ಮದುವೆಯಾದ ಮೇಲೆ ಕೂಡ ಬೇರೆರೊಬ್ಬರ ಜೊತೆ ಸಂಬಂಧ ಬೆಳೆಸಲು ಈ ಚಿಕ್ಕ ತಪ್ಪೇ ಕಾರಣ. ಕೆಟ್ಟದಾಗಿ ಆಲೋಚನೆ ಮಾಡುವ ಮುನ್ನ ಒಮ್ಮೆ ನೋಡಿ.
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲೂ ಕೂಡ ಮದುವೆಯೆನ್ನುವುದು ಬಹಳಷ್ಟು ದೊಡ್ಡ ಪಾತ್ರವನ್ನು ವಹಿಸುತ್ತದೆ ಯಾಕೆಂದರೆ ನಿಮ್ಮ ಜೀವನ ಪೂರ್ತಿ ಒಬ್ಬರ ಜೊತೆಗೆ ಬದುಕಲು ನೀವು ತೆಗೆದುಕೊಳ್ಳುವಂತಹ ಶಪಥದ ಕಾರ್ಯಕ್ರಮವೆಂದು ಮದುವೆಯನ್ನು ಅರ್ಥವತ್ತಾಗಿ ಹೇಳಬಹುದಾಗಿದೆ. ಆದರೆ ಯಾವುದೇ ಸಂಬಂಧಗಳು ಕೂಡ ಪ್ರೀತಿ ಹಾಗೂ ನಂಬಿಕೆಯ ಮೇಲೆ ನಿಂತು ಕೊಂಡಿರುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಂಬಂಧಗಳು ಕೂಡ ಅತಿ ವೇಗವಾಗಿ ಪ್ರಾರಂಭವಾದ ಕೆಲವು ಸಮಯಗಳಲ್ಲಿ ವಿಚ್ಛೇದನದ ಮೂಲಕ ಅಥವಾ ಬೇರೆ ಆಗುವುದರ ಮೂಲಕ ಅಂತ್ಯಗೊಳ್ಳುತ್ತದೆ. ಇನ್ನು ಹೆಚ್ಚಿನ ಪ್ರಕರಣಗಳಲ್ಲಿ ಬೇರೆಯ ವ್ಯಕ್ತಿಯ ಆಕರ್ಷಣೆಗೆ ಒಳಗಾಗುವುದರಿಂದ ಆಗಿಯೇ ಸಂಬಂಧಗಳು ಹಾಳಾಗುತ್ತವೆ ಎಂಬುದು ಸಾಬೀತಾಗಿದೆ. ಇಷ್ಟೊಂದು ಪ್ರೀತಿ ಹಾಗೂ ನಂಬಿಕೆ ಇದ್ದರೂ ಕೂಡ ಬೇರೆ ವ್ಯಕ್ತಿ ಕಡೆಗೆ ಆಕರ್ಷಿತರಾಗಲು ಕಾರಣಗಳೇನು ಇದರ ಕುರಿತಂತೆ ಹಾಗೂ ಇದಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತಂತೆ ಇಂದು ನಾವು ನಿಮಗೆ ಹೇಳಲು ಹೊರಟಿದ್ದೇವೆ.

ನಮ್ಮ ಹಿಂದಿನದು ಪ್ರತಿಯೊಬ್ಬ ಪುರುಷನಿಗೂ ಕೂಡ ಅಥವಾ ಮಹಿಳೆಗೂ ಕೂಡ ಹಿಂದಿನ ನೆನಪುಗಳು ಕಾಡುತ್ತಲೆ ಇರುತ್ತದೆ. ಉದಾಹರಣೆಗೆ ಪರಸ್ಪರ ಪ್ರೀತಿ ಮಾಡಿಕೊಂಡಿರುತ್ತಾರೆ ಮನೆಯವರ ಮಾತನ್ನು ಕೇಳಿ ಅವರು ತೋರಿಸಿದಂತಹ ಹುಡುಗ ಅಥವಾ ಹುಡುಗಿಯನ್ನು ಮದುವೆ ಮಾಡಿಕೊಂಡಿರುತ್ತಾರೆ. ಆದರೆ ಮದುವೆಯಾದ ಮೇಲೆ ಕೂಡ ಒಂದು ಹಂತಕ್ಕೆ ಮತ್ತೊಮ್ಮೆ ಅವರಿಗೆ ತಮ್ಮ ಹಳೆಯ ಪ್ರೀತಿಯ ನೆನಪು ಕಾಡಲು ಪ್ರಾರಂಭವಾಗುತ್ತದೆ. ಇದು ಕೂಡ ಒಂದು ಕಾರಣ. ಒಂಟಿತನದ ಭಾವನೆ ಮದುವೆ ಆದ ಮೇಲೆ ಕೂಡ ನೀವು ಗಂಡ-ಹೆಂಡಿರಾಗಿ ಭಾವನಾತ್ಮಕವಾಗಿ ಸಂಬಂಧವನ್ನು ಬಲಪಡಿಸಿಕೊಳ್ಳಬೇಕು.

ಭಾವನಾತ್ಮಕವಾಗಿ ಒಂಟಿತನ ಎನ್ನುವುದು ನಿಮ್ಮನ್ನು ಕಾಡಲು ಪ್ರಾರಂಭಿಸಿದರೆ ಖಂಡಿತವಾಗಿಯೂ ಮೂರನೇ ವ್ಯಕ್ತಿಯ ಆಸರೆಗಾಗಿ ಹಾತೊರೆಯುವುದು ರಲ್ಲಿ ಯಾವುದೇ ಅನುಮಾನವಿಲ್ಲ. ಸಂಬಂಧದಲ್ಲಿ ಬೇಸರ ಗೊಂಡಿರುವುದು ಸಂಬಂಧದಲ್ಲಿ ಪ್ರತಿಯೊಬ್ಬರು ಕೂಡ ಪರಸ್ಪರ ಇಬ್ಬರಿಗೂ ಸಮಯ ಹಾಗೂ ಪ್ರೀತಿಯನ್ನು ನೀಡಬೇಕು. ಒಂದು ವೇಳೆ ನೀವು ನಿಮ್ಮ ಕೆಲಸದಲ್ಲಿ ಮಗ್ನರಾಗಿದ್ದರೆ ನಿಮ್ಮ ಸಂಗಾತಿಗೆ ಸಮಯವನ್ನು ನೀಡದಿದ್ದರೆ ಅವರು ಖಂಡಿತವಾಗಿಯೂ ಮೂರನೇ ವ್ಯಕ್ತಿಯ ಆಶ್ರಯವನ್ನು ಹುಡುಕಿಕೊಂಡು ಹೋಗುವುದು ಗ್ಯಾರಂಟಿ.
ಜಗಳ ಜಗಳ ಎನ್ನುವುದು ಮದುವೆಯಾದಮೇಲೆ ಇದ್ದೇ ಇರುತ್ತದೆ ಆದರೆ ಅದೇ ಜೀವನವಾಗಿ ಬಿಟ್ಟರೆ ಅದರಿಂದ ರೋಸಿಹೋಗಿ ಖಂಡಿತವಾಗಿ ನಿಮ್ಮ ಸಂಗಾತಿ ಮೂರನೇ ವ್ಯಕ್ತಿಯ ಆಶ್ರಯಕ್ಕೆ ಅತ್ಯಂತ ಹತ್ತಿರವಾಗುತ್ತಾನೆ. ದೈಹಿಕ ಅವಶ್ಯಕತೆಗಳು ಇನ್ನು ಮದುವೆ ಆದ ಮೇಲೆ ಪ್ರತಿಯೊಬ್ಬರಿಗೂ ಕೂಡ ಮಾನಸಿಕ ಪ್ರೀತಿ ಜೊತೆಗೆ ದೈಹಿಕವಾದ ಪ್ರೀತಿಯು ಕೂಡ ಅಗತ್ಯವಿರುತ್ತದೆ.

ಒಂದು ವೇಳೆ ತನ್ನ ಸಂಗಾತಿಯಿಂದ ದೈಹಿಕ ಪ್ರೀತಿ ಸರಿಯಾಗಿ ಸಿಗುತ್ತಿಲ್ಲ ಎಂದು ದೃಢ ವಾದರೆ ಆತ ಮೂರನೇ ವ್ಯಕ್ತಿಯನ್ನು ದೈಹಿಕ ಪ್ರೀತಿಗಾಗಿ ಖಂಡಿತವಾಗಿಯೂ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಾರೆ ಇದರಿಂದಾಗಿ ದಾಂಪತ್ಯ ಎನ್ನುವುದು ಅರ್ಧದಲ್ಲಿ ಮುರಿದು ಹೋಗುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನವವಿವಾಹಿತರು ದಾಂಪತ್ಯ ಜೀವನವನ್ನು ನಡೆಸಿದರೆ ಖಂಡಿತವಾಗಿ ನಿಮ್ಮ ದಾಂಪತ್ಯ ಜೀವನ ಎನ್ನುವುದು ಸಾಕಷ್ಟು ಯಶಸ್ವಿಯಾಗಿ ದೀರ್ಘಕಾಲದವರೆಗೆ ನಡೆಯುತ್ತದೆ.