ಮುದುಕನನ್ನು ನೋಡಿ ನಗುತ್ತಿದ್ದ ಜನ, ಆದರೆ ಮುದುಕ ಮನೆಯ ಒಳಗಡೆ ಮಾಡುತಿದ್ದ ಕೆಲಸ ಎಲ್ಲರೂ ಶಾಕ್, ಆತನ ಹೆಂಡತಿ ಕೂಡ ಶಾಕ್ ಆಗಿದ್ದು ಯಾಕೆ ಗೊತ್ತೇ??

1,183

ನಮಸ್ಕಾರ ಸ್ನೇಹಿತರೇ ಇದು ನಾವು ಮಾತನಾಡಲು ಹೊರಟಿರುವುದು ಪಾಶ್ಚಾತ್ಯ ದೇಶದಲ್ಲಿ ನಡೆದಿರುವಂತಹ ಒಂದು ನೈಜ ಘಟನೆ ಕುರಿತಂತೆ. ಇನ್ನು ಇದು ನಡೆದಿರುವುದು ಕೆನಡಾ ದೇಶದಲ್ಲಿ. ಹೌದು ನಾವು ಹೇಳಲು ಹೊರಟಿರುವುದು ಬ್ರೂಸ್ ಎನ್ನುವ 84 ವರ್ಷದ ಮುದುಕನ ಜೀವನದಲ್ಲಿ ನಡೆದಿರುವಂತಹ ಘಟನೆ ಕುರಿತಂತೆ. ಖಂಡಿತವಾಗಿಯೂ ಈ ಕತೆ ಕೇಳಲು ನಿಮಗೆ ಸ್ವಾರಸ್ಯಕರ ಎಂದೆನಿಸಬಹುದು. ಹೀಗಾಗಿ ಲೇಖನಿಯನ್ನು ತಪ್ಪದೆ ಕೊನೆಯವರೆಗೂ ಓದಿ.

ಇನ್ನು ಮೊದಲು ಬ್ರೂಸ್ ಅಮೆರಿಕದಲ್ಲಿ ನೆಲೆಸಿದ್ದ. ಮೊದಲು ಈತ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದ. ಒಮ್ಮೆ ಅಮೆರಿಕ ದೇಶದ ಅಧ್ಯಕ್ಷರಾಗಿರುವ ಜಾನ್ ಎಫ್ ಕೆನಡಿ ಅವರು 1960 ರ ಹೊತ್ತಿನಲ್ಲಿ ಕದನದ ಕಾರಣದಿಂದಾಗಿ ಸುರಕ್ಷಿತವಾಗಿರುವಂತೆ ಆದೇಶವನ್ನು ಹೊರಡಿಸುತ್ತಾರೆ. ಇಷ್ಟು ಮಾತ್ರವಲ್ಲದೆ ಆಹಾರ ಸಾಮಾಗ್ರಿಗಳನ್ನು ಕೂಡ ಕೂಡಿರುವಂತೆ ಹೇಳುತ್ತಾರೆ. ಇದನ್ನೆಲ್ಲ ಕೇಳಿದ ಬ್ರೂಸ್ ಭ’ಯಭೀ’ತನಾಗಿ ಕನ್ನಡ ದೇಶಕ್ಕೆ ಹೋಗಿ ನೆಲೆಸುತ್ತಾನೆ. ಇನ್ನು ಕನ್ನಡದಲ್ಲಿ ಬ್ರೂಸ್ ಮದುವೆಯಾಗಿ ಜೀವನವನ್ನು ಪ್ರಾರಂಭಿಸುತ್ತಾನೆ. ಇನ್ನು ಸದಾಕಾಲ ಬ್ರೂಸ್ ಗೆ ಪ್ರಪಂಚದಲ್ಲಿ ಆಟೋಮಿಕ್ ಕದನಗಳು ಪ್ರಾರಂಭವಾಗಬಹುದು ಎಂಬ ಚಿಂತೆ ಕಾಡುತ್ತಲೇ ಇತ್ತು. ಇನ್ನು ಇಂತಹ ಘಟನೆಗಳನ್ನು ಪ್ರತಿರೋಧಿಸುವಂತಹ ಮನೆಯನ್ನು ಕಟ್ಟಬೇಕೆಂಬ ಆಸೆ ಅವನಲ್ಲಿ ಸದಾಕಾಲ ಮೂಡಿತ್ತು.

ಬ್ರೂಸ್ ಯಾವರೀತಿಯ ಮನೆಯನ್ನು ಕಟ್ಟಬೇಕೆಂದು ಯೋಚಿಸಿದ್ದ ಎಂದರೆ ಇಂತಹ ಎಷ್ಟೇ ನ್ಯೂಕ್ಲಿಯರ್ ಅಸ್ತ್ರಗಳು ಮನೆಯ ಮೇಲೆ ಬಿದ್ದರೂ ಕೂಡ ಮನೆಗೆ ಏನೂ ಆಗಬಾರದು ಮನೆಯ ಒಳಗೆ ಇದ್ದವರಿಗೆ ಕೂಡ ಏನೂ ಆಗಬಾರದು ಎಂಬುದಾಗಿ ಯೋಚಿಸಿದ್ದ. ಇನ್ನು ಇದಕ್ಕಾಗಿ 1980 ರ ಸುಮಾರಿಗೆ ಬ್ರೂಸ್ ತನ್ನ ಪತ್ನಿ ಹೆಸರಿನಲ್ಲಿರುವ ಜಮೀನಿನಲ್ಲಿ ಮನೆಯನ್ನು ಕಟ್ಟಲು ಪ್ರಾರಂಭಿಸುತ್ತಾರೆ. ಇದಕ್ಕಾಗಿ ಆತ ಶಾಲೆಯ ಬಸ್ಸುಗಳನ್ನು ಖರೀದಿಸಲು ಆರಂಭಿಸುತ್ತಾನೆ. ಆತನ ಹಳ್ಳಿಯ ಸುತ್ತಮುತ್ತಲು ಕಡಿಮೆ ಬೆಲೆಯ ಬಸ್ಸುಗಳು ಸಿಕ್ಕರೆ ಸಾಕು ಆತ ಖರೀದಿಸುತ್ತಿದ್ದ. ಹೀಗೆ ಮಾಡಿ ಮಾಡಿ ಆತ ಬರೋಬ್ಬರಿ 42 ಬಸ್ಸುಗಳನ್ನು ಕೊಂಡುಕೊಳ್ಳುತ್ತಾನೆ. ಬ್ರೂಸ್ ಪ್ರಕಾರ ನ್ಯೂಕ್ಲಿಯರ್ ಅಸ್ತ್ರಗಳು ಬಸ್ಸಿನ ಮೇಲ್ಭಾಗದಲ್ಲಿ ಬಿದ್ದರೆ ಏನು ಕೂಡ ಆಗುವುದಕ್ಕೆ ಚಾನ್ಸ್ ಇಲ್ಲ ಎಂಬ ನಂಬಿಕೆ. ಆದರೆ ಬ್ರೂಸ್ ಪ್ಲಾನ್ ಬೇರೆಯಾಗಿತ್ತು.

ಬ್ರೂಸ್ ತನ್ನ ಹೆಂಡತಿಯ ಜಮೀನಿನಲ್ಲಿ ಅಗೆಸಲು ಪ್ರಾರಂಭಿಸುತ್ತಾನೆ. ಬ್ರೂಸ್ ಜಾಗದಲ್ಲಿ 14 ಅಡಿ ಆಳದವರೆಗೆ ಹಳ್ಳ ತೆಗೆದ. ಈ ಹಳ್ಳದಲ್ಲಿ 42 ಬಸ್ಸುಗಳನ್ನು ಹಿಂಭಾಗದ ಡೋರ್ ತೆಗೆದುಹಾಕಿ ಒಂದರ ಜೊತೆಗೆ ಒಂದು ನಿಲ್ಲುವಂತೆ ಜೋಡಿಸುತ್ತಾನೆ. 42 ಬಸ್ಸುಗಳ ಸಹಾಯದಿಂದ 14 ಅಡಿ ಆಳದಲ್ಲಿ ಭದ್ರವಾದ ಮನೆಯೊಂದನ್ನು ನಿರ್ಮಿಸುತ್ತಾನೆ. ಇದರ ಮೇಲ್ಗಡೆ ಮಣ್ಣು ಹಾಗೂ ಸಿಮೆಂಟ್ ಮುಚ್ಚಿ ಮಾಳಿಗೆಯನ್ನು ಕೂಡ ಮಾಡಿಸುತ್ತಾನೆ. ಈಗ ಬ್ರೂಸ್ ಗೆ ಈ ಮನೆಯ ಮೇಲೆ ಯಾವುದೇ ನ್ಯೂಕ್ಲಿಯರ್ ಅಸ್ತ್ರಗಳು ಬಿದ್ದರೂ ಕೂಡ ಏನು ಆಗುವುದಿಲ್ಲ ಎಂಬ ಭಾವನೆ ಮೂಡುವಂತೆ ಆಗಿತ್ತು.

ಇನ್ನು ದೂರದಿಂದ ನೋಡಿದಾಗ ಇಲ್ಲಿ ಏನಿದೆ ಎಂಬುದು ಎಲ್ಲರಿಗೂ ಕೂಡ ಗೊಂದಲ ಮೂಡಿಸುವಂತೆ ಆಗುತ್ತಿತ್ತು. ಇನ್ನು ಬ್ರೂಸ್ ಮಾಡಿರುವ ಕೆಲಸವನ್ನು ನೋಡಿ ಆತನ ಸಂಬಂಧಿಕರು ನಿನಗೆ ತಲೆ ಕೆಟ್ಟಿದೆ ಎಂಬುದಾಗಿ ಹಾಸ್ಯಸ್ಪದವಾಗಿ ನೋಡಿ ನಗುತ್ತಿದ್ದರು. ಯಾಕೆಂದರೆ ಬ್ರೂಸ್ ಈ ಜಮೀನಿನ ಕೆಳಗಡೆ ಬಂಕರ್ ಹೌಸ್ ಗಳನ್ನು ಮಾಡಿರುವುದು ಯಾರಿಗೂ ಕೂಡ ಗೊತ್ತಿರಲಿಲ್ಲ. ಇನ್ನು ಈ ಬಂಕರ್ ಹೌಸ್ ಗಳಲ್ಲಿ ಬ್ರೂಸ್ ಎರಡು ಅಡುಗೆಮನೆಗಳಲ್ಲಿ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಕೂಡ ಇರಿಸಿದ್ದ. ಈ ಮನೆಯಲ್ಲಿ ಐದು ಸಾವಿರ ಲೀಟರ್ ನೀರು ಇರುವಂತಹ ಟ್ಯಾಂಕ್ ದೊಡ್ಡ ಸ್ಟೋರ್ ರೂಮ್ ಹಾಗೂ ರೇಡಿಯೋ ಕಮ್ಯುನಿಕೇಷನ್ ಇರುವಂತಹ ಕೋಣೆಯನ್ನು ಕೂಡ ನಿರ್ಮಿಸಿದ್ದ. ಕದನದ ಸಂದರ್ಭದಲ್ಲಿ ಎಲ್ಲಾ ರೀತಿಯಲ್ಲೂ ಸಮರ್ಥವಾಗಿ ಎದುರಿಸಬಲ್ಲಂತಹ ಸಶಕ್ತ ವಾದಂತಹ ಬಂಕರ್ ಮನೆಯನ್ನು ನಿರ್ಮಿಸಿದ್ದ. ಹಲವಾರು ಬಾತ್ರೂಮ್ ಗಳು ಆಸ್ಪತ್ರೆ ಹಾಗೂ ಸೆಕ್ಯೂರಿಟಿ ಕ್ಯಾಮೆರಾ ಇರುವಂತಹ ಕೋಣೆಗಳು ಕೂಡ ಇದ್ದವು.

ಇನ್ನು ಬ್ರೂಸ್ ಒಂದು ಕೋಣೆಯಲ್ಲಿ ಕೂತು ಇಡೀ ಮನೆಯನ್ನು ಮೋನಿಟರ್ ಮಾಡುವಂತಹ ವ್ಯವಸ್ಥೆಯನ್ನು ಕೂಡ ಕಲ್ಪಿಸಿದ್ದ. ಇನ್ನು ಈ ಬಂಕರ್ ಮನೆಗೆ ಆರ್ಕ್ 2 ಹೆಸರನ್ನು ಕೂಡ ಇಟ್ಟಿದ್ದ. ಇನ್ನು ಮನೆಯನ್ನು ಹೊರಗಿನಿಂದ ನೋಡಿದರೆ ಕೇವಲ ಒಂದು ಬಾಗಿಲು ಮಾತ್ರ ಕಾಣಿಸಿಕೊಳ್ಳುತ್ತದೆ. ಇನ್ನು ಈತನ ಹೆಂಡತಿ ಹಾಗೂ ಮಗ ಕೂಡ ಈತನಿಂದ ರೋಸಿಹೋಗಿದ್ದಾರೆ. ಆದರೆ ಈತ ಹೇಳೋ ಪ್ರಕಾರ ಕದನಗಳು ಪ್ರಾರಂಭವಾದರೆ ಖಂಡಿತವಾಗಿ ನಾನು ಕಟ್ಟಿರುವ ಬಂಕರ್ ಮನೆಗಳು ಪ್ರಯೋಜನಕ್ಕೆ ಬರುತ್ತವೆ ಎಂಬುದಾಗಿ ಹೇಳುತ್ತಾನೆ. ಇನ್ನು ಇಲ್ಲಿರುವ ಒಂದು ಕೊಠಡಿಯಲ್ಲಿ ಅನಾಥ ಮಕ್ಕಳನ್ನು ಕೂಡ ನೋಡಿಕೊಳ್ಳುತ್ತಾನೆ. ಬ್ರೂಸ್ ಕಟ್ಟಿರುವ ಈ ಮನೆಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.