ರೆಸ್ಟೋರೆಂಟ್ ನಲ್ಲಿ ಕೆಟ್ಟ ಬಾಯ್ಸ್ ಫ್ರೆಂಡ್ ಜೊತೆಗೆ ಸಿಕ್ಕಿಹಾಕಿಕೊಂಡಿದ್ದ ಸುಂದರಿಯನ್ನು ಅಲ್ಲಿದ್ದ ಮಹಿಳೆ ತಪ್ಪಿಸಿದ್ದು ಹೇಗೆ ಗೊತ್ತಾ??

560

ನಮಸ್ಕಾರ ಸ್ನೇಹಿತರೇ ಜೀವನ ಎನ್ನುವುದು ಖಂಡಿತವಾಗಿಯೂ ಪ್ರತಿ ಸಮಯದಲ್ಲೂ ಕೂಡ ಸುಖದ ದಾರಿಯಲ್ಲೇ ಸಾಗುವುದಿಲ್ಲ. ಕೇವಲ ಸುಖವನ್ನು ಕಂಡರೆ ಅದು ಜೀವನ ವಾಗುವುದಿಲ್ಲ ಕಷ್ಟ ಹಾಗೂ ಸುಖಗಳ ಏರಿಳಿತವೇ ಜೀವನ ಎಂದು ಹೇಳಬಹುದಾಗಿದೆ. ಇನ್ನು ಇಂದು ನಾವು ಹೇಳಹೊರಟಿರುವ ಕತೆಯೂ ಕೂಡ ಸಾಕಷ್ಟು ಇದೇ ರೀತಿಯ ಸಂದೇಶವನ್ನು ಸಾರ ಹೊರಟಿರುವ ಘಟನೆಯಾಗಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ದೊಡ್ಡ ಮಟ್ಟಿಗೆ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಏನು ನಡೆದಿದೆ ಎಂಬುದರ ಕುರಿತಂತೆ ಇಂದಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿದ್ದೇವೆ.

ರೆಸ್ಟೋರೆಂಟ್ ಒಂದರಲ್ಲಿ ಒಬ್ಬ ಹುಡುಗಿ ಅವಳಿಗಿಂತ ವಯಸ್ಸಿನಲ್ಲಿ ದೊಡ್ಡವನ ಜೊತೆಗೆ ಜೊತೆಯಾಗಿ ಕೂತ್ಕೊಂಡ್ ಇರುತ್ತಾಳೆ. ಆ ವಿಡಿಯೋದಲ್ಲಿ ನೋಡಿದ್ರೆ ಗೊತ್ತಾಗುತ್ತೆ ಆಕೆಗೆ ಆತನ ಜೊತೆಗೆ ಇರುವುದು ಇಷ್ಟವಿರುವುದಿಲ್ಲ ಎಂಬುದಾಗಿ. ಆದರೂ ಕೂಡ ಆಕೆ ಅವನ ಜೊತೆಗೆ ಬಲವಂತವಾಗಿ ಕೂತುಕೊಂಡಿರುತ್ತಾಳೆ ಎಂಬುದಾಗಿ ವಿಡಿಯೋದಲ್ಲಿ ಗೋಚರವಾಗುತ್ತದೆ. ಇನ್ನು ಆಕೆ ಆತನಿಂದ ಹೊರಬರಲು ಸಹಾಯಕ್ಕಾಗಿ ನಿರೀಕ್ಷೆಯಲ್ಲಿರುತ್ತಾರೆ. ಇನ್ನು ಅಲ್ಲಿಗೆ ಬರುವ ಮಹಿಳಾ ವೈಟರ್ ಬಳಿ ಸಹಾಯಕ್ಕಾಗಿ ಕಣ್ಣುಸನ್ನೆ ಮಾಡುತ್ತಾಳೆ.

ಆದರೆ ಆಕೆಯ ಆರ್ಡರ್ ತೆಗೆದುಕೊಂಡು ಸುಮ್ಮನೆ ಹೋಗಿಬಿಡುತ್ತಾಳೆ. ಹಲವಾರು ಬಾರಿ ಪ್ರಯತ್ನ ಮಾಡಿದ ನಂತರ ಒಂದು ಟಿಶ್ಯು ಪೇಪರ್ ನಲ್ಲಿ ತನಗೆ ಸಹಾಯ ಬೇಕು ಎಂಬುದಾಗಿ ಬರೆದು ಪೆನ್ನು ಕೆಳಗೆ ಬೀಳಿಸುವಂತೆ ನಾಟಕ ಮಾಡಿ ಆಕೆಗೆ ಆ ಪತ್ರ ತಲುಪುವಂತೆ ಮಾಡುತ್ತಾಳೆ. ಇನ್ನು ಟಿಶ್ಯೂ ಪೇಪರ್ ನಲ್ಲಿ ಇರುವುದನ್ನು ಓದಿದ ಮಹಿಳಾ ವೈಟರ್ ತನ್ನ ಮ್ಯಾನೇಜರ್ಗೆ ಇದನ್ನು ತಿಳಿಸಿ ಆತ ಪೊಲೀಸ್ ಗೆ ಕರೆ ಮಾಡುತ್ತಾನೆ. ಇನ್ನು ಇದು ವಿದೇಶದಲ್ಲಿ ನಡೆದಿರುವ ಕಥೆ ಆಗಿದೆ. ಅಲ್ಲಿಗೆ ಬಂದ ಪೊಲೀಸರು ಆಕೆಯನ್ನು ಆ ವಯಸ್ಸಾದವನಿಂದ ರಕ್ಷಿಸುತ್ತಾರೆ. ಅಲ್ಲಿ ಇದ್ದ ಸಮಯದಲ್ಲಿ ಆಕೆ ಅವನಿಂದ ಅನುಭವಿಸುತ್ತಿದ್ದ ಕಷ್ಟಗಳು ಆ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಇನ್ನು ಪೊಲೀಸರು ಬಂದು ಆತನನ್ನು ಕರೆದುಕೊಂಡು ಹೋದ ನಂತರ ಆಕೆ ಮಹಿಳಾ ವೈಟರ್ ಗೆ ಧನ್ಯವಾದ ತಿಳಿಸುವುದು ಎಲ್ಲರ ಕಣ್ಣಲ್ಲಿ ನೀರು ಬರುವಂತೆ ಮಾಡುತ್ತದೆ.