ಯಾರು ಏನು ಹೇಳಿದರೂ ಕೊಹ್ಲಿ ಕೈ ಬಿಡದ ಆರ್ಸಿಬಿ. ತಂಡದಲ್ಲಿ ಉಳಿಸಿಕೊಂಡ ನಂತರ ಮತ್ತೊಂದು ಸಿಹಿ ಸುದ್ದಿ ನೀಡಲು ತಯಾರಿ ಏನಂತೆ ಗೊತ್ತೆ??

1,209

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ತಂಡ. ಆದರೇ ಎರಡು ಭಾರಿ ಫೈನಲ್ ತಲುಪಿದ್ದ ತಂಡ, ಒಮ್ಮೆಯೂ ಕಪ್ ಗೆದ್ದಿಲ್ಲ. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಕೆವಿನ್ ಪೀಟರ್ಸನ್, ಡೇನಿಯಲ್ ವೆಟೋರಿ ನಂತರ ಆರ್ಸಿಬಿ ತಂಡದ ನಾಯಕರಾಗಿದ್ದು ವಿರಾಟ್ ಕೊಹ್ಲಿ. ಆರೇಳು ಸೀಸನ್ ಗಳಿಂದ ವಿರಾಟ್ ನಾಯಕರಾದರೂ, ಆರ್ಸಿಬಿಯ ಕಪ್ ಗೆಲ್ಲುವ ಕನಸು ನನಸಾಗುತ್ತಿಲ್ಲ. ಕಳೆದ ಭಾರಿ ಧೀಢಿರಂತ ಆರ್ಸಿಬಿಯ ನಾಯಕ ವಿರಾಟ್ ಕೊಹ್ಲಿ ಇನ್ಮುಂದೆ ನಾನು ಆರ್ಸಿಬಿಯ ನಾಯಕನಾಗಿ ಮುಂದುವರೆಯುವುದಿಲ್ಲ.

ನನಗೆ ಟೀಮ್ ಇಂಡಿಯಾ ನಾಯಕನಾಗಿ ಟೆನ್ಶನ್ ಇದೆ. ಆ ಟೆನ್ಶನ್ ನಿಂದ ನನ್ನ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ನಾಯಕತ್ವ ತೊರೆಯುತ್ತಿದ್ದೇನೆ ಎಂದು ಹೇಳಿದ್ದರು. ಆದರೇ ಬದಲಾದ ಸನ್ನಿವೇಶದಲ್ಲಿ ವಿರಾಟ್ ಕೊಹ್ಲಿ ತಾವಾಗಿಯೇ ಭಾರತ ಟಿ 20 ತಂಡದ ನಾಯಕತ್ವದಿಂದ ಹಿಂದೆ ಸರಿದರು. ಬಿಸಿಸಿಐ ವಿರಾಟ್ ರನ್ನ ಏಕದಿನ ನಾಯಕತ್ವದಿಂದ ಕೆಳಗಿಳಿಸಿತು. ಸದ್ಯ ವಿರಾಟ್ ಕೇವಲ ಟೆಸ್ಟ್ ತಂಡಕ್ಕೆ ಮಾತ್ರ ನಾಯಕರು. ಹೀಗಾಗಿ ವಿರಾಟ್ ಮೇಲಿನ ಟೆನ್ಶನ್ ಸ್ವಲ್ಪ ಕಡಿಮೆ ಆಗಿದೆ. ಹಾಗಾಗಿ ವಿರಾಟ್ ಕೊಹ್ಲಿಯವರೇ ಪುನಃ ಆರ್ಸಿಬಿ ತಂಡದ ನಾಯಕರಾದರೇ ಒಳಿತು ಎಂಬ ಸಲಹೆ ರೂಪದ ಸೂಚನೆಯನ್ನ ಆರ್ಸಿಬಿ ಮ್ಯಾನೇಜ್ ಮೆಂಟ್ ವಿರಾಟ್ ಗೆ ತಿಳಿಸಿದೆಯಂತೆ. ತಮ್ಮ ರಾಜೀನಾಮೆಯನ್ನ ಮತ್ತೊಮ್ಮೆ ಪರಿಶೀಲಿಸಿ ಎಂದು ವಿನಂತಿಸಿಕೊಂಡಿದೆ.

ಸದ್ಯ ಹೊಸ ನಾಯಕ ಬಂದು ಆರ್ಸಿಬಿ ತಂಡವನ್ನ ಕಟ್ಟಲು ವಿರಾಟ್ ನೆರವು ನೀಡಿದರೂ ಅದಕ್ಕೆ ಸಮಯ ಹಿಡಿಯುತ್ತದೆ. ಅದರ ಬದಲು ವಿರಾಟ್ ಕೊಹ್ಲಿಯವರೇ ಪುನಃ ತಂಡದ ನಾಯಕರಾಗಿ ಆರ್ಸಿಬಿ ತಂಡವನ್ನು ಮುನ್ನಡಸೆವುದು ಸೂಕ್ತ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ‌. ಆಟಗಾರರ ಹರಾಜು ಪ್ರಕ್ರಿಯೆ ಜನೇವರಿ ಎರಡನೇ ವಾರದಲ್ಲಿ ನಡೆಯಲಿದ್ದು, ಅದು ಮುಗಿದ ನಂತರ ವಿರಾಟ್ ಆರ್ಸಿಬಿ ನಾಯಕತ್ವದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರಂತೆ. ವಿರಾಟ್ ರನ್ನೇ ಮತ್ತೆ ನಾಯಕನನ್ನಾಗಿ ನೇಮಿಸುವುದರ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.