ್ರವನ್ನು ಕರ್ನಾಟಕದಲ್ಲಿ ಬಹಿಷ್ಕರಿಸಿ ಎಂಬುದಾಗಿ ಕನ್ನಡ ಪ್ರತಿಭಟನೆಗಳು ಟ್ವಿಟರ್ನಲ್ಲಿ ಟ್ರೆಂಡ್ ಮಾಡುತ್ತಿವೆ. ಇನ್ನು ಬಿಡುಗಡೆಯಾದ ದಿನದಿಂದಲೇ ಕೂಡ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿದ್ದರು ಕೂಡ ಬಾಕ್ಸಾಫೀಸ್ ವಿಚಾರದಲ್ಲಿ ಪುಷ್ಪ ಹಿಂದಕ್ಕೆ ಬಿದ್ದಿಲ್ಲ. ಇನ್ನು ಸದಾಕಾಲ ಸ್ಟೈಲಿಶ್ ಆಗಿ ಕಾಣುತ್ತಿದ್ದ ಅಲ್ಲು ಅರ್ಜುನ್ ರವರು ಈ ಚಿತ್ರದಲ್ಲಿ ಸಾಕಷ್ಟು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಕೇವಲ ಇಷ್ಟಕ್ಕೆ ಮಾತ್ರವಲ್ಲದೆ ಇನ್ನೂ ಕೂಡ ಒಂದು ವಿಚಾರಕ್ಕೆ ಈ ಚಿತ್ರ ಸಾಕಷ್ಟು ಸುದ್ದಿಯಾಗಿತ್ತು.

ಹೌದು ಇತ್ತೀಚಿಗಷ್ಟೇ ಪುಷ್ಪ ಚಿತ್ರದ ಸಮಯ ಮೂರು ಗಂಟೆ ಆಗಿತ್ತು. ಆದರೆ ಅದು ಸುಮ್ಮನೆ ಎಳೆದಂತಾಗುತ್ತದೆ ಎಂದು ಭಾವಿಸಿ ಚಿತ್ರತಂಡದವರು ಹಲವಾರು ಬೇಡದ ದೃಶ್ಯಗಳಿಗೆ ಎಡಿಟ್ ಮಾಡಿ 2.30 ಗಂಟೆ ಸಿನಿಮಾವನ್ನು ಪರದೆ ಮೇಲೆ ತೋರಿಸಿದ್ದಾರೆ. ಇನ್ನು ಈ ಚಿತ್ರದ ಎಡಿಟ್ ದೃಶ್ಯಗಳಲ್ಲಿ ಕೆಲವೊಂದು ಬೋಲ್ಡ್ ದೃಶ್ಯಗಳು ಕೂಡ ಶಾಮೀಲಾಗಿದೆ. ಹೌದು ದೃಶ್ಯವೊಂದರಲ್ಲಿ ರಶ್ಮಿಕಾ ರವರ ಎದೆಯಮೇಲೆ ಅಲ್ಲು ಅರ್ಜುನ್ ರವರು ಕೈ ಹಾಕುವ ದೃಶ್ಯವು ಕೂಡ ಇತ್ತಂತೆ. ಇನ್ನು ಕೇಳಿಬರುತ್ತಿದೆ ಸುದ್ದಿಯ ಪ್ರಕಾರ ಈ ದೃಶ್ಯವನ್ನು ಎಡಿಟ್ ಮಾಡಲು ಹೇಳಿದ್ದು ಅಲ್ಲು ಅರ್ಜುನ್ ರವರ ಪತ್ನಿಯಂತೆ. ಚಿತ್ರದ ದೃಶ್ಯಗಳು ಈಗಾಗಲೆ ಎಡಿಟ್ ಆಗಿದ್ದು ಚಿತ್ರಮಂದಿರಗಳಲ್ಲಿ ಚಿತ್ರ ಈಗಾಗಲೇ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ವಿಚಾರ ಕುರಿತಂತೆ ನಿಮಗೆ ಏನು ಅನಿಸುತ್ತಿದೆ ಎಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.