ಅಪ್ಪಿ ತಪ್ಪಿಯೂ ಗಾಳಿ ಸುದ್ದಿ ಕೇಳಬೇಡಿ, ಕರುನಾಡ ರತ್ನ ಕಾರ್ಯಕ್ರಮಕ್ಕಾಗಿ ಅನುಶ್ರೀ ಅವರು ನಿಜವಾಗಲೂ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ??

2,082

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವು ಕಳೆದುಕೊಂಡು ಈಗಾಗಲೆ ಹಲವಾರು ದಿನಗಳು ಕಳೆದರೂ ಕೂಡ ಅವರ ನೆನಪು ಸವಿ ನೆನಪಾಗಿದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಮ್ಮನ್ನೆಲ್ಲ ಬಿಟ್ಟು ಹೋದ ನಂತರ ಅವರನ್ನು ನೆನಪಿಸುವ ಹಾಗೂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಹಲವಾರು ಕಾರ್ಯಕ್ರಮಗಳು ನಡೆದಿದ್ದಾವೆ. ಇನ್ನು ಇಲ್ಲ ಇತ್ತೀಚೆಗಷ್ಟೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಕರುನಾಡ ರತ್ನ ಕಾರ್ಯಕ್ರಮ ನಡೆದಿತ್ತು.

ಈ ಕಾರ್ಯಕ್ರಮದಲ್ಲಿ ರಾಜಕುಟುಂಬ ಸೇರಿದಂತೆ ಕನ್ನಡ ಚಿತ್ರರಂಗದ ಹಲವಾರು ಗಣ್ಯರು ಗಣ್ಯರು ಭಾಗವಹಿಸಿದ್ದರು. ಕಿರುತೆರೆಯ ನಟ ಹಾಗೂ ನಟಿಯರು ಕೂಡ ಭಾಗವಹಿಸಿದ್ದರು. ತಮ್ಮ ಜೀವಿತಾವಧಿಯ 46 ವರ್ಷಗಳನ್ನು ಕೂಡ ಚಿತ್ರರಂಗದಲ್ಲಿ ಕಳೆದಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಸ್ಮರಿಸುವ ಕಾರ್ಯಕ್ರಮ ಸಮಾರಂಭದಲ್ಲಿ ನಡೆಯಿತು. ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ರವರ ಉತ್ತರಾಧಿಕಾರಿಯಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟನಾಗಿದ್ದರು ನಮ್ಮ ಅಪ್ಪು. ಇನ್ನು ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದು ನಮ್ಮ ಅನುಶ್ರೀ ಅವರು.

ನಿಮಗೆಲ್ಲರಿಗೂ ತಿಳಿದಿರುವಂತೆ ಅನುಶ್ರೀ ಅವರು ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು ಕೂಡ 80 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಸಂಭಾವನೆಯನ್ನು ಪಡೆಯುತ್ತಾರೆ. ಇನ್ನು ಕರುನಾಡ ರತ್ನ ಕಾರ್ಯಕ್ರಮವನ್ನು ನಿರೂಪಣೆ ಮಾಡಿರುವ ಅನುಶ್ರೀ ಅವರು ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ. 0 ರೂಪಾಯಿ ಸ್ನೇಹಿತರೆ. ಹೌದು ಗೆಳೆಯರೇ ಅನುಶ್ರೀ ಅವರು ಒಂದು ರೂಪಾಯಿ ಸಂಭಾವನೆ ನ್ನು ಕೂಡ ಈ ಕಾರ್ಯಕ್ರಮಕ್ಕಾಗಿ ಪಡೆದುಕೊಂಡಿಲ್ಲ. ಅನುಶ್ರೀ ಅವರು ಬಾಲ್ಯದಿಂದಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿರುವ ದುಃಖ ಅನುಶ್ರೀ ಅವರಲ್ಲಿ ಆಳವಾಗಿದೆ. ಇದೇ ಕಾರಣದಿಂದಾಗಿ ಈ ಕಾರ್ಯಕ್ರಮಕ್ಕೆ ಬಿಡಿಗಾಸು ಕೂಡ ಸಂಭಾವನೆಯಾಗಿ ಪಡೆದುಕೊಂಡಿಲ್ಲ.