ಬಿಗ್ ನ್ಯೂಸ್: ಡ್ರಾಮಾ ಜೂನಿಯರ್ ನಿರೂಪಕ ಸ್ಥಾನದಿಂದ ಮಾಸ್ಟರ್ ಆನಂದ್ ರವರು ತೆಗೆದು ಮತ್ತೊಂದು ಸಿಹಿ ಸುದ್ದಿ ನೀಡಲು ಹೊರಟ ಝೀ ಕನ್ನಡ. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆ ವಾಹಿನಿಯಲ್ಲಿ ಈಗಾಗಲೇ ಹಲವಾರು ಸೂಪರ್ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಅವುಗಳಲ್ಲಿ ಮಕ್ಕಳ ಪ್ರತಿಭೆಯನ್ನು ಹೊರಜಗತ್ತಿಗೆ ಪ್ರಸ್ತುತ ಪಡಿಸುವಂತಹ ಕಾರ್ಯಕ್ರಮ ವಾಗಿರುವ ಡ್ರಾಮಾ ಜೂನಿಯರ್ಸ್ ಕೂಡ ಒಂದು. ಡ್ರಾಮಾ ಜೂನಿಯರ್ಸ್ ಮಕ್ಕಳ ಪ್ರತಿಭೆಯನ್ನು ಜೀ ಕನ್ನಡ ವಾಹಿನಿ ಕನ್ನಡ ಪ್ರೇಕ್ಷಕರಿಗೆ ತೋರಿಸಲು ಮಾಡಿದಂತಹ ಒಂದು ಅದ್ಭುತ ಕಾರ್ಯಕ್ರಮವೆಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಈ ಕಾರ್ಯಕ್ರಮವನ್ನು ನಿಮಗೆಲ್ಲರಿಗೂ ತಿಳಿದಿರುವಂತೆ ಮಾಸ್ಟರ್ ಆನಂದ್ ಅವರು ನಿರೂಪಣೆ ಮಾಡುತ್ತಿದ್ದರು.
ಮೊದಲ ಬಾರಿಗೆ ಈ ಕಾರ್ಯಕ್ರಮದ ತೀರ್ಪುಗಾರರಾಗಿ ಬಂದವರು ನಿರ್ದೇಶಕ ಟಿಎನ್ ಸೀತಾರಾಮ್ ಹಿರಿಯ ನಟಿ ಲಕ್ಷ್ಮಿ ಅಮ್ಮ ಹಾಗೂ ನಟ ವಿಜಯ್ ರಾಘವೇಂದ್ರ. ನಂತರ ಟಿಎನ್ ಸೀತಾರಾಮ್ ಅವರ ಸ್ಥಾನವನ್ನು ಮುಖ್ಯಮಂತ್ರಿ ಚಂದ್ರುರವರು ರಿಪ್ಲೇಸ್ ಮಾಡುತ್ತಾ. ನಿಮಗೆಲ್ಲರಿಗೂ ತಿಳಿದಿರುವಂತೆ ಮಹಾಮಾರಿ ಕಾರಣದಿಂದಾಗಿ 2019 ರಲ್ಲಿ ಕೊನೆಯ ಬಾರಿಗೆ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ಪ್ರಸಾರವಾಗುತ್ತದೆ. ಅದಾದ ನಂತರ ಈಗ ಎರಡು ವರ್ಷದ ವಿರಾಮದ ನಂತರ ಮತ್ತೊಮ್ಮೆ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ಅತಿ ಶೀಘ್ರದಲ್ಲೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲಾ ಪ್ರಯತ್ನಗಳು ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಈಗಾಗಲೇ ಮಕ್ಕಳನ್ನು ಆಡಿಷನ್ ಗೆ ಕೂಡ ಕರೆಯಲಾಗಿದೆ.

ಇನ್ನು ಈ ಹಿಂದೆ ನಿರೂಪಕರಾಗಿ ಕೆಲಸ ಮಾಡಿದ್ದ ಮಾಸ್ಟರ್ ಆನಂದ್ ರವರನ್ನು ಜೀ ಕನ್ನಡ ವಾಹಿನಿ ಈ ಬಾರಿ ನಿರೂಪಣೆಯ ಬದಲು ತೀರ್ಪುಗಾರರನ್ನಾಗಿ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಯಾಕೆಂದರೆ ವಿಜಯ್ ರಾಘವೇಂದ್ರ ರವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರಲಿರುವ ಡ್ಯಾನ್ಸ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಈ ಕುರಿತಂತೆ ಉತ್ತರಿಸಿರುವ ಮಾಸ್ಟರ್ ಆನಂದ್ ರವರು ಹಾಗೆಲ್ಲ ಏನು ಇಲ್ಲ ನಾನು ಈ ಬಾರಿ ಕೂಡ ನಿರೂಪಕನಾಗಿ ಕಾರ್ಯನಿರ್ವಹಿಸಲಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಇನ್ನು ಇತ್ತಕಡೆ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದಲ್ಲಿ ಅವರ ಮಗಳು ವಂಶಿಕ ಕೂಡ ಮಿಂಚುತ್ತಿರುವುದು ಇಲ್ಲಿ ನಾವು ನೆನಪಿಸಿಕೊಳ್ಳಬಹುದು.