ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಸ ಡ್ಯಾನ್ಸ್ ಕಾರ್ಯಕ್ರಮಕ್ಕೆ ಯಾರೆಲ್ಲಾ ಬರುತ್ತಿದ್ದಾರೆ ಗೊತ್ತಾ??ತೀರ್ಪುಗಾರರು, ನಿರೂಪಕ ಯಾರು ಗೊತ್ತೇ??

1,562

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಸಿಂಗಿಂಗ್ ಕಾರ್ಯಕ್ರಮ ವಾಗಿರುವ ಎದೆತುಂಬಿ ಹಾಡುವೆನು ಕಾರ್ಯಕ್ರಮ ಅತಿಶೀಘ್ರದಲ್ಲಿ ಮುಕ್ತಾಯಗೊಳ್ಳಲಿದೆ. ಕನ್ನಡ ಕಿರುತೆರೆ ಪ್ರೇಕ್ಷಕರು ಕೇವಲ ಧಾರಾವಾಹಿಗಳು ಮತ್ತು ಸಿನಿಮಾ ಮಾತ್ರವಲ್ಲದೆ ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ಕೂಡ ಸಾಕಷ್ಟು ಇಷ್ಟಪಡುತ್ತಾರೆ. ಇನ್ನು ಅತಿಶೀಘ್ರದಲ್ಲೇ ಕಲರ್ಸ್ ಕನ್ನಡ ವಾಹಿನಿ ಹೊಸ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಯೋಜನೆಯನ್ನು ಹಾಕಿಕೊಂಡಿದ್ದಾರೆ.

ಹೌದು ಗೆಳೆಯರೇ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗುವುದಕ್ಕೆ ಸಾಕಷ್ಟು ಸಮಯಗಳು ಉಳಿದುಕೊಂಡಿದ್ದು ಅದರ ನಡುವೆ ಒಂದು ಹೊಸ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಈಗಾಗಲೇ ತೆರೆಮರೆಯ ಕಾರ್ಯಗಳು ಪೂರ್ಣಗೊಂಡಿವೆ. ಹೌದು ಕಲರ್ಸ್ ಕನ್ನಡ ವಾಹಿನಿಯವರು ಡ್ಯಾನ್ಸಿಂಗ್ ಕಾರ್ಯಕ್ರಮವೊಂದನ್ನು ಅತಿ ಶೀಘ್ರದಲ್ಲೇ ಪ್ರಾರಂಭ ಗೊಳಿಸಲಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಡ್ಯಾನ್ಸಿಂಗ್ ಚಾಂಪಿಯನ್ ಎನ್ನುವ ಹೆಸರನ್ನು ಇಡಲಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಯಾರು ನಿರೂಪಕರು ಹಾಗೂ ತೀರ್ಪುಗಾರರ ಎಂಬುದರ ಕುರಿತಂತೆ ವಿವರವನ್ನು ನಿಮಗೆ ಸಂಪೂರ್ಣವಾಗಿ ನೀಡಲಿದ್ದೇವೆ ತಪ್ಪದೇ ಓದಿ.

ಈ ಕಾರ್ಯಕ್ರಮ ಅತಿ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು ಕಾರ್ಯಕ್ರಮದ ನಿರೂಪಕರಾಗಿ ಅಕುಲ್ ಬಾಲಾಜಿ ಅಥವಾ ಅಂಕಿತ ಅಮರ್ ರವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನು ತೀರ್ಪುಗಾರರಾಗಿ ವಿಜಯ್ ರಾಘವೇಂದ್ರ ರವರ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಮಯೂರಿ ರವರು ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಕುರಿತಂತೆ ಕೂಡ ಸುದ್ದಿಗಳು ದಟ್ಟವಾಗಿವೆ. ಖಂಡಿತವಾಗಿಯೂ ಈ ಕಾರ್ಯಕ್ರಮ ನೃತ್ಯ ಪ್ರಿಯರ ಮನಸ್ಸಿಗೆ ಹಿಡಿಸುವುದು ಗ್ಯಾರಂಟಿ. ಕಿರುತೆರೆಯ ಪ್ರಿಯರಿಗೆ ಮತ್ತೊಂದು ಮನೋರಂಜನೆಯ ಮಹಾಪೂರದ ಕಾರ್ಯಕ್ರಮ ಅತಿಶೀಘ್ರದಲ್ಲೇ ಬರುವುದರಿಂದ ಪ್ರೇಕ್ಷಕರು ಕಾರ್ಯಕ್ರಮವನ್ನು ನೋಡಲು ಕಾತುರರಾಗಿದ್ದಾರೆ. ಈ ಕಾರ್ಯಕ್ರಮದ ಕುರಿತಂತೆ ನಿಮಗಿರುವ ಅನಿಸಿಕೆಗಳನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.