ಕನ್ನಡತಿಯಲ್ಲಿ ಮತ್ತೊಂದು ಮಹತ್ವದ ಟ್ವಿಸ್ಟ್, ಸಪ್ಪೆಯಾಗಿದ್ದ ಕಥೆಗೆ ಬಾರಿ ಟ್ವಿಸ್ಟ್ ನೀಡಲು ಮುಂದಾದ ಕನ್ನಡತಿ. ಏನು ಗೊತ್ತೇ??

15,858

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಿರುತೆರೆಯ ಧಾರವಾಹಿಗಳು ಯಾವ ಮಟ್ಟಿಗೆ ಪ್ರೇಕ್ಷಕರನ್ನು ಹಿಡಿದುಕೊಂಡಿವೆ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಪ್ರತಿಯೊಂದು ವಾಹಿನಿಯವರು ಕೂಡ ಸ್ಪರ್ಧೆಗೆ ಬಿದ್ದವರಂತೆ ಒಳ್ಳೆಯ ಕಂಟೆಂಟ್ ಇರುವ ಧಾರಾವಾಹಿಗಳನ್ನು ಪ್ರಸಾರ ಮಾಡಲು ಪ್ರಾರಂಭಿಸಿದ್ದಾರೆ. ಇದರಲ್ಲಿ ಇಂದು ನಾವು ಮಾತನಾಡಲು ಹೊರಟಿರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯ ಕುರಿತಂತೆ.

ಕನ್ನಡತಿ ಧಾರಾವಾಹಿ ಎಂದಾಕ್ಷಣ ನಮಗೆ ನೆನಪಾಗುವುದು ಕಿರಣ್ ರಾಜ್ ಹಾಗೂ ರಂಜನಿ ರಾಘವನ್. ಹರ್ಷನ ಪಾತ್ರದಲ್ಲಿ ಕಿರಣ್ ರಾಜ್ ಹಾಗೂ ರಂಜಿನಿ ರಾಘವೇಂದ್ರರವರು ಭುವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇದು ದಿನದಿಂದ ದಿನಕ್ಕೆ ಹಲವಾರು ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಪ್ರೇಕ್ಷಕರಿಗೆ ಹರ್ಷನ ಪ್ರೀತಿಯನ್ನು ಭೂಮಿ ಒಪ್ಪಿಕೊಳ್ಳಬೇಕೆನ್ನುವುದಾಗಿ ಆಸೆ. ಆದರೆ ಹರ್ಷನನ್ನು ಪ್ರೀತಿಸುವ ವರುದಿನಿ ಕೂಡ ಭುವಿಯ ಕ್ಲೋಸ್ ಫ್ರೆಂಡ್. ಹೀಗಾಗಿ ಹರ್ಷನ ಪ್ರೀತಿಯನ್ನು ಒಪ್ಪಿಕೊಳ್ಳಲು ಭುವಿಗೆ ಸಾಧ್ಯವಾಗುತ್ತಿಲ್ಲ. ಆದರೆ ಭುವಿಯನ್ನು ಹೊರತುಪಡಿಸಿ ಹರ್ಷ ಬೇರೆ ಯಾರನ್ನೂ ಕೂಡ ಪ್ರೀತಿಸುವುದಿಲ್ಲ ಎಂಬುದು ಕೂಡ ಸತ್ಯ. ಇತ್ತೀಚಿಗಷ್ಟೇ ಹರ್ಷನ ಪ್ರೀತಿಗೆ ಭುವಿ ಒಪ್ಪಬಹುದು ಎಂಬ ಮಾತುಗಳು ವೀಕ್ಷಕರ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಕೂಡ ಇದೆ. ಬನ್ನಿ ಅದರ ಕುರಿತಂತೆ ನಿಮಗೆ ಹೇಳುತ್ತೇವೆ.

ವರುದಿನಿ ಗಾಗಿ ಭುವಿ ಹರ್ಷನ ಪ್ರೀತಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದರು ಕೂಡ. ಅವಳ ಮನಸ್ಸಿನಲ್ಲಿ ಹರ್ಷ ನಿಗಾಗಿ ಕಾಳಜಿಯಂತೂ ಸ್ನೇಹಕ್ಕಿಂತ ಹೆಚ್ಚಾಗಿದೆ. ಇನ್ನು ಇತ್ತೀಚಿಗಷ್ಟೇ ರಾಣಿಘಡಕ್ಕೆ ಕಚೇರಿಯ ಕೆಲಸಕ್ಕಾಗಿ ಹೋದಂತಹ ಇವರಿಬ್ಬರ ನಡುವೆ ಸ್ನೇಹ ಕಿಂತಲು ಮಿಗಿಲಾದಂತಹ ಸಂಬಂಧ ಇದೆ ಎಂಬುದು ತಿಳಿದು ಬಂದಿದೆ. ಇನ್ನು ಹರ್ಷನ ಮದುವೆಯನ್ನು ಮೂರು ತಿಂಗಳ ಒಳಗೆ ಅವನ ತಾಯಿಯಾಗಿರುವ ರತ್ನಮಾಲಾ ರವರು ಮಾಡಲು ನಿರ್ಧರಿಸಿದ್ದು ಸದ್ಯದಲ್ಲೇ ದರ್ಶನ ಪ್ರೀತಿಯನ್ನು ಭುವಿ ಒಪ್ಪಿ ಇವರಿಬ್ಬರು ಮದುವೆಯಾಗುತ್ತಾರೆ ಎಂಬುದಾಗಿ ಪ್ರೇಕ್ಷಕರು ನಿರೀಕ್ಷೆ ಮಾಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.