ಎದೆ ತುಂಬಿ ಹಾಡುವೆನು ಫಿನಾಲೆ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ ಅಭಿಮಾನಿಗಳು. ಫೈನಲ್ ನಲ್ಲಿ ಮೋಸವಾಗಿದೆಯೇ?? ಇದೇನಿದು ಹೊಸ ಸುದ್ದಿ ಏನು ಗೊತ್ತೇ??

96,478

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ವಾಹಿನಿಯಲ್ಲಿ ಹಲವಾರು ಮೌಲ್ಯಯುತ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಅದರಲ್ಲೂ ಸಿಂಗಿಂಗ್ ಕಾರ್ಯಕ್ರಮಗಳು ಕರ್ನಾಟಕ ರಾಜ್ಯದಲ್ಲಿರುವ ಪ್ರತಿಭಾವಂತ ಗಾಯಕರಿಗೆ ಒಂದು ಉತ್ತಮ ವೇದಿಕೆಯನ್ನು ನೀಡುವ ಕಾರ್ಯಕ್ರಮವಾಗಿ ರೂಪಗೊಂಡಿದೆ.

ಇನ್ನು ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಸಿಂಗಿಂಗ್ ಕಾರ್ಯಕ್ರಮವೆಂದರೆ ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಎದೆತುಂಬಿ ಹಾಡುವೆನು ಕಾರ್ಯಕ್ರಮ. ಇನ್ನು ಈ ಕಾರ್ಯಕ್ರಮವು ಕೂಡ ಈಗ ಮುಗಿದಿದ್ದು ವಿಜೇತರ ಪಟ್ಟಿ ಈಗಾಗಲೇ ಹೊರಬಂದಿದೆ. ಆದರೆ ಈ ಕಾರ್ಯಕ್ರಮವನ್ನು ಮೊದಲಿನಿಂದಲೂ ಕೂಡ ನೋಡಿಕೊಂಡು ಬರುತ್ತಿರುವ ಪ್ರೇಕ್ಷಕರು ಹೇಳುತ್ತಿರುವ ಮಾತು ಏನೆಂದರೆ ಈ ಕಾರ್ಯಕ್ರಮದಲ್ಲಿ ವಿಜೇತರ ಲಿಸ್ಟ್ ಹೇಳುವಾಗ ಮೋಸ ನಡೆದಿದೆ ಎಂಬುದಾಗಿ ಹೇಳುತ್ತಿದ್ದಾರೆ. ಹಾಗಿದ್ದರೆ ಪ್ರೇಕ್ಷಕರ ಪ್ರಕಾರ ಏನು ನಡೆದಿದೆ ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ ತಪ್ಪದೇ ಈ ಲೇಖನಿಯನ್ನು ಕೊನೆಯವರೆಗೂ ಓದಿ.

ವೀಕ್ಷಕರ ಪ್ರಕಾರ ಈ ಕಾರ್ಯಕ್ರಮವನ್ನು ನಾದಿರಾ ಭಾನು ಅಥವಾ ಸಂದೇಶ್ ರವರು ಗೆಲ್ಲಬೇಕಾಗಿತ್ತು. ಆದರೆ ನಾದಿರ ಬಾನು ಅವರು ನಾಲ್ಕನೇ ಸ್ಥಾನವನ್ನು ಹಾಗೂ ಸಂದೇಶ್ ರವರು ಎರಡನೇ ಸ್ಥಾನವನ್ನು ಪಡೆದುಕೊಂಡಿರುವುದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ, ಬಹುತೇಕ ಜನರು ಸಂದೇಶ್ ರವರು ವಿನ್ ಆಗುತ್ತಾರೆ ಎಂದು ಕೊಂಡಿದ್ದಾರೆ ಆದರೆ ಅದು ಕೂಡ ನಡೆದಿಲ್ಲ. ಇದಕ್ಕಾಗಿಯೇ ಪ್ರೇಕ್ಷಕರು ಈ ಸಿಂಗಿಂಗ್ ಶೋ ಕಾರ್ಯಕ್ರಮದಲ್ಲಿ ಮೋಸ ಮಾಡಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕಿರಣ್ ಅವರು ಮೂರನೇ ಸ್ಥಾನವನ್ನು ಪಡೆದಿದ್ದು ಚಿನ್ಮಯ್ ಜೋಶಿರವರು ಮೊದಲನೇ ಸ್ಥಾನವನ್ನು ಪಡೆದು ಕೊಂಡಿದ್ದಾರೆ. ನಿಮ್ಮ ಪ್ರಕಾರ ಈ ಕಾರ್ಯಕ್ರಮದಲ್ಲಿ ಮೋಸ ನಡೆದಿದೆಯಾ ಅಥವಾ ನಿಜವಾಗಿಯೂ ನ್ಯಾಯವಾದ ತೀರ್ಪು ಬಂದಿದೆಯಾ ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.