ತಂದೆಗಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡ ಹಿರಿಯ ಮಗಳಾಗಿರುವ ದೃತಿ ಏನದು ಗೊತ್ತಾ?? ಇನ್ನು ಮುಂದೆ ಇದೆ ನನ್ನ ಜೀವನ ಎಂದದ್ದು ಯಾಕೆ ಗೊತ್ತೇ??

321

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಾವು ಬದುಕಿದ್ದಷ್ಟು ದಿನ ನಿಸ್ವಾರ್ಥಿಯಾಗಿ ಪರೋಪಕಾರಿಯಾಗಿ ಬದುಕಿದವರು. ಇಂದಿಗೂ ಕೂಡ ಅವರು ಮಾಡಿರುವ ಉಪಕಾರಗಳು ಒಂದೊಂದಾಗಿ ಹೊರಗಡೆ ಬಂದು ಜನರು ಅವರ ಒಳ್ಳೆತನವನ್ನು ಸ್ಮರಿಸಿ ಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇಷ್ಟು ಒಳ್ಳೆಯವರಾಗಿ ಬದುಕಿದ್ದು ಕೇವಲ ಪುನೀತ್ ರಾಜಕುಮಾರ್ ಅವರು ಮಾತ್ರ ಎಂದು ಹೇಳುವಷ್ಟು ಸಮಾಜಕ್ಕಾಗಿ ಒಳ್ಳೆಯ ರೀತಿಯಲ್ಲಿ ಸಂದೇಶವನ್ನು ನೀಡಿದ್ದಾರೆ ನಮ್ಮೆಲ್ಲರ ನೆಚ್ಚಿನ ಅಪ್ಪು.

ಇನ್ನು ತಮ್ಮ ಕೊನೆಯ ಉಸಿರು ಚೆಲ್ಲುವಾಗಲೂ ಕೂಡ ಸಮಾಜಕ್ಕಾಗಿಯೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬದುಕಿದ್ದಾರೆ. ಹೌದು ನಿಮಗೆಲ್ಲರಿಗೂ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣಾನಂತರ ಕಣ್ಣುಗಳನ್ನು ದಾನ ಮಾಡುವುದರ ಮುಖಾಂತರ ಎರಡು ಕಣ್ಣುಗಳಿಂದ ನಾಲ್ಕು ಜನರಿಗೆ ದೃಷ್ಟಿ ಬರುವಂತೆ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಪ್ರತಿಭಾನ್ವಿತರಿಗೆ ಅವಕಾಶ ನೀಡುವ ಕಾರ್ಯವನ್ನು ಮಾಡಲು ಹೊರಟಿದ್ದರು. ಆದರೆ ಈಗ ಅವರು ತಮ್ಮ ಜೀವನದ ಪಯಣವನ್ನು ಅರ್ಧದಲ್ಲಿ ನಿಲ್ಲಿಸಿರುವುದು ಎಲ್ಲರಿಗೂ ಬೇಸರ ತರಿಸಿದೆ.

ಇನ್ನು ಇದು ಅವರ ಹಿರಿಯ ಮಗಳು ದೃತಿ ಅವರಲ್ಲಿ ಕೂಡ ದೊಡ್ಡ ಬದಲಾವಣೆಯನ್ನು ತರಿಸಿದೆ. ಅವರು ಕೂಡ ತಮ್ಮ ತಂದೆಯಂತೆ ಆಗಬೇಕು ಎಂಬ ಕಾರಣಕ್ಕಾಗಿ ಕಣ್ಣಿಲ್ಲದ ಮಕ್ಕಳನ್ನು ನೋಡಿಕೊಳ್ಳುವ ಕಾರ್ಯವನ್ನು ಕೂಡ ಮಾಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ದೃತಿ ರವರು ತಮ್ಮ ಹಾಸ್ಟೆಲ್ ಪಕ್ಕದಲ್ಲಿರುವ ಅನಾಥ ಮಕ್ಕಳನ್ನು ತಮಗೆ ನೀಡಿರುವ ಪಾಕೆಟ್ ಮನಿಯಿಂದ ನೋಡಿಕೊಳ್ಳುವ ಕಾರ್ಯವನ್ನು ಕೂಡ ಮಾಡುತ್ತಿರುವುದು ಈಗ ತಂದೆಯಂತೆ ಮಗಳು ಎಂಬ ಮಾತನ್ನು ಹೇಳಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ದೃತಿ ಅವರು ಈ ತರಹದ ಒಳ್ಳೆಯ ಕಾರ್ಯಗಳನ್ನು ಇನ್ನಷ್ಟು ಮುಂದುವರಿಸಿಕೊಂಡು ಹೋಗಲಿ ಎಂಬುದು ಅಭಿಮಾನಿಗಳ ಹಾರೈಕೆ.