ಚಾಲೆಂಜಿಂಗ್ ಸ್ಟಾರ್ ದರ್ಶನ್ ಖರೀದಿಸಿರುವ ಹೊಸ ಬೈಕ್ ಬೆಲೆ ಕೇಳಿದರೆ ಬೆರಗಾಗುವುದು ಗ್ಯಾರಂಟಿ?? ಯಪ್ಪಾ ಇಷ್ಟೊಂದಾ?

580

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಕನ್ನಡ ಚಿತ್ರರಂಗದ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹೇಗೆ ಪ್ರಾಣಿಪ್ರಿಯರೋ ಹಾಗೆಯೇ ದುಬಾರಿ ಕಾರು ಹಾಗೂ ಬೈಕ್ ಗಳ ಪ್ರಿಯರು ಎಂಬುದನ್ನು ಕೂಡ ನಾವು ತಿಳಿದಿದ್ದೇವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಳಿ ಈಗಾಗಲೇ ಹಲವಾರು ವಿದೇಶಗಳಿಂದ ಇಂಪೋರ್ಟ್ ಮಾಡಿಕೊಂಡಿರುವ ದುಬಾರಿ ಕಾರು ಹಾಗೂ ಬೈಕುಗಳ ಕಲೆಕ್ಷನ್ ಇದೆ. ಒಂದು ಕಾಲದಲ್ಲಿ ಲೈಟ್ ಬಾಯ್ ಆಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗ ಕೋಟ್ಯಾಂತರ ಸಂಭಾವನೆ ಪಡೆಯುತ್ತಿರುವ ಕನ್ನಡ ಚಿತ್ರರಂಗದ ಟಾಪ್ ನಟನಾಗಿ ಮಿಂಚುತ್ತಿರುವುದು ಖಂಡಿತವಾಗಿ ಒಂದು ಸ್ಪೂರ್ತಿ ದಾಯಕ ಕಥೆ.

ಇದನ್ನು ಎಲ್ಲ ಯುವ ಜನತೆ ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಬಹುದಾಗಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಳಿ ಆಡಿ ಲ್ಯಾಂಬೋರ್ಗಿನಿ ಹಮ್ಮರ್ ಬೆಂಜ್ ರೇಂಜ್ ರೋವರ್ ಪೋರ್ಷೆ ಹೀಗೆ ಹಲವಾರು ಐಷಾರಾಮಿ ಕಾರುಗಳಿವೆ. ಇನ್ನು ಬೈಕುಗಳ ವಿಚಾರಕ್ಕೆ ಬಂದರೆ ಹಯಾಬುಸಾ ಇನ್ಫ್ರುಡರ್ ಹಾರ್ಲೆ-ಡೇವಿಡ್ಸನ್ ಡುಕಾಟಿ ಹೀಗೆ ಲಕ್ಷಾಂತರ ಬೆಲೆಬಾಳುವ ಬೈಕುಗಳ ಕಲೆಕ್ಷನ್ ಕೂಡ ಇವೆ. ಈಗ ಇತ್ತೀಚೆಗಷ್ಟೇ ಕೇಳಿಬಂದಿರುವ ಸುದ್ದಿಗಳ ಪ್ರಕಾರ ಈ ಬೈಕುಗಳ ಲಿಸ್ಟಿಗೆ ಇನ್ನೊಂದು ದುಬಾರಿ ಬೈಕ್ ಕೂಡ ಸೇರಿಕೊಂಡಿದೆ.

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋಗಳ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೊಸ ಬೈಕ್ ಖರೀದಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತ್ರಂಪ್ ರಾಕೆಟ್ 3 ಬೈಕ್ ಅನ್ನು ಖರೀದಿಸಿದ್ದಾರೆ. ಇನ್ನು ಇದರ ಬೆಲೆ ಕೇಳಿದರೆ ಖಂಡಿತವಾಗಿಯೂ ನೀವು ಕೂಡ ಬೆರಗಾಗುವುದು ಗ್ಯಾರಂಟಿ. ಹೌದು ಗೆಳೆಯರೇ ಈ ಬೈಕಿನ ಬೆಲೆ ಬರೋಬ್ಬರಿ 19 ಲಕ್ಷ ರೂಪಾಯಿಗಳು. ಡಿ ಬಾಸ್ ಇನ್ನಷ್ಟು ಹೆಚ್ಚಿನ ದುಬಾರಿ ಬೈಕ್ ಹಾಗೂ ಕಾರುಗಳನ್ನು ತೆಗೆದುಕೊಳ್ಳುವ ಶಕ್ತಿ ಆ ಭಗವಂತ ಅವರಿಗೆ ನೀಡಲಿ ಎಂದು ಹಾರೈಸೋಣ.